ಮುಚ್ಚಿದ ಹೋಟೆಲ್, ತಿಂಡಿ ಗಾಡಿಗೆ ತೆರೆದ ಅದೃಷ್ಟ
Team Udayavani, May 31, 2017, 12:57 PM IST
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಸಾಮನ್ಯ ಹೋಟೆಲ್‌ಗಳಿಗೆ ದುಬಾರಿ ತೆರಿಗೆ ವಿಧಿಸಿರುವುದನ್ನು ಖಂಡಿಸಿ, ಕರೆ ನೀಡದ್ದ ಹೋಟೆಲ್‌ಗಳ ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಹುತೇಕ ಹೋಟೆಲ್‌ಗಳು ಬೆಳಗ್ಗೆ 5ರಿಂದ ರಾತ್ರಿ 11 ಗಂಟೆವರೆಗೆ ಮುಚ್ಚಿದ್ದರಿಂದ ಸಾರ್ವಜನಿಕರು ತಿಂಡಿ, ಊಟಕ್ಕೆ ಪರದಾಡಿದರು. ಕಚೇರಿ, ಮಾರ್ಕೆಂಟಿಂಗ್ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರು, ಮಧ್ಯಮ ವರ್ಗದ ಸಂಸ್ಥೆಗಳ ಕೆಲಸಗಾರರು ಮತ್ತು ಊಟ, ತಿಂಡಿಗಾಗಿ ಹೋಟೆಲ್‌ಗಳನ್ನೇ ನಂಬಿಕೊಂಡಿದ್ದ ಜನ ಸಾಮಾನ್ಯರಿಗೆ ಅಲೆದಾಟ ತಪ್ಪಲಿಲ್ಲ.
ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿರುವ ಸಣ್ಣಪುಟ್ಟ ಹೋಟೆಲ್, ತಳ್ಳುಗಾಡಿಯ ಊಟ ಹೊರತುಪಡಿಸಿ, ಸಾಮಾನ್ಯ ಹಾಗೂ ಮಧ್ಯಮ ವರ್ಗದ ಯಾವ ಹೋಟೆಲ್ ಕೂಡ ತೆರೆದಿರಲಿಲ್ಲ. ನಗರದಲ್ಲಿ ಪ್ರತಿ ದಿನ 25 ಲಕ್ಷ ಜನ ಹೊಟೇಲ್ ಊಟ, ತಿಂಡಿ ಅವಲಂಬಿಸಿರುವ ಅಂದಾಜಿದ್ದು, 3 ಸಾವಿರಕ್ಕೂ ಅಧಿಕ ಹೊಟೇಲ್ ಹಾಗೂ ಲಾಡ್ಜ್ಗಳು ಸಂಪೂರ್ಣ ಬಂದ್ ಆಗಿದ್ದರಿಂದ ಉದ್ಯಮಕ್ಕೆ ಸುಮಾರು 10 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಹೋಟೆಲ್, ರೆಸ್ಟೋರೆಂಟ್ ಹಾಗೂ ಲಾಡ್ಜ್ ಮಾಲೀಕರು ಬಂದ್‌ನಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ನಗರದ ಶೇಷಾದ್ರಿಪರ, ಮಲ್ಲೇಶ್ವರ, ಶಿವಾನಂದ ವೃತ್ತ, ಕಾರ್ಪೊರೇಷನ್, ಚಾಮರಾಜಪೇಟೆ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಯಶವಂತಪುರ, ಇಂದಿರಾನಗರ ಸೇರಿ ಹಲವೆಡೆ ತಳ್ಳು ಗಾಡಿಯವರಿಗೆ ಭರ್ಜರಿ ವ್ಯಾಪಾರವಾಯಿತು.
ನಗರದ ಪ್ರಸಿದ್ಧ ಹೋಟೆಲ್‌ಗಳು ಬಂದ್‌ಗೆ ಬೆಂಬಲ ನೀಡಿದರೆ, ಕೆಲ ಪ್ರತಿಷ್ಠಿತ, ಸಾಮಾನ್ಯ ಮತ್ತು ಮಧ್ಯಮ ದರ್ಜೆ ಹೋಟೆಲ್‌ಗಳು ತೆರೆದಿದ್ದವು. ಬೀದಿ ಬದಿ ವ್ಯಾಪಾರಿಗಳು ನಿತ್ಯ 20-30 ರೂ.ಗೆ ನೀಡುತ್ತಿದ್ದ ಊಟವನ್ನು ಮಂಗಳವಾರ 50 ರೂ.ಗಳಿಗೆ ಮಾರಟ ಮಾಡಿ ಲಾಭ ಗಳಿಸಿದರು.
ಪ್ರತಿಭಟನೆ: ಜಿಎಸ್‌ಟಿಯಲ್ಲಿ ದುಬಾರಿ ತೆರಿಗೆ ವಿರೋಧಿಸಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ವತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಘದ ವ್ಯಾಪ್ತಿಯ ಸುಮಾರು 3000 ಹೋಟೆಲ್ ಮಾಲೀಕರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು, ತೆರಿಗೆ ವಿನಾಯ್ತಿಗೆ ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಜಯ ಕರ್ನಾಟಕ ಸಂಘಟನೆ ಪ್ರತಿನಿಧಿಗಳೂ ಹೋರಾಟಕ್ಕೆ ಸಾಥ್ ನೀಡಿದರು. ಮೈಸೂರ್ ಬ್ಯಾಂಕ್ ವೃತ್ತದಿಂದ ಟೌನ್‌ಹಾಲ್‌ವರೆಗೆ ಜಾಥಾ ಹೊರಟು, ಬಹಿರಂಗ ಸಭೆಯೊಂದಿಗೆ ಪ್ರತಿಭಟನೆ ಸಂಪನ್ನಗೊಂಡಿತು. ಸಂಘದ ಅಧ್ಯಕ್ಷ ಬಿ. ಚಂದ್ರಶೇಖರ ಹೆಬ್ಟಾರ್ ಮಾತನಾಡಿ, ಕೇಂದ್ರ ಸರ್ಕಾರದ ಜಿಎಸ್‌ಟಿ ಕಾಯ್ದೆಯಲ್ಲಿ ಹೋಟೆಲ್‌ಗಳ ಮೇಲೆ ದುಬಾರಿ ತೆರಿಗೆ ವಿಧಿಸಲಾಗಿದೆ. ಸದ್ಯ ಶೇ.4ರಷ್ಟು ತೆರಿಗೆ ಇದ್ದರೂ, ಗ್ರಾಹಕರಿಗೆ ಹೊರೆಯಾಗದಂತೆ ಆಹಾರ ವಿತರಣೆ ಮಾಡುತ್ತಿದ್ದೇವೆ.
ಕೇಂದ್ರ ಸರ್ಕಾರ ಜಿಎಸ್‌ಟಿ ಮೂಲಕ ಎಸಿ ಹೋಟೆಲ್‌ಗಳಿಗೆ ಶೇ.18 ಹಾಗೂ ನಾನ್ ಎಸಿ ಹೋಟೆಲ್‌ಗಳಿಗೆ ಶೇ.12ರಷ್ಟು ತೆರಿಗೆ ವಿಧಿಸುತ್ತಿರುವುದು ಸರಿಯಲ್ಲ. ಇದರಿಂದ ಗ್ರಾಹಕರಿಗೆ ನೇರ ಹೊರೆಯಾಗಲಿದೆ ಹಾಗೂ ಹೋಟೆಲ್ ನಷ್ಟದಲ್ಲಿ ನಡೆಸಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ದುಬಾರಿ ತೆರಿಗೆ ರದ್ದು ಮಾಡಿ, ಏಕರೂಪ ತೆರಿಗೆ ಪದ್ಧತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಬೆಳಗ್ಗೆ 10 ಗಂಟೆಗೆ ಮನೆ ಬಿಟ್ಟರೆ ಮನೆ ಸೇರುವುದು ರಾತ್ರಿಯೇ. ಹೀಗಾಗಿ ಮಧ್ಯಾಹ್ನದ ಊಟಕ್ಕೆ ಹೋಟೆಲ್‌ಗಳನ್ನೇ ಅವಲಂಬಿಸಿದ್ದೆ. ಮಂಗಳವಾರ ಹೋಟೆಲ್ ಬಂದ್ ಹೆಚ್ಚು ಬೆಲೆ ನೀಡಿ ತಳ್ಳು ಗಾಡಿಯಲ್ಲಿ ಊಟ ಮಾಡಬೇಕಾಯಿತು.
-ರವಿ, ಖಾಸಗಿ ಸಂಸ್ಥೆ ಉದ್ಯೋಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.