ಔಷಧ ವ್ಯಾಪಾರಿಗಳ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ
Team Udayavani, May 31, 2017, 12:56 PM IST
ಬೆಂಗಳೂರು: ಆನ್ಲೈನ್ನಲ್ಲಿ ಔಷಧ ವ್ಯಾಪಾರ ಮಾಡುವುದನ್ನು ಖಂಡಿಸಿ ಮಂಗಳವಾರ ಔಷಧ ವ್ಯಾಪಾರಿಗಳು ನಡೆಸಿದ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆನ್ಲೈನ್ ಮೂಲಕ ಔಷಧ ಮಾರಾಟಕ್ಕೆ ನೀಡಿರುವ ಅವಕಾಶ ರದ್ದುಪಡಿಸಬೇಕು.
ವೈದ್ಯರು ನೀಡುವ ಔಷಧ ಚೀಟಿಯನ್ನು ಔಷಧ ಮಳಿಗೆಯ ಸಿಬ್ಬಂದಿ ಸ್ಕ್ಯಾನ್ ಮಾಡಿ ಸೆಂಟ್ರಲ್ ಇ-ಪೋರ್ಟಲ್ಗೆ ಅಪ್ಲೋಡ್ ಮಾಡಬೇಕೆಂಬ ನಿರ್ಧಾರದಿಂದ ಔಷಧ ಮಳಿಗೆ ಸಿಬ್ಬಂದಿಗೆ ಹೊರೆಯಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಅಖೀಲ ಭಾರತ ಔಷಧ ವ್ಯಾಪರಿಗಳ ಸಂಘನೆಗಳು ದೇಶಾದ್ಯಂತ ಬಂದ್ಗೆ ಕರೆ ನೀಡಿದ್ದವು. ಇದಕ್ಕೆ ರಾಜ್ಯದ ಔಷಧ ವ್ಯಾಪಾರಿಗಳ ಸಂಘ ಸೇರಿದಂತೆ ಬೆಂಗಳೂರು ನಗರದ ಔಷಧ ವ್ಯಾಪಾರಿಗಳು ಬೆಂಬಲ ವ್ಯಕ್ತಪಡಿಸಿದ್ದರು.
ಬೆಂಗಳೂರಿನ 8500 ಖಾಸಗಿ ಔಷಧಾಲಯ ಸೇರಿದಂತೆ ರಾಜ್ಯದ 28 ಸಾವಿರಕ್ಕೂ ಅಧಿಕ ಔಷಧಾಲಯ ಸಂಪೂರ್ಣ ಮುಚ್ಚಿದ್ದರಿಂದ ತುರ್ತು ಔಷಧಕ್ಕಾಗಿ ಕೆಲವೆಡೆ ಸಾರ್ವಜನಿಕರು ಪರದಾಡಿದರು. ಸರ್ಕಾರಿ ಆಸ್ಪತ್ರೆಯೊಂದಿಗೆ ಸೇರಿಕೊಂಡಿರುವ ಔಷಧಾಲಯಗಳು, ಖಾಸಗಿ ಆಸ್ಪತ್ರೆಯ ಔಷಧಾಲಯಗಳು ಎಂದಿನಂತೆ ತೆರೆದಿದ್ದವು. ಆಸ್ಪತ್ರೆಯಿಂದ ಪ್ರತ್ಯೇಕ ಇರುವ ಖಾಸಗಿ ಔಷಧಾಲಯಗಳು ಮಾತ್ರ ಮುಚ್ಚಿದ್ದವು.
ಔಷಧ ವ್ಯಾಪಾರಿಗಳ ಪ್ರತಿಭಟನೆಯಿಂದ ಜನ ಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರವೇ ಕೆಲವು ಪರ್ಯಾಯ ವ್ಯವಸ್ಥೆ ಮಾಡಿತ್ತು. ಬೆಂಗಳೂರಿನ 6 ವಿಭಾಗಗಳಲ್ಲಿ ನೋಡಲ… ಅಧಿಕಾರಿಗಳ ನೇಮಕ ಮಾಡಿದ್ದು, ತುರ್ತು ಸಹಾಯ ವಾಣಿ ನೆರವು ಕಲ್ಪಿಸಿತ್ತು. ಹಾಗೇ ಸರ್ಕಾರಿ ಆಸ್ಪತ್ರೆಯ ಹೊರ ಭಾಗದಲ್ಲಿ ಔಷಧ ಮಾರಾಟಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದರು. ಬುಧವಾರದಿಂದ ಎಂದಿನಂತೆ ಔಷಧ ಅಂಗಡಿಗಳು ತೆರೆದಿರುತ್ತವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.