ವೈಭವದ ವೈಕುಂಠ ಏಕಾದಶಿ
Team Udayavani, Dec 19, 2018, 12:25 PM IST
ಮಹದೇವಪುರ: ವೈಕುಂಠ ಏಕಾದಶಿ ಹಾಗೂ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಕುಂದಲಹಳ್ಳಿ ಬಿಇಎಂಎಲ್ ಬಡಾವಣೆಯಲ್ಲಿರುವ ಶ್ರೀಭೂನೀಳಾ ಸಮೇತ ಶ್ರೀ ವೆಂಕಟರಮಣಸ್ವಾಮಿಗೆ ಪ್ರಾತಃಕಾಲ ಪೂಜೆ ನಡೆಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ದೇವರ ದರ್ಶನ ಪಡೆದರು.
ವೆಂಕಟರಮಣ ಸ್ವಾಮಿಗೆ ಬೆಳಗ್ಗೆ ಎರಡು ಗಂಟೆಯಿಂದ ಸುಪ್ರಭಾತ ಸೇವೆ, ಶ್ರೀ ವಿಷ್ಣುಸಹಸ್ರನಾಮ, ಪಂಚಾಮೃತಾಭಿಷೇಕ ವಿವಿಧ ಸೇವೆ ಜರುಗಿದವು. ಕುಂದಲಹಳ್ಳಿ. ಎಇಸಿಎಸ್, ಬಿಇಎಂಎಲ್ ಬಡವಾಣೆ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ದೇಗುಲಕ್ಕೆ ಆಗಮಿಸಿ ದೇವ ದರ್ಶನ ಪಡೆದರು. ಭಕ್ತರಿಗೆ ಲಾಡು ಪ್ರಸಾದ ನೀಡಲಾಯಿತು.
ಹರಿಪ್ರಿಯ ಭಜನಾ ಮಂಡಳಿಯವರಿಂದ ದೇಗುಲದ ಆವರಣದಲ್ಲಿ ಭಕ್ತಿಗೀತೆ,ಭಜನೆ ಸೇವೆ ನಡೆಯಿತು. ಧರ್ಮದರ್ಶಿ ಎಸ್. ಜಯರಾಮ್, ಪಾಲಿಕೆ ಸದಸ್ಯೆ ಶ್ವೇತಾವಿಜಯ್‌ಕುಮಾರ್, ಮುಖಂಡರಾದ ಕೇಶವರೆಡ್ಡಿ ಇತರರಿದ್ದರು.