ಶ್ರೀಗಂಧ ಮರ ಕಳವು ಹೆಚ್ಚಿರುವುದು ಸರ್ಕಾರಕ್ಕೆಗೊತ್ತಿದೆ!
Team Udayavani, Jun 8, 2017, 12:27 PM IST
ವಿಧಾನ ಪರಿಷತ್ತು: ಶಿರಸಿ ಅರಣ್ಯ ವಲಯದಲ್ಲಿ ಶ್ರೀಗಂಧದ ಮರಗಳು ಕಳವಾಗುತ್ತಿರುವುದು ಸರ್ಕಾರಕ್ಕೆ ಗೊತ್ತಿದೆ!
ಈ ಉತ್ತರ ನೀಡಿದವರು ಸ್ವತಃ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಮಾನಾಥ ರೈ. ಕಾಂಗ್ರೆಸ್‌ನ ಎಸ್.ಎಲ್. ಘೋಕ್ಲೃಕರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಶಿರಸಿ ಅರಣ್ಯ ವಲಯದ ಹೊನ್ನೆಗದ್ದೆ, ನೀರನ್ನಳ್ಳಿ, ಶೀಗೇಹಳ್ಳಿ ಇಟಗುಳಿ ಭಾಗಗಳಲ್ಲಿ ಶ್ರೀಗಂಧದ ಮರಗಳು ಕಳವಾಗುತ್ತಿರುವುದು ಗಮನಕ್ಕೆ ಬಂದಿದೆ.
ಶೀಗೇಹಳ್ಳಿ ಇಟಗುಳಿ ಭಾಗದಲ್ಲಿ 2014-15ರಲ್ಲಿ ಎರಡು ಹಾಗೂ 2016-17ರಲ್ಲಿ ಒಂದು ಶ್ರೀಗಂಧದ ಮರ ಕಳವಾಗಿದೆ.
ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗ ಳೊಂದಿಗೂ ಚರ್ಚಿಸಲಾಗುವುದು ಎಂದು ಹೇಳಿದರು.
ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಘೋಕ್ಲೃಕರ್, “ಶ್ರೀಗಂಧ ಕಳ್ಳತನ ಹೆಚ್ಚುತ್ತಿದ್ದು, ಕಳ್ಳರನ್ನು ಬಂಧಿಸುತ್ತಿಲ್ಲ. ಹಳಿಯಾಳದಲ್ಲಿ ಡಿಎಫ್ಒ ನಿವಾಸದ ಆವರಣದಲ್ಲಿ ಶ್ರೀಗಂಧ ಮರ ಕದ್ದವರನ್ನೇ ಇದುವರೆಗೆ ಪತ್ತೆ ಹಚ್ಚಿಲ್ಲ. ಮರ ಕಳವು ನಿಯಂತ್ರಿಸದ ಅರಣ್ಯ ಅಧಿಕಾರಿಗಳು ಗಿಡ ನೆಡುವುದು, ಕಂದಕ ನಿರ್ಮಿಸುವಂತಹ ಸಿವಿಲ್ ಕಾಮಗಾರಿಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದು ಇತರೆ ಜವಾಬ್ದಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿ ವರ್ಷ ನೆಟ್ಟ ಗಿಡ ಎಲ್ಲಿ ಹೋಗುತ್ತವೆ…?
ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ನೆಡಲಾಗುತ್ತಿದ್ದರೂ ಅವು ಇರುವಂತೆ ಕಾಣುತ್ತಿಲ್ಲ. ಪ್ರತಿ ವರ್ಷ ನೆಟ್ಟ ಜಾಗದಲ್ಲೇ
ಸಸಿಗಳನ್ನು ನೆಡುತ್ತಿದ್ದಾರೆ. ನೆಟ್ಟ ಬಳಿಕ ಒಮ್ಮೆಯೂ ಅತ್ತ ತಿರುಗಿ ನೋಡುವುದಿಲ್ಲ. ಒಂದು ದಿನವೂ ನೀರು, ಗೊಬ್ಬರ ಹಾಕಿ ಪೋಷಿಸುವುದಿಲ್ಲ ಎಂದು ಘೋಕ್ಲೃಕರ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿಯ ಕೆ.ಬಿ.ಶಾಣಪ್ಪ ಕೂಡ ಬೆಂಬಲ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ, “ಜನಸಂಖ್ಯೆ ಹೆಚ್ಚಾದಂತೆ ಮರಗಳ ಅವಲಂಬನೆ ಹೆಚ್ಚಾಗುವುದರಿಂದ
ಸಸಿ ನೆಡುವ ಕಾರ್ಯವನ್ನು ವ್ಯಾಪಕವಾಗಿ ಕೈಗೊಳ್ಳಲಾಗುತ್ತಿದೆ. ನೀರು ಹಾಕುವುದಿಲ್ಲ, ನಿರ್ವಹಣೆ ಮಾಡುವುದಿಲ್ಲ ಎಂದು
ಸಾರಾಸಗಟಾಗಿ ಆರೋಪಿಸುವುದು ಸರಿಯಲ್ಲ. ನಿರ್ದಿಷ್ಟ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರೆ ಪರಿಶೀಲಿಸಲಾಗುವುದು’
ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.