Gowri Ganesh Chaturthi: ವಿಘ್ನನಿವಾರಕನ ಬರಮಾಡಿಕೊಳ್ಳಲು ಸಜ್ಜು

Team Udayavani, Sep 18, 2023, 10:12 AM IST

TDY-1

ಬೆಂಗಳೂರು: ಈ ಬಾರಿ ಗೌರಿ-ಗಣೇಶ ಚತುರ್ಥಿ ಒಂದೇ ದಿನ ಆಚರಿಸಲಾಗುತ್ತಿದ್ದು, ಹಬ್ಬ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ದೇಗುಲಗಳ ತೊಟ್ಟಿಲಾಗಿರುವ ಉದ್ಯಾನಗರಿಯ ಪ್ರತಿಯೊಂದು ಏರಿಯಾದಲ್ಲೂ ವಿಶಿಷ್ಟ ದೇವಾಲಯ ಕಾಣಬಹುದು. ಅದರಲ್ಲಿ ವಿಘ್ನಗಳ ನಿವಾರಕನ ದೇವಸ್ಥಾನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕೆಲ ವಿಶೇಷ ಗಣಪ ದೇಗುಲಗಳಲ್ಲಿ ವಿಭಿನ್ನ ಅಲಂಕಾರ, ಹೋಮ, ಹವನ, ಅಭಿಷೇಕ ನೆರವೇರಿಸಿ ಭಕ್ತರಿಗೆ ವಿಘ್ನ ನಿವಾರಕನ ದರ್ಶನಕ್ಕೆ ಅನುವು ಮಾಡಿಕೊಡಲು ಸಕಲ ತಯಾರಾಗಿವೆ.

ಸೋಮವಾರ ನಗರಾದ್ಯಂತ ಗೌರಿ-ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಬಹುತೇಕರು ಮನೆಗಳಲ್ಲಿ ಗೌರಿ-ಗಣೇಶನನ್ನಿಟ್ಟು ಸಂಭ್ರಮಿಸುತ್ತಾರೆ. ಇನ್ನು ಕೆಲವರು ಭೇದ-ಭಾವ ಗಳಿಲ್ಲದೆ ಬಡಾವಣೆಗಳಲ್ಲಿ ಪೆಂಡಾಲ್‌, ವಿದ್ಯುದೀಪಾ ಲಂಕಾರಗಳು, ಧ್ವನಿವರ್ಧಕ ಅಳವಡಿಸಿ ಸಾರ್ವತ್ರಿಕ ಗಣೇಶನ ಪ್ರತಿಷ್ಠಾಪಿಸುವ ಅದೇ ಸಂಭ್ರಮವನ್ನು ಇಮ್ಮಡಿಗೊಳಿಸುವಂತೆ ಮಾಡುತ್ತಾರೆ. ವಿಶೇಷವಾಗಿ ನಗರದಲ್ಲಿರುವ ಪ್ರಮುಖವಾಗಿ ದೊಡ್ಡ ಗಣಪತಿ ದೇವಸ್ಥಾನ, ಶಕ್ತಿ ಗಣಪತಿ ದೇವಾಲಯ, ವಿಜಯ ಮಹಾಗಣಪತಿ ದೇವಾಸ್ಥಾನ, ಪಂಚಮುಖೀ ಗಣಪ ದೇವಸ್ಥಾನ ಸೇರಿದಂತೆ ಇತ್ಯಾದಿ ದೇವಸ್ಥಾನಗಳು ಈಗಾಗಲೇ ಗಣೇಶನನ್ನು ಬರಮಾಡಿಕೊಳ್ಳಲು ಸಕಲ ರೀತಿ ಸಿದ್ಧಗೊಂಡಿವೆ. ವಿಘ್ನನಿವಾರಕನ ಆಗಮನ ಆಗುತ್ತಿದ್ದಂತೆ ಅಭಿಷೇಕ, ವಿಶೇಷ ಅಲಂಕಾರ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆಯಲಿವೆ.

ನಗರದಲ್ಲಿ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಹಾಗೂ ದೊಡ್ಡ ಗಣಪತಿ ಎಂದೇ ಹೆಸರು ವಾಸಿಯಾದ ಬುಲ್‌ ಟೆಂಪಲ್‌ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಸೋಮವಾರ ಮುಂಜಾನೆ 3.30ರಿಂದ 6.30ರ ವರೆಗೆ ಅಂದಾಜು 18 ಅಡಿ ಎತ್ತರ ಮತ್ತು 16 ಅಡಿ ಅಗಲವಿರುವ ಏಕಕಲ್ಲಿನ ಗಣೇಶ ವಿಗ್ರಹಕ್ಕೆ ಬೆಳ್ಳಿ ವಸ್ತುಗಳು ಸೇರಿದಂತೆ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗುವುದು. ನಂತರ ರಾತ್ರಿ 12 ಗಂಟೆಯವರೆಗೂ ಭಕ್ತಾದಿಗಳಿಗೆ ಗಣೇಶ ದೇವರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ. ಇದೇ ರೀತಿ ಮಲ್ಲೇಶ್ವರಂನಲ್ಲಿರುವ ಮಹಾಗಣ ಪತಿ ದೇವಸ್ಥಾನ, ಜಯನಗರದ ಪ್ರಸನ್ನ ಗಣಪತಿ ದೇವಾಲಯದಲ್ಲಿಯೂ ಹಬ್ಬದ ಪ್ರಯುಕ್ತ ವಿವಿಧ ಅಭಿಷೇಕ, ಹೋಮ-ಹವನ ನಡೆಸಲಾಗುತ್ತದೆ. ಹಬ್ಬದ ಹಿನ್ನೆಲೆ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತಾದಿಗಳು ಆಗಮಿಸುವ ಕಾರಣ ವಿಶೇಷ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗು ತ್ತಿದೆ ಎಂದು ಮುಜರಾಯಿ ದೇವಾಲಯಗಳ ಅರ್ಚಕರ ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯ ದರ್ಶಿ ಕೆ.ಎಸ್‌.ಎನ್‌. ದೀಕ್ಷಿತ್‌ ತಿಳಿಸುತ್ತಾರೆ.

ಜಯನಗರದ 14ನೇ ಮುಖ್ಯರಸ್ತೆಯಲ್ಲಿರುವ ವಿಜಯ ಮಹಾಗಣಪತಿ ದೇವಸ್ಥಾನದಲ್ಲಿ ಸೆ.18 (ಸೋಮವಾರ)ರಿಂದ ಸೆ. 21ರವರೆಗೆ ನಿತ್ಯ ವಿಶೇಷ ಪೂಜೆ, ಹೋಮ, ಅಭಿಷೇಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಇಂದು (ಸೋಮ ವಾರ) ಬೆಳಗ್ಗೆ 6.30ಕ್ಕೆ ದೇವರನಾಮದೊಂದಿಗೆ ದೇವರಿಗೆ ಪಂಚಾಮೃತ ಸಹಿತ ರುದ್ರಾಭಿಷೇಕ ಅಲಂಕಾರ ಮಾಡಲಾಗುತ್ತಿದ್ದು, ಬೆಳಗ್ಗೆ 9ರಿಂದ ಸ್ವರ್ಣ ಗೌರಿ ಹಾಗೂ ವರಸಿದ್ಧಿ ವಿನಾಯಕ ಸ್ವಾಮಿಯ ಪ್ರತಿಷ್ಠಾಪನೆ ನಂತರ ಮಹಾಮಂಗಳಾ ರತಿ ಜರುಗಲಿದೆ. ಇಲ್ಲಿ ಸೆ.21ರವರೆಗೆ ಒಂದೊಂದು ದಿನ ಒಣಹಣ್ಣುಗಳ ಅಲಂಕಾರ, ಶಾಕಾಂಬರಿ (ತರಕಾರಿ) ಅಲಂಕಾರ, ಸರ್ವಾಭಿಷೇಕ ಅಲಂಕಾರದ ಜತೆಗೆ ರುದ್ರ ಹೋಮ, ಸುಬ್ರಹ್ಮಣ್ಯ ಹೋಮ, ಸತ್ಯನಾರಾಯಣಸ್ವಾಮಿ ಹಾಗೂ ಲಕ್ಷ್ಮೀ ಪೂಜೆ ನಡೆಯಲಿದೆ ಎಂದು ದೇವಾಸ್ಥಾನದ ಖಜಾಂಚಿ ರಾಜೀವ್‌ ಕೆ. ತಿಳಿಸುತ್ತಾರೆ.

ಹೀಗೆ ಜಯನಗರ 4ನೇ ಬ್ಲಾಕ್‌ನಲ್ಲಿರುವ ಶಕ್ತಿ ಗಣಪತಿ ದೇವಾಲಯ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಪಂಚಮುಖಿ ಗಣೇಶ ದೇವಾಲಯ, ಕಸ್ತೂರ್ಬಾ ರಸ್ತೆಯಲ್ಲಿರುವ ಟ್ರಾಫಿಕ್‌ ಗಣೇಶ ದೇವಾಲಯ, ಕೋರಮಂಗಲದ ಕೆಎಚ್‌ಬಿ ಕಾಲೋನಿ 5ನೇ ಬ್ಲಾಕ್‌ನಲ್ಲಿರುವ ಪ್ರಸನ್ನ ಗಣಪತಿ ದೇವಸ್ಥಾನ, ಪದ್ಮನಾಭನಗರ ಬಳಿಯ ವರಸಿದ್ಧಿ ವಿನಾಯಕ ದೇವಸ್ಥಾನ, ಕುಮಾರಸ್ವಾಮಿ ಲೇಔಟ್‌ನಲ್ಲಿರುವ 108 ಗಣೇಶನ ದೇವಾಲಯ ಸೇರಿದಂತೆ ನಗರಾದ್ಯಂತ ಇರುವ ವಿನಾಯಕನ ದೇವಸ್ಥಾನಗಳಲ್ಲಿ ಇಂದು(ಸೋಮವಾರ) ವಿಶೇಷ ಪೂಜಾ-ಕೈಂಕರ್ಯಗಳು ನಡೆಯಲಿವೆ.

ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿನ ಗಣಪತಿ ದೇವ ಸ್ಥಾನಗಳಲ್ಲಿ ಮುಂಜಾನೆಯಿಂದಲೇ ಹೋಮ-ಹವನ, ವಿಶೇಷ ಅಲಂಕಾರ, ಪೂಜೆಗಳು ಪ್ರಾರಂಭವಾಗಲಿದ್ದು, ದಿನವಿಡೀ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಬಾರಿ 60 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮುಜರಾಯಿ ಇಲಾಖೆ ತಿಳಿಸಲಾಗಿದೆ. ● ಕೆ.ಎಸ್‌.ಎನ್‌.ದೀಕ್ಷಿತ್‌, ಮುಖ್ಯ ಪ್ರಧಾನ ಕಾರ್ಯದರ್ಶಿ, ಮುಜರಾಯಿ ದೇವಾಲಯಗಳ ಅರ್ಚಕರ ಒಕ್ಕೂಟ 

-ಭಾರತಿ ಸಜ್ಜನ್‌

ಟಾಪ್ ನ್ಯೂಸ್

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-bng

Bengaluru: ಪ್ರೀತಿಸಿದವಳು ದೂರಾಗಿದ್ದಕ್ಕೆ ಯುವಕ ಆತ್ಮಹತ್ಯೆ

15-bng

Bengaluru: ಟ್ಯೂಷನ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ಪರಾರಿ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

16-bng

Bengaluru: ಪ್ರೀತಿಸಿದವಳು ದೂರಾಗಿದ್ದಕ್ಕೆ ಯುವಕ ಆತ್ಮಹತ್ಯೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

15-bng

Bengaluru: ಟ್ಯೂಷನ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ಪರಾರಿ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.