ಕೃಷಿಯತ್ತ ಪದವೀಧರರ ಒಲವು : ಕೃಷಿಮೇಳದಲ್ಲಿ ಹೆಚ್ಚು ಓದಿದವರಿಂದಲೇ ಮಾಹಿತಿ ಸಂಗ್ರಹ


Team Udayavani, Nov 16, 2020, 12:09 PM IST

bng-tdy-1

ಒಂದೆಡೆ ವೇತನ ಮತ್ತು ಕೆಲಸಕ್ಕೆ ಕತ್ತರಿ, ಮತ್ತೂಂದೆಡೆ ಸಾಲದ ಹೊರೆ ಮತ್ತಿತರ ಜವಾಬ್ದಾರಿಗಳು. ಭವಿಷ್ಯದಲ್ಲಿ ಇಂತಹ ರೋಗ ಮರುಕಳಿಸಿದರೆ ಹೇಗೆ ಎಂಬ ಚಿಂತೆ. ಇವೆಲ್ಲವೂ ಉನ್ನತ ವ್ಯಾಸಂಗ ಪೂರೈಸಿದ ಯುವಕರನ್ನು ಕಾಡುತ್ತಿವೆ. ಪರಿಣಾಮ ಕೋವಿಡ್ ಹಾವಳಿಯಲ್ಲೂ ಸುಸ್ಥಿರತೆ ಕಾಯ್ದುಕೊಂಡ ಕೃಷಿ ಅವರನ್ನು ಆಕರ್ಷಿಸಿದೆ. ಪದವೀಧರರು ಕೃಷಿಯತ್ತ ಮುಖ ಮಾಡುತ್ತಿರುವ “ಟ್ರೆಂಡ್‌’ ಶುರುವಾಗಿದೆ. ಈಚೆಗೆ ನಡೆದ ಕೃಷಿ ಮೇಳ ಆ ವರ್ಗಕ್ಕೆ ಉತ್ತಮ ವೇದಿಕೆಯೂ ಆಯಿತು. ಈ ಹೊಸ ಬೆಳವಣಿಯ ಒಂದು ನೋಟ ಸುದ್ದಿ ಸುತ್ತಾಟದಲ್ಲಿ…

ಇತ್ತೀಚಿನ ವರ್ಷಗಳಲ್ಲಿ ಯುವಕರು ವ್ಯವಸಾಯದಲ್ಲಿ ಆಸಕ್ತಿ ತೋರಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿರುವ ಆಶಾದಾಯಕ ಬೆಳವಣಿಗೆ ಬೆನ್ನಲ್ಲೇ ಉನ್ನತ ವ್ಯಾಸಂಗ ಪೂರೈಸಿದವರೂ ಕೃಷಿಯತ್ತ ಮುಖಮಾಡುತ್ತಿರುವ ಹೊಸ “ಟ್ರೆಂಡ್‌’ ಈಗ ಶುರುವಾಗಿದೆ.

ಎಂಜಿನಿಯರ್‌ಗಳು, ವಿವಿಧ ಕಂಪನಿಗಳಲ್ಲಿಕಾರ್ಯನಿರ್ವಹಿ ಸುತ್ತಿರುವ ಉದ್ಯೋಗಿಗಳು, ಡಿಪ್ಲೊಮಾ ಮತ್ತಿತರ ಪದವಿ ಪೂರೈಸಿದವರುಕೃಷಿಯತ್ತಕುತೂಹಲದಿಂದ ನೋಡುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಕೆಲಸಕ್ಕೆ ಅಥವಾ ವೇತನಕ್ಕೆ ಕತ್ತರಿಯಂತಹ ಸಂಕಷ್ಟಗಳನ್ನು ಈ ವರ್ಗ ಎದುರಿಸಿದೆ. ಈಗ ಸಹಜ ಸ್ಥಿತಿಗೆ ಮರಳಿದ್ದರೂ ಭವಿಷ್ಯದ ದೃಷ್ಟಿಯಿಂದ ಸುಸ್ಥಿರತೆಕಡೆಗೆ ಅದು ನೋಡುತ್ತಿದೆ. ಈ ವೇಳೆಯಲ್ಲಿಕಂಡಿದ್ದು ದೇಶದ ಬಹುಪಾಲು ವರ್ಅವಲಂಬಿಸಿದಕೃಷಿ. ಹಾಗಂತ ಅವರೆಲ್ಲಾ ಈಗಿರುವ ಕೆಲಸವನ್ನು ತೊರೆಯುವ ಆಲೋಚನೆಯಲ್ಲಿ ಇಲ್ಲ. ಮೂಲವೃತ್ತಿಯ ಜತೆಗೆ ಕೃಷಿಯನ್ನು “ಪ್ರವೃತ್ತಿ’ಯಾಗಿ ನೋಡುತ್ತಿದ್ದಾರೆ. ವೇತನ ಕಡಿತದಂತಹ ಪೆಟ್ಟುತಿಂದಿದ್ದಾರೆ. ಈ ಮಧ್ಯೆಸಾಲ ಮತ್ತಿತರ ಹೊರೆ ಇದೆ.ಇದಕ್ಕಾಗಿ ಅವರು ಪರ್ಯಾಯ ಆದಾಯ ಮೂಲ ಹುಡುಕುತ್ತಿದ್ದು,ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಆದಾಯದೊಂದಿಗೆ ತಮ್ಮ ಈ ಹಿಂದಿನ ಲೆಕ್ಕಾಚಾರವನ್ನು ಸರಿದೂಗಿಸುವುದು ಒಂದೆಡೆಯಾದರೆ, ನೆಮ್ಮದಿಯ ಹುಡುಕಾಟವೂ ಇದರ ಹಿಂದಿದೆ ಎನ್ನುತ್ತಾರೆ ವಿಜ್ಞಾನಿಗಳು. ಈಚೆಗೆ ನಡೆದ “ಕೃಷಿ ಮೇಳವೂ ಇದೇ ಸುಳಿವನ್ನು ನೀಡುತ್ತದೆ.

ಮೇಳಕ್ಕೆ ಬಂದವರ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತುಂಬಾಕಡಿಮೆ ಇರಬಹುದು. ಆದರೆ, ಗಂಭೀರವಾಗಿ ತೊಡಗಿಕೊಳ್ಳುವ ಮನಃಸ್ಥಿತಿ ಹೊಂದಿದವರು ಹೆಚ್ಚಿದ್ದಾರೆ. ಹೇಗೆ ಅಂತೀರಾ? ಮೇಳಕ್ಕೆ ಭೇಟಿ ನೀಡಿದವರು ಮುಂಚಿತವಾಗಿಯೇ ಗೂಗಲ್‌ ಸರ್ಚ್‌ ಮತ್ತಿತರ ಮೂಲಗಳಿಂದ ವಿಷಯವನ್ನು ತಿಳಿದುಕೊಂಡು ಬಂದವರಾಗಿದ್ದರು. ಇದು ಅವರುಕೇಳಿದ ಪ್ರಶ್ನೆಗಳು,ಕಲೆಹಾಕಿದಮಾಹಿತಿಗಳು, ಮಾಡಿಕೊಂಡ ಪೂರ್ವಸಿದ್ಧತೆಗಳಿಂದ ಕಂಡುಬಂದಿತು ಎಂದುಕೃಷಿ ವಿವಿ ಅಧಿಕಾರಿಗಳು ತಿಳಿಸಿದರು.

ನೇರ ಮಾರುಕಟ್ಟೆ, ತಂತ್ರಜ್ಞಾನಗಳತ್ತ ಚಿತ್ತ: “ಮೂರು ದಿನಗಳ ಮೇಳದಲ್ಲಿ ರೈತರಿಗಾಗಿ ಸಮಾಲೋಚನಾ ವಿಭಾಗ ತೆರೆಯಲಾಗಿತ್ತು. ಭೇಟಿ ನೀಡಿದವರ ಪೈಕಿ ಶೇ.60 ಉನ್ನತ ಶಿಕ್ಷಣ ಪೂರೈಸಿ ದೊಡ್ಡ ಕಂಪನಿಗಳಲ್ಲಿದ್ದವರು ಹಾಗೂ 30-35 ವಯಸ್ಸಿನವರಾಗಿದ್ದರು ಎಂಬುದು ವಿಶೇಷ. ಅವರ ಬಹುತೇಕ ಪ್ರಶ್ನೆಗಳು ಸಿರಿಧಾನ್ಯಗಳ ಮೌಲ್ಯವರ್ಧನೆ, ನೇರ ಮಾರುಕಟ್ಟೆಯಂತಹ ವಿಚಾರಗಳಿಗೆ ಸಂಬಂಧಿಸಿದವು ಆಗಿದ್ದವು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವಿಷ್ಕಾರ ಕೇಂದ್ರದ ಸಂಯೋಜಕ ಡಾ.ಕೆ.ಎಂ. ಹರಿಣಿಕುಮಾರ್‌ “ಉದಯವಾಣಿ’ಗೆ ತಿಳಿಸಿದರು.

ಹಿಂದಿನ ಮೇಳಗಳಿಗೆ ಹೋಲಿಸಿದರೆ, ಈ ಬಾರಿ ಕೋವಿಡ್ ಹಾವಳಿಯಿಂದ ತುಂಬಾ ಸಪ್ಪೆಯಾಗಿರಬಹುದು. ಆದರೆ, ಮೇಳದಲ್ಲಿ ಭಾಗವಹಿಸಿದ ಬಹುಪಾಲು ವರ್ಗ ಬಿಎ, ಬಿಎಸ್ಸಿ, ಎಂಜಿನಿಯರಿಂಗ್‌ನಂತಹಪದವೀಧರರಾಗಿದ್ದರು. ನನ್ನೊಂದಿಗೆ ಸಂವಾದ ನಡೆಸಿದವರಲ್ಲಿ ಶೇ. 20ಕ್ಕೂ ಹೆಚ್ಚು ಜನ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾರೆ. ಹೊಸ ತಂತ್ರಜ್ಞಾನಗಳು,ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ತಂದುಕೊಂಡುವಂತಹ ತಳಿಗಳು, ನಿಖರ ಬೇಸಾಯ ಮತ್ತು ನಿವ್ವಳ ಲಾಭ, ಮೌಲ್ಯವರ್ಧನೆಯಂತಹ ವಿಚಾರಗಳಕುರಿತು ಮಾಹಿತಿ ಪಡೆಯುತ್ತಿರುವುದು ಹೆಚ್ಚಾಗಿ ಕಂಡುಬಂತು’ ಎಂದು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಬಿ. ನಾರಾಯಣಸ್ವಾಮಿ ತಿಳಿಸಿದರು.

ಯಶಸ್ಸಿನ ಹಾದಿಯತ್ತ “ಕೃಷಿ ಪಯಣ’… :

ಯುವಕರುಕೃಷಿಯತ್ತ ಮುಖಮಾಡುತ್ತಿರುವುದು ಮಾತ್ರವಲ್ಲ; ಆವರ್ಗ “ಯಶಸ್ವಿ ರೈತ’ರಾಗಿ ಕೂಡ ಹೊರಹೊಮ್ಮುತ್ತಿದೆ. ಇದರೊಂದಿಗೆಕೃಷಿಯಲ್ಲಿ ಹೊಸ ನಿರೀಕ್ಷೆಗಳು ಗರಿಗೆದರಿವೆ. ಜಿಕೆವಿಕೆ ಬಿಡುಗಡೆ ಮಾಡಿದ ಕೃಷಿ ಸಾಧಕರ ಪಟ್ಟಿ ಈ ಆಶಾದಾಯಕ ಬೆಳವಣಿಗೆಯನ್ನು ಸೂಚಿಸುತ್ತದೆ. ಬೆಂಗಳೂರುಕೃಷಿ ವಿವಿ ವ್ಯಾಪ್ತಿಗೆ ಬರುವ ಹತ್ತು ಜಿಲ್ಲೆಗಳ ರಾಜ್ಯಮಟ್ಟದಿಂದ ಹಿಡಿದು ತಾಲೂಕು ಮಟ್ಟದವರೆಗಿನ ರೈತರು ಮತ್ತು ರೈತ ಮಹಿಳೆ ಯರು ಇದ್ದಾರೆ. ಅದರಲ್ಲಿ ಹಿಂದಿನ ಸಾಧಕರಿಗೆ ಹೋಲಿಸಿ ದರೆ, ಸುಶಿಕ್ಷಿತರ ಸಂಖ್ಯೆ ಹೆಚ್ಚುತ್ತಿರುವುದು ಕಂಡು ಬರುತ್ತದೆ. ಒಟ್ಟಾರೆ 117 ಜನಕೃಷಿ ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಪಿಯುಸಿ, ಪದವಿ, ಎಂಕಾಂ, ಬಿಇಡಿ, ಡಿಇಡಿ, ಡಿಪ್ಲೊಮಾ ಮತ್ತಿತರ ಪದವಿಗಳು ಅಥವಾ ವೃತ್ತಿಪರ ಕೋರ್ಸ್‌ಗಳನ್ನು ಪೂರೈಸಿ ಕೆಲಸಕ್ಕಾಗಿ ಅಲೆಯದೆ,ಕೃಷಿಯಲ್ಲಿ ತೊಡಗಿಕೊಂಡಿರುವುದು ಹಾಗೂ ಅದರಲ್ಲಿ ಯಶಸ್ವಿಯಾದವರು ಹೆಚ್ಚುತ್ತಿರುವುದು ಕಂಡುಬರುತ್ತಿದೆ.

ರಾಜ್ಯಮಟ್ಟದ ಪ್ರಶಸ್ತಿ ಪಡೆದ ಆರು ಜನರಲ್ಲಿ ಮೂವರು ಉನ್ನತ ವ್ಯಾಸಂಗ ಪೂರೈಸಿದ್ದರೆ, ಒಬ್ಬರು ಪಿಯುಸಿ ಕಲಿತಿದ್ದಾರೆ. ಇವುಕೆಲವು ಸ್ಯಾಂಪಲ್‌. ಇಂತಹ ಹತ್ತಾರು ಸಾಧಕರು ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ. ಅಲ್ಲದೆ, ಅವರೆಲ್ಲಾ ಸ್ಥಳೀಯ ಮಟ್ಟದಲ್ಲಿ ಉಳಿದವರಿಗೂ ಮಾದರಿಯಾಗುತ್ತಿ ದ್ದಾರೆ.ಈಮಧ್ಯೆ ಕೋವಿಡ್ ದಿಂದ ಕೃಷಿಯತ್ತ ಮುಖಮಾಡಿರುವವರ ಸಂಖ್ಯೆ ಪ್ರಸಕ್ತ ಸಾಲಿನಲ್ಲಿ ಅಧಿಕವಾಗಿದ್ದರಿಂದ ಮುಂಬರುವ ವರ್ಷಗಳಲ್ಲಿ ಸುಶಿಕ್ಷಿತ ಕೃಷಿ ಸಾಧಕರ ಪಟ್ಟಿ ಇನ್ನಷ್ಟು ದೊಡ್ಡದಾಗುವ ಸಾಧ್ಯತೆಯೂ ಇದೆ ಎಂದುಕೃಷಿ ತಜ್ಞರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕಾರಣಗಳೇನು? :

ಮುಖ್ಯವಾಗಿ ಸುಶಿಕ್ಷಿತರು ವಿವಿಧೆಡೆ ವ್ಯಾಸಂಗ ಅಥವಾ ಕೆಲಸ ಮಾಡಿದ ಅನುಭವ ಹೊಂದಿರುವವರಾಗಿದ್ದು, ಹೆಚ್ಚು ಆತ್ಮವಿಶ್ವಾಸ ಇರುತ್ತದೆ. ಇನ್ನು ಕೆಲವರು ಕೆಲಸದಲ್ಲಿ ವಿಫ‌ಲರಾಗಿ ಗೂಡಿಗೆ ಮರಳಿರುತ್ತಾರೆ. ಪರ್ಯಾಯ ಆಯ್ಕೆಗಳಿರುವುದಿಲ್ಲ. ಹಾಗಾಗಿ, ಸಾಧಿಸುವ ಛಲ ಇರುತ್ತದೆ. ಅಲ್ಲದೆ ಉಳಿದ ರೈತರಿಗೆ ಹೋಲಿಸಿದರೆ, ವ್ಯವಸ್ಥಿತವಾದ ಅಪ್ರೋಚ್‌ (ವಿಧಾನ) ಇರುತ್ತದೆ. ವಿಸ್ತರಣೆ ಕ್ಷೇತ್ರದೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಮಾರುಕಟ್ಟೆ ಜ್ಞಾನವಿರುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮೂಲತಃ ಅವರುಕೃಷಿ ಕುಟುಂಬದವರಾಗಿರುತ್ತಾರೆ. ಈ ಎಲ್ಲಕಾರಣಗಳು ಅವರನ್ನು ಯಶಸ್ಸಿನ ಹಂತಕ್ಕೆಕೊಂಡೊಯ್ಯಲು ನೆರವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. “ಖಂಡಿತ ಇಂತಹದ್ದೊಂದು ಬೆಳವಣಿಗೆ ಕಂಡುಬರುತ್ತಿದೆ. ಸಮಗ್ರಕೃಷಿ ವಿಧಾನ ಅನುಸರಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಇದಲ್ಲದೆ, ವಿಪುಲ ತಂತ್ರಜ್ಞಾನಗಳ ಲಭ್ಯತೆ ಮತ್ತು ಅವುಗಳನ್ನು ತಲುಪಿಸಲು ಸಾಕಷ್ಟು ಮಾರ್ಗಗಳು ಈಗ ಮುಕ್ತವಾಗಿವೆ. ಕೆಲವು ಪೂರಕವಾದ ನೀತಿಗಳು, ಇ-ಮಾರುಕಟ್ಟೆ ವ್ಯವಸ್ಥೆಗಳು ಇವೆ. ಇದೆಲ್ಲದರಿಂದ ರೈತರಲ್ಲಿ ಜಾಗೃತಿ ಮೂಡುತ್ತಿದೆ’ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌. ರಾಜೇಂದ್ರ ಪ್ರಸಾದ್‌ ತಿಳಿಸುತ್ತಾರೆ.

ಶೇ. 10 ಹಳ್ಳಿಗಳಲ್ಲೇ ಉಳಿಯಲು ನಿರ್ಧಾರ :

ರಾಜ್ಯಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ ಕಮ್ಮರಡಿ ನೇತೃತ್ವದಲ್ಲಿ “ಕೋವಿಡ್‌-19ಸಂದರ್ಭದಲ್ಲಿ ರೈತರ ಪರಿಸ್ಥಿತಿ ಹಾಗೂ ಅಭಿಪ್ರಾಯ ಸಂಗ್ರಹ’ಕುರಿತ ಸ್ವತಂತ್ರ ಸಮೀಕ್ಷೆ ಕೂಡ ಯುವ ಮತ್ತು ಉನ್ನತ ವ್ಯಾಸಂಗ ಪೂರೈಸಿದ ಕೆಲವರು ಹಳ್ಳಿಗಳಲ್ಲಿಯೇ ಉಳಿದುಕೊಂಡು,ಕೃಷಿಯಲ್ಲಿ ತೊಡಗುವ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಕಾಣಬಹುದು. “ಕೋವಿಡ್ ಹಾವಳಿ ಸಂದರ್ಭದಲ್ಲಿ ಲಕ್ಷಾಂತರ ಜನ ಹಳ್ಳಿಗಳಿಗೆ ವಾಪಸ್‌ಹೋಗಿದ್ದಾರೆ. ಈ ಪೈಕಿ ಬೆಂಗಳೂರಿನಿಂದ ಅಂದಾಜು ನಾಲ್ಕರಿಂದ ಎಂಟು ಲಕ್ಷ ಜನ ತೆರಳಿದ್ದಾರೆ. ಅದರಲ್ಲಿ ಶೇ.10 ಜನ ಹಳ್ಳಿಗಳಲ್ಲಿಯೇ ಉಳಿದುಕೊಳ್ಳುವ ನಿರ್ಧಾರ ಮಾಡಿರುವುದು ನಮ್ಮ ಸಮೀಕ್ಷೆಯಲ್ಲಿಕಾಣಬಹುದು. ಅದರಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉನ್ನತ ವ್ಯಾಸಂಗ ಪೂರೈಸಿದವರೂ ಇದ್ದಾರೆ. ಅವರು ಕೃಷಿಯತ್ತ ಮುಖಮಾಡಿರುವ ಸಾಧ್ಯತೆಯೇ ಹೆಚ್ಚು’ ಎಂದು ಡಾ.ಪ್ರಕಾಶಕಮ್ಮರಡಿ ತಿಳಿಸುತ್ತಾರೆ. ಬೆಂಗಳೂರುಕೃಷಿ ವಿವಿ, ಮೈಸೂರಿನ ಮಹಾರಾಜ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಸೇರಿದಂತೆ ಎರಡು ಸಾಫ್ಟ್ವೇರ್‌ಕಂಪನಿಗಳ ಸಹಯೋಗದಲ್ಲಿ ಈ ಸಮೀಕ್ಷೆ ನಡೆದಿದೆ.

 

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.