ಗ್ರಾಪಂಮಟ್ಟದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ
ಬೆಂಗಳೂರು ನಗರ ಜಿಪಂ ವ್ಯಾಪ್ತಿಯ 96 ಗ್ರಾಪಂಗಳಲ್ಲಿ ಸಭೆ | ಹಲವು ರೀತಿಯ ಸಮಸ್ಯೆಗಳಿಗೆ ಸ್ಪಂದನೆ
Team Udayavani, Nov 23, 2020, 12:59 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಕ್ಕಳ ಹಲವು ರೀತಿಯಸಮಸ್ಯೆಗಳಿಗೆ ಸ್ಥಳದಲ್ಲೆ ಸ್ಪಂದನೆ ಸಿಗುವ “ಮಕ್ಕಳಹಕ್ಕುಗಳ ಗ್ರಾಮ ಸಭೆ’ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೆಲವು ಅಂಶಗಳ ಸೇರ್ಪಡೆ ಮತ್ತುಬದಲಾವಣೆಗಳೊಂದಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 96 ಗ್ರಾಪಂಗಳಲ್ಲಿ ನಡೆಯಲಿದೆ.
ಮಕ್ಕಳ ಹಸಿವಿನ ತಾರತಮ್ಯ ನಿವಾರಣೆ, ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಸೇರಿದಂತೆಮಕ್ಕಳಹಲವು ರೀತಿಯಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆ”ಮಕ್ಕಳ ಹಕ್ಕುಗಳ ಗ್ರಾಮ ಸಭೆ’ ಯೋಜನೆ ರೂಪಿಸಿದೆ.
96 ಗ್ರಾಪಂನಲ್ಲಿ ಸಭೆ: ಕೋವಿಡ್ ಹಿನ್ನೆಲೆಯಲ್ಲಿಸರ್ಕಾರ ಈಗಾಗಲೇ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ. ಅದನ್ನು ಪಾಲನೆ ಮಾಡಿಕೊಂಡು ನವೆಂಬರ್‌ನಿಂದ 2021 ಜನವರಿ 24ರ ವರೆಗೆ ಬೆಂಗಳೂರು ನಗರಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 96 ಗ್ರಾಪಂಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯಲಿದೆ. ಮಕ್ಕಳ ಪರಿಸ್ಥಿತಿಯನ್ನುತಳಮಟ್ಟದಲ್ಲೇ ಗಮನಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಅಧಿಕಾರಿಗಳಿಗೆ ಸೂಚನೆ: ಗ್ರಾಪಂಗಳಲ್ಲಿ ವಿವಿಧ ಭಾಗೀದಾರರ ಸಹ ಭಾಗಿತ್ವದಲ್ಲಿ ಪೂರ್ವ ಸಿದ್ಧತೆಗಾಗಿ ಸಭೆ ನಡೆಸುವಂತೆ ಈಗಾಗಲೇಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ಗ್ರಾಮ ಸಭೆಯ ಹತ್ತು ವಾರಗಳಕಾರ್ಯ ಚಟುವಟಿಕೆಗಳ ವೇಳಾ ಪಟ್ಟಿ ಮತ್ತುಸಾಧಿಸಬೇಕಾದ ಗುರಿಗಳ ಕುರಿತ ಕಾರ್ಯಯೋಜನೆ ತಯಾರಿಸಿ, ಕಾರ್ಯಕ್ರಮಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಪಂಚಾಯ್ತಿ ರಾಜ್ ಇಲಾಖೆ ಸುತ್ತೋಲೆಯನ್ನುಕೂಡ ಹೊರಡಿಸಿದೆ.
ಸಭೆಯಲ್ಲಿ ಯಾರ್ಯಾರು ಭಾಗಿ: ಮಕ್ಕಳಗ್ರಾಮ ಸಭೆಯಲ್ಲಿ ಸ್ಥಳೀಯ ಗ್ರಾಮಾಆಡಳಿತ,ಪಿಡಿಒ, ಶಾಲಾ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು, ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರಿರುತ್ತಾರೆ. ಈ ಸಭೆಯಲ್ಲಿ ಮಕ್ಕಳ ಹಲವು ರೀತಿಯಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದುಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಗ್ರಾಮ ಸಭೆ ನಿಗದಿಗೆ ಸೂಚನೆ : ಗ್ರಾಪಂ ಮಟ್ಟದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಆಯಾ ತಾಲೂಕುಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧ ಪಟ್ಟ ಗ್ರಾಪಂ ಆಡಳಿತಾಧಿಕಾರಿ ಗಳೊಂದಿಗೆ ಸಮಾಲೋಚನೆ ನಡೆಸಿ ನಿಗದಿತ ವೇಳಾ ಪಟ್ಟಿಯಂತೆ ಗ್ರಾಮ ಸಭೆ ನಡೆಸುವಂತೆ ಪಂಚಾಯ್ತಿ ರಾಜ್ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ದೊಡ್ಡದಾದ ಆವರಣವಿರುವ ಸೂಕ್ತ ಸ್ಥಳದಲ್ಲಿ ನಡೆಸುವಂತೆ ಇಲಾಖೆ ಸೂಚನೆ ನೀಡಿದೆ.
ಮಕ್ಕಳ ದನಿ ಪೆಟ್ಟಿಗೆ : ಪ್ರತಿ ಗ್ರಾಪಂಯಿಂದ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ “ಫೇಸ್ ಬುಕ್ ಪೇಜ್’ ರಚಿಸಲು ಸೂಚಿಸಲಾಗಿದೆ. ಹಾಗೆಯೇ ಫೇಸ್‌ಬುಕ್ ಪೇಜ್ ಅನ್ನು ಆಯಾ ಶಾಲಾ ಶಿಕ್ಷಕರು, ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳ ಮೂಲಕ ಮಕ್ಕಳಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಕ್ಕಳಿಂದ ಬಂದಂತಹ ದೂರುಗಳನ್ನು”ಮಕ್ಕಳ ಗ್ರಾಮ ಸಭೆ’ಯಲ್ಲಿ ಮಂಡಿಸುವಂತೆ ತಿಳಿಸಲಾಗಿದೆ. ಜತೆಗೆ ಮಕ್ಕಳು ತಮ್ಮ ಸಮಸ್ಯೆ ಮತ್ತು ಬೇಡಿಕೆಗಳನ್ನು ಬರೆದು ಹಾಕಲು ಅನುಕೂಲವಾಗಲು”ಮಕ್ಕಳದನಿಪೆಟ್ಟಿಗೆ’ ತಯಾರಿಸಲು ಸೂಚಿಸಲಾಗಿದೆ. ಇಂತಹ ಪೆಟ್ಟಿಗಳನ್ನು ಶಾಲೆ, ಮಕ್ಕಳ ಪಾಲನಾ ಕೇಂದ್ರ, ಅಂಗನ ವಾಡಿ ಕೇಂದ್ರ, ಗ್ರಾಪಂ ಕಚೇರಿ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಇರಿಸುವಂತೆ ಸಂಬಂಧಪಟ್ಟಅಧಿಕಾರವರ್ಗಕ್ಕೆ ಸೂಚಿಸಲಾಗಿದೆ.
ಕೋವಿಡ್ ಮಾರ್ಗ ಸೂಚಿಗಳನ್ನು ಪಾಲನೆ ಮಾಡಿ “ಮಕ್ಕಳ ಹಕ್ಕುಗಳ ಗ್ರಾಮ ಸಭೆ’ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಸುತ್ತೋಲೆ ಹೊರಡಿಸಿದೆ. ಇಲಾಖೆಯ ಆದೇಶದ ರೀತಿಯಲ್ಲೇ ಗ್ರಾಮಸಭೆ ನಡೆಯಲಿದೆ. –ಆರ್.ರಾಜೇಶ್, ಪಿಡಿಒ, ರಾಜಾನುಕುಂಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.