100 ಸ್ಟಾರ್ಟ್‌ಅಪ್‌ಗ್ಳಿಗೆ ಸರ್ಕಾರದಿಂದ ಅನುದಾನ
Team Udayavani, Jul 5, 2017, 12:15 PM IST
ಬೆಂಗಳೂರು: ರಾಜ್ಯದಲ್ಲಿ ಐಟಿ ಬಿಟಿ ಕ್ಷೇತ್ರದಲ್ಲಿ ನವೋದ್ಯಮಕ್ಕೆ ಪ್ರೋತ್ಸಾಹ ನೀಡಲು 100 ಸ್ಟಾರ್ಟ್ ಅಪ್ ಕಂಪನಿಗಳಿಗೆ ‘ಎಲಿವೇಟ್ 100’ಅನುದಾನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹೊಸ ಯೋಜನೆಗೆ ಪ್ರವಾಸೋದ್ಯಮ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಚಾಲನೆ ನೀಡಿ, ಸರ್ಕಾರದ ಅನುದಾನ ಪಡೆಯಲು ನವೋದ್ಯಮಿಗಳು ಜುಲೈ 4 ರಿಂದ 18 ರ ವರೆಗೆ (ಎಲಿವೆಟ್.ಬೆಂಗಳೂರು ಐಟಿಇ.ಬಿಜ್) ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.
ರಾಜ್ಯಾದ್ಯಂತ ಸ್ಟಾರ್ಟ್ ಅಪ್‌ಗ್ಳಿಗೆ ಪ್ರೋತ್ಸಾಹ ನೀಡಲು ಐಟಿ ಬಿಟಿ ಇಲಾಖೆ ನವೋದ್ಯಮಿಗಳಿಗೆ ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗುವಂತೆ ಮಾರ್ಗದರ್ಶನ ನೀಡುವುದರ ಜೊತೆಗೆ ಮಾರುಕಟ್ಟೆ ಅವಕಾಶ, ಚಿಂತನೆಗಳ ಪ್ರಮಾಣಿಕರಣ, ಇನ್‌ಕುಬೇಷನ್ ಸೌಲಭ್ಯ ಸೇರಿದಂತೆ ಕಾನೂನು ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ಸಲಹೆಗಳನ್ನೂ ರಾಜ್ಯ ಸರ್ಕಾರ ನೀಡಲಿದೆ. ಇದಕ್ಕಾಗಿ ಸರ್ಕಾರ 400 ಕೋಟಿ ರೂ. ಮೀಸಲಿಟ್ಟಿದೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಮಂಗಳೂರು, ಕಲಬುರಗಿ, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿರುವ ಸ್ಟಾರ್ಟ್ ಅಪ್‌ಗ್ಳಿಗೆ ಮುಕ್ತ ಅವಕಾಶ ನೀಡುತ್ತಿದೆ. ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಉತ್ಪಾದನೆ, ಅನಿಮೇಶನ್, ವಿಶ್ಯುಯಲ್ ಗೇಮಿಂಗ್ ಆಂಡ್ ಕಾಮಿಕ್ಸ್, ಜೈವಿಕ ತಂತ್ರಜ್ಞಾನ, ಫಾರ್ಮಾಸಿಟಿಕಲ್, ಕೃಷಿ ಮತ್ತು ಜೀವ ವಿಜ್ಞಾನ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಅವಿಷ್ಕಾರ ಮಾಡುವ ಕಂಪನಿಗಳನ್ನು ಎಲಿವೆಟ್ ಮೂಲಕ ಗುರುತಿಸಿ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಗಳಿಂದ ಬರುವ ಸ್ಟಾರ್ಟ್‌ಅಪ್‌ಗ್ಳು ತಮ್ಮ ಚಿಂತನೆಗಳನ್ನು ಎಲಿವೇಟ್ ತಂಡದೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದೆ. ನವೋದ್ಯಮಿಗಳಿಗೆ ಕರ್ನಾಟಕವನ್ನು ಸ್ಟಾರ್ಟ್‌ಅಪ್‌ಗ್ಳ ಜಾಗತಿಕ ಕೇಂದ್ರವನ್ನಾಗಿ ರೂಪಿಸುವತ್ತ ಸರ್ಕಾರ ಹೆಜ್ಜೆ ಇಟ್ಟಿದ್ದು, ಅವಿಷ್ಕಾರಿ ಚಿಂತನೆಗಳಿಗೆ ಮುಕ್ತ ಅವಕಾಶ ತೆರೆದಿಡಲಾಗಿದೆ ಎಂದರು. ಈಗಾಗಲೇ ರಾಜ್ಯದಲ್ಲಿ 46 ಸ್ಟಾರ್ಟ್‌ಅಪ್‌ಗ್ಳನ್ನು ಗುರುತಿಸಲಾಗಿದ್ದು,15.68 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ.
ಜೈವಿಕ ತಂತ್ರಜ್ಞಾನದಲ್ಲಿ 26 ಸ್ಟಾರ್ಟ್ ಅಪ್‌ಗೆ 10.70 ಕೋಟಿ, ಪ್ರವಾಸೋದ್ಯಮದಲ್ಲಿ 8 ಸ್ಟಾರ್ಟ್‌ಅಪ್‌ಗೆ 1.80 ಕೋಟಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 12 ಸ್ಟಾರ್ಟ್‌ಅಪ್‌ಗ್ಳಿಗೆ 3.18 ಕೋಟಿ ಅನುದಾನ ನೀಡಲಾಗಿದೆ. ಕೆಲವು ಸ್ಟಾರ್ಟ್ ಅಪ್‌ಗ್ಳಿಗೆ ಅಗತ್ಯವಿರುವ ತಾಂತ್ರಿಕ ಮತ್ತು ವ್ಯಾಪಾರಿ ಸಂಬಂಧಿ ಪ್ರೋತ್ಸಾಹವನ್ನೂ ನೀಡುತ್ತೇವೆ. ಪ್ರತಿಯೊಂದು ಸ್ಟಾರ್ಟ್ ಅಪ್ ಕಂಪನಿಗೆ 50 ಲಕ್ಷದಿಂದ 5 ಕೋಟಿ ವರೆಗೂ ಅನುದಾನ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ಮಹಿಳಾ ಸ್ಟಾರ್ಟ್‌ಅಪ್‌ಗ್ಳಿಗೆ 10 ಕೋಟಿ: ಮಹಿಳಾ ಸ್ಟಾರ್ಟ್‌ಅಪ್‌ಗ್ಳಿಗೆ ವಿಶೇಷ ಉತ್ತೇಜನ ನೀಡಲು ಐಟಿ ಬಿಟಿ ಇಲಾಖೆ ನಿರ್ಧರಿಸಿದ್ದು, ಅದಕ್ಕಾಗಿ 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು. ಐಟಿ ಬಿಟಿ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವ ಯುವಕರಿಗೆ ರಾಜ್ಯ ಸರ್ಕಾರ ಕಾನೂನು ನೆರವು ನೀಡುತ್ತಿದೆ.
ಈಗಾಗಲೇ ಐಟಿ ಉದ್ಯೋಗಿಗಳು ಕಾರಣ ಇಲ್ಲದೇ ಉದ್ಯೋಗ ಕಳೆದುಕೊಳ್ಳುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಐಟಿ ಉದ್ಯೋಗಿಗಳು ಸಂಘಟನೆ ಮಾಡಿಕೊಂಡಿದ್ದು, ಅಂತಹ ಸಂಘಟನೆಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಅವರ ಕಾನೂನು ಹೋರಾಟಕ್ಕೆ ಅಗತ್ಯ ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ
Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು
Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!
Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.