ಅನುದಾನ ಸಮರ್ಪಕ ಬಳಕೆಗೆ ತಾಕೀತು


Team Udayavani, Oct 27, 2017, 11:03 AM IST

malikarjun.jpg

ಬೆಂಗಳೂರು: ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಕಲ್ಪಿಸಲು ಪ್ರಸಕ್ತ ವರ್ಷ 400 ಕೋಟಿ ರೂ. ಮಂಜೂರಾಗಿದ್ದು, ಶೇ.100ರಷ್ಟು ಅನುದಾನ ಬಳಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳದೆ ರೈತರಿಗೆ ಸೌಲಭ್ಯ ಕಲ್ಪಿಸಲು ಗಮನ ಹರಿಸಬೇಕೆಂದು ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸೂಚಿಸಿದರು.

ವಿಕಾಸಸೌಧದಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಸೂಕ್ಷ್ಮ ಹನಿ ನೀರಾವರಿ ಯೋಜನೆಗಳ ಕುರಿತಂತೆ ಕೆಲ ಕೈಪಿಡಿ ಬಿಡುಗಡೆ ಮಾಡಲಾಗಿದ್ದು, ಅದು ಕೈಪಿಡಿಗಳಲ್ಲೇ ಉಳಿಯುವಂತಾಗದೆ ಕಾರ್ಯಗತವಾಗಬೇಕು. ಯೋಜನೆಯ ಪ್ರಯೋಜನ ಬೆಳೆಗಾರರಿಗೆ ತಲುಪುವಂತಾಗಬೇಕೆಂದು ಹೇಳಿದರು.

ಬಹಳಷ್ಟು ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿ ಕಾರ್ಯಪ್ರಗತಿ ನಿಧಾನಗತಿಯಲ್ಲಿದೆ. ಜಂಟಿ ನಿರ್ದೇಶಕರು ಎಣ್ಣೆ ಹಚ್ಚಿಕೊಂಡವರಂತೆ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ರೈತರಿಗೆ ಸೌಲಭ್ಯ ಕಲ್ಪಿಸಲು ಗಮನ ಹರಿಸಬೇಕು. ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ತಿಳಿಸಿದರೆ ಪರಿಹರಿಸಲಾಗುವುದು. ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಣೆಯ ದೈನಂದಿನ ವರದಿ ಸಲ್ಲಿಸಬೇಕು. ತಿಂಗಳಿಗೊಮ್ಮೆ ಆ ವಿವರವನ್ನು ನನಗೆ ನೀಡಬೇಕು ಎಂದು ಸೂಚಿಸಿದರು.

ಶೇ.100ರಷ್ಟು ಗುರಿ ಸಾಧಿಸಲು ಸೂಚನೆ
ರಾಜ್ಯದಲ್ಲಿ 20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಈ ಪೈಕಿ 5.37ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಒಟ್ಟು ನಾಲ್ಕು ಲಕ್ಷಕ್ಕೂ ಹೆಚ್ಚು ಬೆಳೆಗಾರರಿಗೆ 1730 ಕೋಟಿ ರೂ. ಸಹಾಯಧನ ನೀಡಲಾಗಿದೆ. ಮೂರು ವರ್ಷ ಸತತ ಬರ ಬಳಿಕ ಈ ಬಾರಿ ಉತ್ತಮ ಮಳೆಯಾಗಿದೆ. ಇಲಾಖೆಯಡಿ ಸೂಕ್ಷ್ಮ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 400 ಕೋಟಿ ರೂ. ಅನುದಾನ ಮಂಜೂರಾಗಿದೆ.

ಈವರೆಗೆ ಶೇ.30ರಿಂದ ಶೇ.50ರಷ್ಟು ಗುರಿ ಸಾಧನೆಯಾಗುತ್ತಿದ್ದು, ಶೇ.100ರಷ್ಟು ಗುರಿ ಸಾಧಿಸಲು ಎಲ್ಲರೂ ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು. ತೋಟಗಾರಿಕೆ ಬೆಳೆಗಳಿಗೆ ಸಂಬಂಧಪಟ್ಟಂತೆ ಹೊಸ ತಂತ್ರಜ್ಞಾನ, ಬೆಳವಣಿಗೆಗಳನ್ನು ಅಧ್ಯಯನ ಮಾಡುವಂತೆ ಸೂಚಿಸಿದರೂ ಹೆಚ್ಚಿನ ಆಸಕ್ತಿ ಕಾಣುತ್ತಿಲ್ಲ. ಹೈಡ್ರೋಫೋನಿಕ್ಸ್‌ ತಂತ್ರಜ್ಞಾನವು ಚೀನಾ, ಇಸ್ರೇಲ್‌ ಇತರೆಡೆ ಹೆಚ್ಚು ಜನಪ್ರಿಯವಾಗಿದ್ದು, ಇದನ್ನು ಬಳಸಿಕೊಳ್ಳುವತ್ತ ಗಮನ ಹರಿಸಬಹುದಾಗಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್‌ಚಂದ್ರ ರೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು 401 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದರೆ ಈವರೆಗಿನ ಪ್ರಗತಿ ಕಡಿಮೆಯಿದೆ. ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬೆಳೆಗಾರರಿಗೆ ಸೌಲಭ್ಯ ಕಲ್ಪಿಸುವತ್ತ ಗಮನ ಹರಿಸಬೇಕೆಂದು ತಿಳಿಸಿದರು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಕೃಷ್ಣ ಇತರರು ಉಪಸ್ಥಿತರಿದ್ದರು.

ಜಿಎಸ್‌ಟಿಯಿಂದ ತೆರಿಗೆ ಹೆಚ್ಚಳ
ತೋಟಗಾರಿಕೆ ಬೆಳೆಗಾರರು 1.60 ಲಕ್ಷ ರೂ. ಮೌಲ್ಯದ ಟ್ಯಾಂಕರ್‌ ಖರೀದಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ 50,000 ರೂ. ಸಬ್ಸಿಡಿ ಘೋಷಿಸಿತ್ತು. ಆದರೆ ಜಿಎಸ್‌ಟಿಯಡಿ ಶೇ.28ರಷ್ಟು ತೆರಿಗೆ ವಿಧಿಸಿರುವುದರಿಂದ ಸಬ್ಸಿಡಿಯ ಬಹುತೇಕ ಮೊತ್ತ ತೆರಿಗೆಗೆ ವಿನಿಯೋಗವಾಗಲಿದೆ. ಇದರಿಂದ ರೈತರು ಸೌಲಭ್ಯ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸಬ್ಸಿಡಿ ಹೆಚ್ಚಿಸುವ ಸಂಬಂಧ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್‌ ಹೇಳಿದರು.

ರಾಷ್ಟ್ರಪತಿ ಭವನದಿಂದ ಆಹ್ವಾನ
ರಾಷ್ಟ್ರಪತಿ ಭವನದ ಆವರಣದಲ್ಲಿನ ಹೂದೋಟವನ್ನು ವಿಶೇಷ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸುವಂತೆ ರಾಷ್ಟ್ರಪತಿ ಭವನದ ಕಾರ್ಯದರ್ಶಿಗಳು ರಾಜ್ಯ ತೋಟಗಾರಿಕೆ ಇಲಾಖೆಗೆ ಆಹ್ವಾನ ನೀಡಿದ್ದು, ಹೆಮ್ಮೆಯ ಸಂಗತಿಯಾಗಿದೆ. ಇದು ರಾಜ್ಯಕ್ಕೆ ಕೀರ್ತಿ ತರುವ ವಿಚಾರವಾಗಿದ್ದು, ಆದ್ಯತೆಯ ಮೇರೆಗೆ ಇತ್ತ ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ತಿಳಿಸಿದರು.

ಟಾಪ್ ನ್ಯೂಸ್

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

1-tirupati-laddu

Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

1-pavan

Tirupati laddu; ಪ್ರಾಯಶ್ಚಿತ ಎಂಬಂತೆ 11 ದಿನಗಳ ಉಪವಾಸ ಕೈಗೊಳ್ಳಲಿರುವ ಪವನ್ ಕಲ್ಯಾಣ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆ ಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್

LadduCase; ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್

Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ

Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

2

Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

1-dddasasa

Paris; ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಗಾಯಕನ ಮೇಲೆ ಮೊಬೈಲ್ ಎಸೆತ!

POlice

Huvina Hadagali: ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ; ಪ್ರಕರಣ ದಾಖಲು

1-tirupati-laddu

Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.