ನೂತನ ಬಸ್ ಮಾರ್ಗಕ್ಕೆ ಹಸಿರು ನಿಶಾನೆ
Team Udayavani, Feb 27, 2017, 11:56 AM IST
ಕೆಂಗೇರಿ: ನಿತ್ಯ ಸಾರ್ವಜನಿಕರು ಬಿಎಂಟಿಸಿ ಬಸ್ಗಾಗಿ 2 ಕಿ.ಮೀ. ನಡೆದುಕೊಂಡು ಬರಬೇಕಾಗಿತ್ತು. ಇದನ್ನು ತಪ್ಪಿಸಿ ಕೆ.ಆರ್.ಮಾರ್ಕೆಟ್, ಶಿವಾಜಿನಗರ, ಕೆಂಪೇಗೌಡ ಬಸ್ನಿಲ್ದಾಣಕ್ಕೆ ನೇರ ಬಸ್ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಮುನಿರತ್ನ ತಿಳಿಸಿದರು. ಮಲ್ಲತ್ತಹಳ್ಳಿ ಹೊಸ ಬಡಾವಣೆ, ಐಟಿಐ ಬಡಾವಣೆ, ಎನ್ಜಿಇಎಫ್ ಬಡಾವಣೆಗಳಿಂದ ಹೊಸದಾಗಿ ಪ್ರಾರಂಭಿಸಿರುವ ಬಿಎಂಟಿಸಿ ಮಾರ್ಗದ ಬಸ್ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಲ್ಲತ್ತಹಳ್ಳಿ ಕೆರೆಗೆ ವಿಶ್ವೇಶ್ವರಯ್ಯ ಬಡಾವಣೆ, ಡಿ ಗ್ರೂಪ್ ಬಡಾವಣೆಯ ಶೌಚಾಲಯದ ನೀರು ಬಂದು ಸೇರುತ್ತಿದ್ದು, ಕೆರೆ ವಿನಾಶದ ಅಂಚಿನಲ್ಲಿದೆ. ವಿಶ್ವೇಶ್ವರಯ್ಯ ಬಡಾವಣೆಯು ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಶಾಸಕ ಎಸ್.ಟಿ.ಸೋಮಶೇಖರ್ ಜೊತೆ ಚರ್ಚಿಸಿ ಮುಂದಿನ 6 ತಿಂಗಳೊಳಗೆ ಕೆರೆ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಮುಂದಿನ ಬಿಬಿಎಂಪಿ ಬಜೆಟ್ನಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಅನುದಾನ ನೀಡಲು ಕ್ರಮಕೈಗೊಳ್ಳಲಾಗುವುದು. ಶೌಚಾಲಯದ ನೀರು ಕೆರೆಗೆ ಸೇರುವುದನ್ನು ತಪ್ಪಿಸಿ ಅಂತರ್ಜಲ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಪರಿಸರ ಮಾಲಿನ್ಯ ಮಾಡಬಾರದು. ರಸ್ತೆ ಬದಿ, ಮನೆ ಮುಂದೆ, ಖಾಲಿ ಸೈಟು ಹೀಗೆ ಸಿಕ್ಕ ಸಿಕ್ಕ ಕಡೆ ಕಸ ಹಾಕಬಾರದು. ಗಿಡ-ಮರಗಳನ್ನು ರಕ್ಷಿಸಬೇಕು. ಆಗ ಮಾತ್ರ ಮಳೆಯಾಗಿ ಬರಗಾಲ ಮಾಯವಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.