80 ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿ ಪ್ರಚಾರಕ್ಕೆ ಗ್ರೀನ್ ಸಿಗ್ನಲ್
Team Udayavani, Dec 10, 2017, 6:40 AM IST
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ವಿಧಾನಸಭೆ ಚುನಾವಣೆ ಕಸರತ್ತು ಜೋರಾಗಿಯೇ ನಡೆಯುತ್ತಿದ್ದು ಇನ್ನೂ ಯಾರಿಗೂ ಟಿಕೆಟ್ ಖಾತ್ರಿ ಮಾಡಿಲ್ಲ ಎಂಬ ಮಾತುಗಳಿದ್ದರೂ ಬಹುತೇಕ ಹಾಲಿ ಶಾಸಕರು ಹಾಗೂ ಪ್ರಮುಖ ಕ್ಷೇತ್ರಗಳ ಆಕಾಂಕ್ಷಿಗಳಿಗೆ ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಖಾಸಗಿಯಾಗಿ ಹಾಲಿ ಶಾಸಕರು ಹಾಗೂ ಪ್ರಮುಖ ಕ್ಷೇತ್ರಗಳ ಆಕಾಂಕ್ಷಿಗಳು ಸೇರಿ 80 ಮಂದಿಗೆ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಮೌಖೀಕ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಗೆಲ್ಲುವುದೊಂದೇ ಮಾನದಂಡ ಎಂಬ ಗುರಿಯೊಂದಿಗೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಸೋಲುವ ಕ್ಷೇತ್ರಗಳಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರೂ ಟಿಕೆಟ್ ಕೊಡುವ ವಿಚಾರದಲ್ಲಿ ಜಾಣ್ಮೆಯ ಹೆಜ್ಜೆ ಇಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಗೆಲ್ಲುವ ಸೂಚನೆ ಇರುವ ಹಾಲಿ ಶಾಸಕರಿಗೆ ಈಗಾಗಲೇ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡುವಂತೆ ಸೂಚಿಸಿದ್ದು, ಕೆಲವು ಆಕಾಂಕ್ಷಿಗಳಿಗೂ ಟಿಕೆಟ್ ಭರವಸೆ ನೀಡಿದ್ದಾರೆ.
ಹಾಲಿ ಶಾಸಕರು ಸೋಲುವ ಭೀತಿ ಇರುವ ಕ್ಷೇತ್ರಗಳಲ್ಲಿ ಗೆಲ್ಲುವ ವಾತಾವರಣ ನಿರ್ಮಾಣ ಮಾಡಿಕೊಳ್ಳಲು ಜನವರಿ 15 ರವರೆಗೂ ಅವಕಾಶ ನೀಡಿದ್ದು, ಜತೆಗೆ ಆ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ಮತ್ತು ಗುರುತಿಸುವ ಕೆಲಸವನ್ನು ನಾಯಕರು ಮಾಡುತ್ತಿದ್ದಾರೆ.
ಈ ನಡುವೆ, ಕೆಲವು ಕ್ಷೇತ್ರಗಳಲ್ಲಿ ಪರಮೇಶ್ವರ್ ಒಬ್ಬರು ಅಭ್ಯರ್ಥಿಗೆ ಭರವಸೆ ನೀಡಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೂಬ್ಬರಿಗೆ ಭರವಸೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ಹೈಕಮಾಂಡ್, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಅನಗತ್ಯ ಗೊಂದಲಕ್ಕೆ ಅವಕಾಶ ಮಾಡಿಕೊಡಬೇಡಿ. ವಾಸ್ತವಾಂಶದ ಆಧಾರದಲ್ಲಿ ಕೆಲಸ ಮತ್ತು ಕಾರ್ಯಕರ್ತರು -ಮುಖಂಡರ ಜತೆ ಸಮನ್ವಯ ಸಾಧಿಸಿ ಗೆಲ್ಲಬಲ್ಲವರಿಗೆ ಆದ್ಯತೆ ನೀಡಿ ಎಂದು ಸೂಚನೆ ನೀಡಿದೆ.
ಟಿಕೆಟ್ ಖಾತ್ರಿ ಇರುವ ಅಭ್ಯರ್ಥಿಗಳು
ರಮೇಶ್ ಜಾರಕಿಹೊಳಿ-ಗೋಕಾಕ
ಸತೀಶ್ ಜಾರಕಿಹೊಳಿ -ಯಮಕನಮರಡಿ
ಫೀರೋಜ್ ಸೇs…-ಬೆಳಗಾವಿ ಉತ್ತರ
ಗಣೇಶ್ ಹುಕ್ಕೇರಿ-ಚಿಕ್ಕೋಡಿ ಸದಲಗಾ
ಅಶೋಕ ಪಟ್ಟಣ-ರಾಮದುರ್ಗ
ಸಿದ್ದು ನ್ಯಾಮಗೌ-ಜಮಖಂಡಿ
ಜೆ.ಟಿ. ಪಾಟೀಲ-ಬೀಳಗಿ
ವಿಜಯಾನಂದ ಕಾಶಪ್ಪನವರ-ಹುನಗುಂದ
ಸಿ.ಎಸ್. ನಾಡಗೌಡ.-ಮುದ್ದೆಬಿಹಾಳ್
ಎಂ.ಬಿ. ಪಾಟೀಲ್-ಬಬಲೇಶ್ವರ
ಶಿವಾನಂದ ಪಾಟೀಲ್-ಬಸವನಬಾಗೇವಾಡಿ
ಯಶವಂತರಾಯಗೌಡ ಪಾಟೀಲ-ಇಂಡಿ
ಡಾ. ಅಜಯಸಿಂಗ್-ಜೇವರ್ಗಿ
ಪ್ರಿಯಾಂಕ್ ಖರ್ಗೆ-ಚಿತ್ತಾಪುರ
ಬಿ.ಆರ್. ಪಾಟೀಲ್-ಆಳಂದ
ಡಾ. ಶರಣ ಪ್ರಕಾಶ್ ಪಾಟೀಲ್-ಸೇಡಂ
ಉಮೇಶ್ ಜಾಧವ-ಚಿಂಚೋಳಿ
ವೆಂಕಟಪ್ಪ ನಾಯಕ್-ಸುರಪುರ
ಈಶ್ವರ ಖಂಡ್ರೆ-ಭಾಲ್ಕಿ
ರಹೀಂ ಖಾನ್-ಬೀದರ್
ಹಂಪನಗೌಡ ಬಾದರ್ಲಿ-ಸಿಂಧನೂರು
ರಾಘವೇಂದ್ರ ಹಿಟ್ನಾಳ್-ಕೊಪ್ಪಳ
ಶಿವರಾಜ್ ತಂಗಡಗಿ-ಕನಕಗಿರಿ
ಬಸವರಾಜ್ ರಾಯರೆಡ್ಡಿ-ಯಲಬುರ್ಗ
ಎಚ್.ಕೆ. ಪಾಟೀಲ್-ಗದಗ
ಜಿ.ಎಸ್. ಪಾಟೀಲ್- ರೋಣ
ಬಿ.ಆರ್. ಯಾವಗಲ್-ನರಗುಂದ
ಸಿ.ಎಸ್. ಶಿವಳ್ಳಿ-ಕುಂದಗೋಳ
ವಿನಯ ಕುಲಕರ್ಣಿ-ಧಾರವಾಡ ಗ್ರಾಮೀಣ
ಸಂತೋಷ ಲಾಡ್-ಕಲಘಟಗಿ
ಆರ್.ವಿ. ದೇಶಪಾಂಡೆ-ಹಳಿಯಾಳ
ರುದ್ರಪ್ಪ ಲಮಾಣಿ-ಹಾವೇರಿ
ಇ ತುಕಾರಾಂ-ಸೊಂಡೂರು
ಡಿ. ಸುಧಾಕರ-ಹಿರಿಯೂರು
ಎಚ್. ಆಂಜನೇಯ-ಹೊಳಲ್ಕೆರೆ
ಎಸ್.ಎಸ್. ಮಲ್ಲಿಕಾರ್ಜುನ-ದಾವಣಗೆರೆ ಉತ್ತರ
ಕೆ.ಬಿ. ಪ್ರಸನ್ನಕುಮಾರ್-ಶಿವಮೊಗ್ಗ
ಕಿಮ್ಮನೆ ರತ್ನಾಕರ-ತೀರ್ಥಹಳ್ಳಿ
ಜಿ. ಎಚ್. ಶ್ರೀನಿವಾಸ-ತರಿಕೆರೆ
ಡಾ. ರಫೀಕ್ ಅಹಮದ್-ತುಮಕೂರು
ಟಿ.ಬಿ.ಜಯಚಂದ್ರ-ಶಿರಾ
ಕೆ.ಎನ್. ರಾಜಣ್ಣ-ಮಧುಗಿರಿ
ರಮೇಶ್ ಕುಮಾರ್-ಶ್ರೀನಿವಾಸಪುರ
ನಾರಾಯಣಸ್ವಾಮಿ-ಬಂಗಾರಪೇಟೆ
ಬಿ.ಎ. ಬಸವರಾಜ್, ಬೈರತಿ-ಕೆ.ಆರ್.ಪುರ
ಕೃಷ್ಣ ಬೈರೇಗೌಡ-ಬ್ಯಾಟರಾಯನಪುರ
ಎಸ್.ಟಿ. ಸೋಮಶೇಖರ-ಯಶವಂತಪುರ
ಕೆ.ಜೆ. ಜಾರ್ಜ್-ಸರ್ವಜ್ಞ ನಗರ
ರೋಷನ್ ಬೇಗ್-ಶಿವಾಜಿ ನಗರ
ಎನ್.ಎ. ಹ್ಯಾರೀಸ್-ಶಾಂತಿ ನಗರ
ದಿನೇಶ್ ಗುಂಡೂರಾವ್-ಗಾಂಧಿನಗರ
ಪ್ರಿಯಾ ಕೃಷ್ಣ-ಗೋವಿಂದರಾಜ ನಗರ
ಎಂ. ಕೃಷ್ಣಪ್ಪ-ವಿಜಯನಗರ
ರಾಮಲಿಂಗಾ ರೆಡ್ಡಿ-ಬಿಟಿಎಂ ಲೇಔಟ್
ಎಂ.ಟಿ.ಬಿ ನಾಗರಾಜ್-ಹೊಸಕೋಟೆ
ಬಿ. ಶಿವಣ್ಣ, -ಆನೇಕಲ್
ಡಿ.ಕೆ. ಶಿವಕುಮಾರ್-ಕನಕಪುರ
ಪಿ.ಎಂ. ನರೇಂದ್ರ ಸ್ವಾಮಿ-ಮಳವಳ್ಳಿ
ಎ. ಮಂಜು.-ಅರಕಲಗೂಡು
ಬಿ.ಎ. ಮೋಯಿದ್ದೀನ್ ಬಾವಾ-ಮಂಗಳೂರು ಉತ್ತರ
ಜೆ.ಆರ್. ಲೋಬೊ.-ಮಂಗಳೂರು ದಕ್ಷಿಣ
ಯು.ಟಿ. ಖಾದರ್-ಮಂಗಳೂರು
ರಮಾನಾಥ ರೈ.-ಬಂಟ್ವಾಳ
ಎಂ.ಕೆ. ಸೋಮಶೇಖರ್-ಕೃಷ್ಣರಾಜ
ವಾಸು -ಚಾಮರಾಜ ಕ್ಷೇತ್ರ
ಎಚ್.ಪಿ. ಮಂಜುನಾಥ-ಹುಣಸೂರು
ತನ್ವೀರ್ ಸೇs…-ನರಸಿಂಹರಾಜ
ಸಿದ್ದರಾಮಯ್ಯ-ಚಾಮುಂಡೇಶ್ವರಿ
ಎಚ್.ಸಿ. ಮಹದೇವಪ್ಪ-ಟಿ ನರಸೀಪುರ
ಆರ್. ನರೇಂದ್ರ-ಹನೂರು
ಮಂಕಾಳ ವೈದ್ಯ-ಭಟ್ಕಳ
ಸತೀಶ್ ಸೈಲ್-ಕಾರವಾರ
ಬಂಡಾಯಗಾರರಿಗೆ ಭರವಸೆ
ಜಮೀರ್ ಅಹಮದ್-ಚಾಮರಾಜ ಪೇಟೆ
ಚಲುವರಾಯಸ್ವಾಮಿ-ನಾಗಮಂಗಲ
ಎಚ್.ಸಿ.ಬಾಲಕೃಷ್ಣ-ಮಾಗಡಿ
ಭೀಮಾ ನಾಯ್ಕ-ಹಗರಿಬೊಮ್ಮನ ಹಳ್ಳಿ
ಇಕ್ಬಾಲ್ ಅನ್ಸಾರಿ-ಗಂಗಾವತಿ
ರಮೇಶ್ ಬಂಡಿ ಸಿದ್ದೇಗೌಡ-ಶ್ರೀರಂಗಪಟ್ಟಣ
ಡಾ.ಜಿ. ಪರಮೇಶ್ವರ್-ಕೊರಟಗೆರೆ
ಲಕ್ಷ್ಮೀ ಹೆಬ್ಟಾಳ್ಕರ್-ಬೆಳಗಾವಿ ಗ್ರಾಮೀಣ
ಡಾ. ಯತೀಂದ್ರ ಸಿದ್ದರಾಮಯ್ಯ.-ವರುಣಾ
ಬೈರತಿ ಸುರೇಶ್-ಹೆಬ್ಟಾಳ
ಎ.ಸಿ. ಶ್ರೀನಿವಾಸ-ಮಹದೇವಪುರ
ಶರಣ ಬಸಪ್ಪ ದರ್ಶನಾಪುರ-ಶಹಾಪುರ
ಬಿ.ಎಲ್. ಶಂಕರ-ದಾಸರಹಳ್ಳಿ
ವಿ. ಮುನಿಯಪ್ಪ- ಶಿಡ್ಲಘಟ್ಟ
ರವಿಶಂಕರ- ಕೆ.ಆರ್. ನಗರ
ರಾಜೇಗೌಡ-ಶೃಂಗೇರಿ
ಎಚ್.ಕೆ. ಮಹೇಶ್-ಹಾಸನ
ಗವಿಯಪ್ಪ-ಹೊಸಪೇಟೆ
ಮೋಟಮ್ಮ-ಮೂಡಗೆರೆ
ಭೀಮಸೇನ್ ರಾವ್ ಸಿಂಧೆ-ಔರಾದ್
– ಶಂಕರ ಪಾಗೋಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.