ತಿಂಗಳಾದರೂ ಬಗೆಹರಿಯದ ಜಿಎಸ್‌ಟಿ ಗೊಂದಲ


Team Udayavani, Aug 1, 2017, 7:00 AM IST

GST-1.jpg

ಬೆಂಗಳೂರು: “ಒಂದು ದೇಶ- ಒಂದು ತೆರಿಗೆ” ಪರಿಕಲ್ಪನೆಯಡಿ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಯಾಗಿ ತಿಂಗಳು ಕಳೆದಿದ್ದು, ವ್ಯಾಪಾರ- ವಹಿವಾಟು ಕ್ಷೇತ್ರದಿಂದ ಉತ್ತಮ ಸ್ಪಂದನೆ ದೊರೆತಿದೆಯಾದರೂ ಆಯ್ದ ಸರಕು ಸೇವೆಗಳ ವರ್ಗೀಕರಣ, ತೆರಿಗೆ ಪ್ರಮಾಣ, ಜಿಎಸ್‌ಟಿಯಡಿ ವ್ಯವಹಾರ ನಡೆಸುವಲ್ಲಿನ ಗೊಂದಲ ನಿವಾರಣೆಗೆ ಆದ್ಯತೆ ನೀಡಬೇಕೆಂಬ ಒತ್ತಾಯವೂ ವ್ಯಾಪಾರ-ವಹಿವಾಟು ವಲಯದಿಂದ ಕೇಳಿಬರುತ್ತಿದೆ.

ರಾಜ್ಯದಲ್ಲಿ ಈ ಹಿಂದೆ ವ್ಯಾಟ್‌ನಡಿ ವ್ಯವಹರಿಸುತ್ತಿದ್ದ ಬಹುತೇಕರು ಜಿಎಸ್‌ಟಿಗೆ ವರ್ಗಾವಣೆಗೊಂಡಿದ್ದಾರೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಹೇಳುತ್ತದೆ. ಆದರೆ ಬಹಳಷ್ಟು ಸರಕುಗಳನ್ನು ಯಾವ ಪ್ರವರ್ಗದಡಿ ಗುರುತಿಸಬೇಕು, ಅದಕ್ಕೆ ವಿಧಿಸಬೇಕಾದ ತೆರಿಗೆ
ಪ್ರಮಾಣದ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲದಿರುವುದು ಗೊಂದಲ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಗ್ರಾಹಕರು ಪ್ರತಿ ಖರೀದಿಗೆ ರಸೀದಿ ಕೇಳಿ ಪಡೆಯುವ, ತೆರಿಗೆ ವಿವರ ಪರಿಶೀಲಿಸುವ, ಲೋಪವಿದ್ದರೆ ಪ್ರಶ್ನಿಸುವ/ ದೂರು ಕೊಡುವ ಗೋಜಿಗೆ ಹೋಗದ ಕಾರಣ ಬೆಲೆ ಇಳಿಕೆಯಾಗದಂತಾಗಿದೆ. ಆ ಮೂಲಕ ಜಿಎಸ್‌ಟಿಯ ಲಾಭ ಗ್ರಾಹಕರಿಗೆ ನಿರೀಕ್ಷಿತ ಪ್ರಮಾಣದಲ್ಲಿ ತಲುಪುತ್ತಿಲ್ಲ ಎಂಬ ವಾದವೂ ಇದೆ.

ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದ ಜವಳಿ ಕ್ಷೇತ್ರಕ್ಕೆ ಶೇ.5ರಷ್ಟು ತೆರಿಗೆ ವಿಧಿಸಿರುವುದು, ಸಿದಟಛಿ ಉಡುಪು ಉದ್ಯಮದಲ್ಲಿ ಶೇ.5ರಿಂದ ಶೇ.18ರವರೆಗೆ ತೆರಿಗೆ ವಿಧಿಸಿರುವುದು ಸೇರಿ ಇತರೆ ಕೆಲ ಕ್ಷೇತ್ರಗಳಲ್ಲಿ ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿರುವುದು ಹೊರತುಪಡಿಸಿದರೆ ಹೆಚ್ಚ ನ ಆಕ್ಷೇಪ ವ್ಯಕ್ತವಾಗಿಲ್ಲ.

ಇದರಿಂದ ಜಿಎಸ್‌ಟಿಯನ್ನು ವ್ಯಾಪಾರ ಕ್ಷೇತ್ರದ ಬಹುತೇಕ ವರ್ಗ ಒಪ್ಪಿಕೊಂಡು ಅಳವಡಿಸಿಕೊಂಡಿದೆ ಎಂಬುದು ಸ್ಪಷ್ಟ ಎಂದು ಅಧಿಕಾರಿಗಳು ಹೇಳುತ್ತಾರೆ. 

ಬಗೆಹರಿಯದ ಗೊಂದಲ: ಜಿಎಸ್‌ಟಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಹಾಗೂ ವ್ಯಾಪಾರ-ವಹಿವಾಟುದಾರರ ಬಗ್ಗೆ ಸಾಕಷ್ಟು ಗೊಂದಲವಿದೆ.ಆಯ್ದ ಸರಕು- ಸೇವೆಗಳ ವರ್ಗೀಕರಣ, ಅದಕ್ಕೆ ಪೂರಕವಾದ ತೆರಿಗೆ ಪ್ರಮಾಣದ ಬಗ್ಗೆ ಉತ್ಪಾದಕರು,ವಿತರಕರು, ವರ್ತಕರಿಗಷ್ಟೇ ಅಲ್ಲದೆ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ಮೂಲ ಸರಕಿಗೆ ವಿಧಿಸುವ ತೆರಿಗೆ ಬಗ್ಗೆ ಸ್ಪಷ್ಟತೆಯಿದ್ದರೂ ಅದರ ಉಪ ಉತ್ಪನ್ನಗಳ ಕುರಿತು ಗೊಂದಲವಿದೆ. ಈ ಬಗ್ಗೆ ಪ್ರಶ್ನಿಸಿದರೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರದತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಕೆಲ ವಸ್ತುಗಳ ತೆರಿಗೆ ಪ್ರಮಾಣದಲ್ಲಿ ಏರಿಳಿತವಾಗಿದ್ದು, ಆ ಹೊರೆಯನ್ನು ವರ್ತಕರು ಇಲ್ಲವೇ ಗ್ರಾಹಕರು ಭರಿಸುವಂತಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜವಳಿಗೆ ಶೇ.5ರಷ್ಟು ತೆರಿಗೆ ವಿಧಿಸುವ ಜತೆಗೆ ಸಿದ್ಧ ಉಡುಪಿನ ಬೆಲೆಗೆ ಅನುಗುಣವಾಗಿ ತೆರಿಗೆ ವಿಧಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇದರಿಂದ ಬೆಂಗಳೂರಿನಲ್ಲಿ ಬಹಳಷ್ಟು ಜವಳಿ, ಸಿದ್ದ ಉಡುಪು ಮಳಿಗೆದಾರರು ಜಿಎಸ್‌ಟಿ ಅಳವಡಿಕೆಗೆ ಆಸಕ್ತಿ ತೋರಿಲ್ಲ. ಕೆಲ ಮಳಿಗೆಗಳಲ್ಲಿ ರಸೀದಿ ಬೇಕಾದರೆ ಇಂತಿಷ್ಟು ಜಿಎಸ್‌ಟಿ ತೆರಿಗೆ, ರಸೀದಿ ಬೇಡವಾದರೆ ತೆರಿಗೆ ಇಲ್ಲ ಎಂದು ಹೇಳುವುದು ಕಂಡುಬಂದಿದೆ.

ರಸೀದಿ ಕೇಳದ ಗ್ರಾಹಕರು: 200ರೂ.ವರೆಗಿನ ಖರೀದಿಗೆ ವರ್ತಕರು ಕಡ್ಡಾಯವಾಗಿ ರಸೀದಿ ನೀಡುವಂತಿಲ್ಲ. ಆದರೆ ಗ್ರಾಹಕರು ಕೇಳಿದರೆ ನಿರಾಕರಿಸುವಂತಿಲ್ಲ. 200 ರೂ. ಮೇಲ್ಪಟ್ಟ ಪ್ರತಿ ಖರೀದಿಗೆ ರಸೀದಿನೀಡುವುದು ಕಡ್ಡಾಯ. ರಸೀದಿ ಪಡೆದು ತೆರಿಗೆ ಪ್ರಮಾಣ ಪರಿಶೀಲಿಸಿದರೆ ಗ್ರಾಹಕರಿಗೆ ಜಿಎಸ್‌ಟಿಯ ಲಾಭ ಗೊತ್ತಾಗುತ್ತದೆ. ಆದರೆ ಬಹುತೇಕ ಗ್ರಾಹಕರು ರಸೀದಿ ಕೇಳದಿರುವುರಿಂದ ದರ ಪರಿಷ್ಕರಣೆ ಬಗ್ಗೆ ಸ್ಪಷ್ಟತೆ ಸಿಗದಂತಾಗಿದೆ.

ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಎಲ್ಲರೂ ಸ್ವಯಂಪ್ರೇರಣೆಯಿಂದ ನೋಂದಾಯಿಸಿಕೊಳ್ಳಬೇಕು. ಸರಕು-ಸೇವೆಗಳ ಎಚ್‌ಎಸ್‌ಎನ್‌ ಕೋಡ್‌, ನೋಂದಣಿ ಪ್ರಕ್ರಿಯೆ, ಸರಕು- ಸೇವೆಗಳ ಸಾಗಣೆ ವೆಚ್ಚದ ಮರುಪಾವತಿ ಹೇಗೆ ಎಂಬ ಬಗ್ಗೆ ಇನ್ನಷ್ಟು ಸ್ಪಷ್ಟತೆ ಅಗತ್ಯವಿದೆ.
– ಬಿ.ಟಿ.ಮನೋಹರ್‌, ರಾಜ್ಯ ಸರ್ಕಾರದ
ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ

ಜಿಎಸ್‌ಟಿ ಜಾರಿಯಾದ ಜು.1ರ ನಂತರ ಉತ್ಪಾದನೆಯಾದ ಆಯ್ದ ಸರಕುಗಳ ಬೆಲೆ ಇಳಿಕೆಯಾಗಿದೆ. ಮುಖ್ಯವಾಗಿ ಕ್ಷಿಪ್ರ ಮಾರಾಟವಾಗುವ ಬಹುತೇಕ ಸರಕುಗಳ (ಎಫ್ಎಂಜಿ) ಬೆಲೆಯೂ ಇಳಿಕೆಯಾಗಿದೆ. ಆದರೆ ಹೋಟೆಲ್‌ ತಿಂಡಿ- ತಿನಿಸಿನ ಬೆಲೆಗಳಲ್ಲಿ ಇಳಿಕೆಯಾಗದಿರುವುದು ಅಚ್ಚರಿ ಮೂಡಿಸಿದೆ. ಬ್ರಾಂಡೆಡ್‌ ವಸ್ತುಗಳ ಬೆಲೆ ನಿಗದಿ, ಸರಕುಗಳ ವರ್ಗೀಕರಣದಲ್ಲಿ ಗೊಂದಲಗಳಿದ್ದು, ಅಧಿಕಾರಿಗಳ ಸ್ಪಷ್ಟತೆ ನೀಡಬೇಕಿದೆ.
– ಆರ್‌.ಜಿ.ಮುರಳೀಧರ್‌, ಆರ್ಥಿಕ ತಜ್ಞ

ಜಿಎಸ್‌ಟಿ ವ್ಯವಸ್ಥೆಯಡಿ ವ್ಯವಹಾರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದರೂ ಬಹಳಷ್ಟು ಸರಕುಗಳ ವರ್ಗೀಕರಣ, ತೆರಿಗೆ ವಿವರದ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲ ಸರಕುಗಳನ್ನು ಯಾವ ವರ್ಗೀಕರಣದಡಿ ಪರಿಗಣಿಸಬೇಕೆಂಬ ಬಗ್ಗೆ ಇಲಾಖೆಗೂ ಸ್ಪಷ್ಟತೆ ಇದ್ದಂತಿಲ್ಲ.
– ಕೆ.ರವಿ, ಎಫ್ಕೆಸಿಸಿಐ ಅಧ್ಯಕ್ಷ

ಜಿಎಸ್‌ಟಿ ವ್ಯವಸ್ಥೆ ಉತ್ತಮವಾಗಿದ್ದರೂ ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ. ಜವಳಿಗೆ ಶೇ.5ರಷ್ಟು ತೆರಿಗೆಯಿದ್ದರೆ ಸಿದ್ಧ ಉಡುಪುಗಳ ಜಾಬ್‌ ವರ್ಕ್‌ಗೆ ಶೇ.18ರಷ್ಟು ತೆರಿಗೆ ಇದೆ. ಜವಳಿ ಮತ್ತು ಸಿದ್ಧ
ಉಡುಪು ಕ್ಷೇತ್ರದ ತೆರಿಗೆ ಕುರಿತೂ ಗೊಂದಲಗಳಿವೆ.
– ಹನುಮಂತೇಗೌಡ, ಕಾಸಿಯಾ ಅಧ್ಯಕ್ಷ

ಜಿಎಸ್‌ಟಿಯನ್ನು ಸ್ವಾಗತಿಸುತ್ತೇವೆ. ಆದರೆ ಸಿದ್ಧ ಉಡುಪುಗಳ ಬೆಲೆಗೆ ಅನುಗುಣವಾಗಿ ಶೇ.5ರಿಂದ ಶೇ.18ರವರೆಗೆ ತೆರಿಗೆ ಇದೆ. ಅಲ್ಲದೇ ಇನ್‌ಪುಟ್‌ ಸಬ್ಸಿಡಿ ಮೊತ್ತವನ್ನು ಮಾಸಿಕ, ತ್ತೈಮಾಸಿಕ ಇಲ್ಲವೇ ವಾರ್ಷಿಕವಾಗಿ ನೀಡಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
– ದಿಲೀಪ್‌ ಜೈನ್‌, ಕರ್ನಾಟಕ ಹೊಸೈರಿ ಮತ್ತು
ಗಾರ್ಮೆಂಟ್ಸ್‌ ಸಂಘದ ಅಧ್ಯಕ್ಷ

– ಎಂ.ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

Mudhol: ಪ್ರತ್ಯೇಕ ಅಪಘಾತ ಇಬ್ಬರು ಮೃತ್ಯು..

Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

10-bng

Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

9-bng

Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!

8-bng

Bengaluru: ಬಿಯರ್‌ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.