ಫೆ.1ರಿಂದ “ಇ-ವೇ ಬಿಲ್’ ಕಡ್ಡಾಯ
Team Udayavani, Dec 17, 2017, 6:15 AM IST
ಬೆಂಗಳೂರು: ಜಿಎಸ್‌ಟಿ ಜಾರಿ ಬಳಿಕ ರಾಜ್ಯಗಳ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಸ್ಥಗಿತಗೊಂಡು ಅಕ್ರಮವಾಗಿ ಸರಕು- ಸಾಗಣೆ ಹೆಚ್ಚಾಗಿದ್ದು, ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್‌ನಲ್ಲಿ ಸುಮಾರು 10,000 ಕೋಟಿ ರೂ.ನಷ್ಟು ತೆರಿಗೆ ಆದಾಯ ಇಳಿಕೆಯಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯಗಳ ನಡುವೆ ಸರಕು ಸಾಗಣೆಗೆ “ಇ-ವೇ ಬಿಲ್’ ವ್ಯವಸ್ಥೆಯನ್ನು ಫೆಬ್ರವರಿ 1ರಿಂದಲೇ ಕಡ್ಡಾಯಗೊಳಿಸಲಾಗಿದೆ ಎಂದು ಜಿಎಸ್‌ಟಿ ನೆಟ್ ವರ್ಕ್ ಸಚಿವರ ತಂಡದ ಮುಖ್ಯಸ್ಥರಾದ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದರು.
ನಗರದಲ್ಲಿ ಶನಿವಾರ ತಂಡದ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ತೆರಿಗೆ ಸಂಗ್ರಹದಲ್ಲಿ 9,000 ಕೋಟಿ ರೂ.ನಿಂದ 10,000 ಕೋಟಿ ರೂ. ಇಳಿಕೆಯಾಗಿದೆ.
ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಸಾಗಣೆಯಾಗುವ ಸರಕು- ಸೇವೆಗಳನ್ನು ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆ ನಡೆಸುವ ವ್ಯವಸ್ಥೆ ರದ್ದಾದ ಬಳಿಕ ಅಕ್ರಮ ಸಾಗಣೆ ಹೆಚ್ಚಾಗಿದೆ. ಇದು ತೆರಿಗೆ ಆದಾಯದಲ್ಲಿ ಏರಿಳಿತಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಜಿಎಸ್‌ಟಿ ಜಾರಿಯಾದ ಸಂದರ್ಭದಲ್ಲಿ 2018ರ ಏಪ್ರಿಲ್ 1ರಿಂದ “ಇ-ವೇ ಬಿಲ್’ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿತ್ತು. ಆದರೆ ಕಳೆದ ಡಿ.9ರಂದು ನಡೆದ ಸಭೆಯಲ್ಲಿ ತೆರಿಗೆ ಆದಾಯ ಇಳಿಕೆ ಹಿನ್ನೆಲೆಯಲ್ಲಿ ಏಪ್ರಿಲ್‌ಗೆ ಮೊದಲೇ “ಇ-ವೇ ಬಿಲ್’ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳು ಕೋರಿದ ಹಿನ್ನೆಲೆಯಲ್ಲಿ ಫೆ.1ರಿಂದಲೇ ಜಾರಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಜನವರಿ 15ರಿಂದಲೇ ದೇಶಾದ್ಯಂತ ರಾಜ್ಯ- ರಾಜ್ಯಗಳ ನಡುವೆ ಸರಕು ಸಾಗಣೆಗೆ ಪ್ರಾಯೋಗಿಕವಾಗಿ “ಇ-ವೇ ಬಿಲ್’ ವ್ಯವಸ್ಥೆ ಜಾರಿಯಾಗಲಿದೆ. ರಾಜ್ಯದೊಳಗೆ ಒಂದು ಕಡೆಯಿಂದ ಮತ್ತೂಂದು ಕಡೆಗೆ ಸರಕು ಸಾಗಣೆಗೆ “ಇ- ವೇ ಬಿಲ್’ ವ್ಯವಸ್ಥೆ ಅಳವಡಿಕೆಗೆ ಜೂ.1ರವರೆಗೆ ಕಾಲಾವಕಾಶ ನೀಡಲಾಗಿದೆ. ದೇಶದಲ್ಲೇ ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಸೆ.12ರಿಂದ ಈ ವ್ಯವಸ್ಥೆ ಜಾರಿಯಲ್ಲಿದೆ.
ಸದ್ಯ ನಿತ್ಯ 1.20 ಲಕ್ಷ ಬಿಲ್‌ಗಳು ಸೃಷ್ಟಿಯಾಗುತ್ತಿವೆ. ರಾಷ್ಟ್ರಾದ್ಯಂತ ಈ ವ್ಯವಸ್ಥೆ ಜಾರಿಯಾದರೆ ರಾಜ್ಯ-ರಾಜ್ಯಗಳ ನಡುವೆ ವಹಿವಾಟು ಸಂಬಂಧ ನಿತ್ಯ 30 ಲಕ್ಷ ಹಾಗೂ ರಾಜ್ಯಗಳ ಗಡಿಯೊಳಗೆ 8ರಿಂದ 9 ಲಕ್ಷ ಬಿಲ್‌ಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಎನ್‌ಐಸಿಗೆ ಜವಾಬ್ದಾರಿ: ದೇಶಾದ್ಯಂತ “ಇ-ವೇ ಬಿಲ್’ ವ್ಯವಸ್ಥೆ ಜಾರಿಗೆ ಪೂರಕವಾದ ಸಾಫ್ಟ್ವೇರ್ ಅಭಿವೃದಿಟಛಿ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ನ್ಯಾಷನಲ್ ಇನ್‌ಫರ್ಮೇಟಿಕ್ಸ್ ಸೆಂಟರ್‌ಗೆ (ಎನ್ ಐಸಿ) ವಹಿಸಲಾಗಿದೆ. ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಸಂಸ್ಥೆಗೆ ಈಗಾಗಲೇ 40 ಕೋಟಿ ರೂ. ಮುಂಗಡವಾಗಿ ನೀಡಲಾಗಿದೆ ಎಂದು ಹೇಳಿದರು.
ಜಿಎಸ್‌ಟಿ ಜಾರಿಗೊಳಿಸುವ ಸಂಬಂಧದಲ್ಲಿ “ಇ-ವೇ ಬಿಲ್’ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಚಿಂತನೆಯಿರಲಿಲ್ಲ. ನಂತರ ನಿರ್ಧಾರ ಕೈಗೊಂಡಿದ್ದ ರಿಂದ ಇನ್ಫೋಸಿಸ್ ಸಂಸ್ಥೆಗೆ ಬದಲಾಗಿ ಎನ್‌ಐಸಿಗೆ ವಹಿಸಲಾಗಿದೆ. ಅಲ್ಲದೇ ಎನ್‌ಐಸಿಗೆ ಕೆಲ ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿದ ಅನುಭವವಿರುವುದರಿಂದ ಜವಾಬ್ದಾರಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಶೇ.80ರಷ್ಟು ದೂರು ಇಳಿಕೆ: ಇನ್ಫೋಸಿಸ್ ಸಂಸ್ಥೆಯು ಜಿಎಸ್‌ಟಿ ನೆಟ್‌ವರ್ಕ್‌ನಡಿ ನೀಡುತ್ತಿರುವ ಸೇವೆ ತೃಪ್ತಿಕರವಾಗಿದೆ. ಆರಂಭದ ದಿನಗಳಿಗೆ ಹೋಲಿಸಿದರೆ ಈಗ ಶೇ.80ರಷ್ಟು ದೂರುಗಳು ಕಡಿಮೆಯಾಗಿವೆ. ಈ ನೆಟ್‌ವರ್ಕ್ ಸೇವೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈವರೆಗೆ 65 ಕೋಟಿ ಇನ್‌ವಾಯ್ಸ ಪ್ರಕ್ರಿಯೆ ಪೂರ್ಣಗೊಳಿಸಿದೆ. 1.40 ಕೋಟಿ ಹಣ ಪಾವತಿ/ ವಹಿವಾಟು ಕೂಡ ಯಶಸ್ವಿಯಾಗಿ ನಡೆದಿದೆ. ಜಿಎಸ್‌ಟಿ ಪ್ರಕ್ರಿಯೆಗಳನ್ನು ಸರಳಗೊಳಿಸುವ ಕಾರ್ಯಕ್ಕೂ ಒತ್ತು ನೀಡಿದೆ ಎಂದು ಹೇಳಿದರು.ಶೇ.30ರಷ್ಟು ಶೂನ್ಯ ತೆರಿಗೆದಾರರು: ಜಿಎಸ್‌ಟಿಯಡಿ ನೋಂದಣಿ ಮಾಡಿಕೊಂಡವರ ಪೈಕಿ ಶೂನ್ಯ ತೆರಿಗೆ ಪಾವತಿದಾರರ ಸಂಖ್ಯೆ ಗಣನೀಯವಾಗಿದೆ.
ಜುಲೈನಲ್ಲಿ ಶೇ.42, ಆಗಸ್ಟ್‌ನಲ್ಲಿ ಶೇ.32, ಸೆಪ್ಟೆಂಬರ್ ಹಾಗೂ ಆಕ್ಟೋಬರ್‌ನಲ್ಲಿ ತಲಾ ಶೇ.30ರಷ್ಟು ವ್ಯಾಪಾರ- ವಹಿವಾಟುದಾರರು ಶೂನ್ಯ ತೆರಿಗೆದಾರರಾಗಿದ್ದಾರೆ. ವಾರ್ಷಿಕ 1.5 ಕೋಟಿ ರೂ. ವರೆಗೆ ವಹಿವಾಟು ನಡೆಸುವವರಿಂದ ಶೇ.5.5ರಷ್ಟು ತೆರಿಗೆ ಆದಾಯ ಸಂಗ್ರಹವಾಗುತ್ತಿದೆ. ವಾರ್ಷಿಕ 100 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವವರಿಂದ ಶೇ.70ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಫ್ತು ಪ್ರಮಾಣ ಹೆಚ್ಚಳ: ರಫ್ತು ವಹಿವಾಟುದಾರರಿಗೆ ಹುಟ್ಟುವಳಿ ತೆರಿಗೆ ಮರು ಪಾವತಿ ಶುರುವಾಗಿದ್ದು,ವಹಿವಾಟು ಪ್ರಮಾಣವೂ ವೃದಿಟಛಿಸುತ್ತಿದೆ. ನವೆಂಬರ್‌ನಲ್ಲಿ ರಫ್ತು ಪ್ರಮಾಣ ಶೇ.30.6ರಷ್ಟು ಹೆಚ್ಚಳ ಕಂಡಿದೆ. ನವೆಂಬರ್‌ನಲ್ಲಿ ಹರಳು, ಚಿನ್ನಾಭರಣ ರಫ್ತು ಪ್ರಮಾಣವೂ ಶೇ.32.7ರಷ್ಟು ಹೆಚ್ಚಾಗಿದೆ. ಒಟ್ಟಾರೆ ಜಿಎಸ್‌ಟಿಯಡಿ ವ್ಯವಹಾರ ಸುಗಮವಾಗುತ್ತಿದೆ ಎಂದು ಹೇಳಿದರು.
ಏನಿದು “ಇ-ವೇ ಬಿಲ್’?
ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಸೆ.12ರಿಂದ ಇ-ವೇ ಬಿಲ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹಾಗಾಗಿ ರಾಜ್ಯದಲ್ಲಿ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. 50 ಸಾವಿರ ರೂ.ಗಿಂತ ಹೆಚ್ಚಿನ ಮೌಲ್ಯದ ಸರಕನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸುವಾಗ “ಎಲೆಕ್ಟ್ರಾನಿಕ್ ವೇ ಬಿಲ್’ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಆನ್‌ಲೈನ್‌ನಲ್ಲಿ ಡಿಲಿವೆರಿ ನೋಟ್
ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ಸರಕು ರವಾನಿಸುವವರು, ಸ್ವೀಕರಿಸುವವರ ವಿವರ, ಟ್ರಾನ್ಸ್ ಪೋರ್ಟರ್ ವಿವರ, ವಾಹನ ಸಂಖ್ಯೆ, ಸರಕಿನ ಪ್ರಮಾಣ, ಮೌಲ್ಯ, ಸಂಖ್ಯೆ ಇತರೆ ವಿವರವಿರುತ್ತದೆ. 10 ಕಿ.ಮೀ. ಅಂತರದೊಳಗಿನ ಸರಕು ಸಾಗಣೆಗೆ ವಾಹನ ನೋಂದಣಿ ಸಂಖ್ಯೆ ನಮೂದನೆಗೆ ವಿನಾಯ್ತಿ ನೀಡಲಾಗಿದೆ. ಈ ರಸೀದಿಯೊಂದಿಗೆ ಸರಕುಸಾಗಿಸುವುದು ಕಡ್ಡಾಯವಾಗಲಿದೆ.
ಇದರಿಂದ ಪ್ರತಿಯೊಂದು ವ್ಯವಹಾರವೂ ದಾಖಲಾಗಿದ್ದು,ನಿಗಾ ವಹಿಸಲು ಅನುಕೂಲವಾಗಲಿದೆ. ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ “ಇ-ಸುಗಮ’ ವ್ಯವಸ್ಥೆಯನ್ನೇ “ಇ-ವೇ ಬಿಲ್’ವ್ಯವಸ್ಥೆಗೆ ಬದಲಾಯಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.