ಜಿಎಸ್‌ಟಿ ವಂಚನೆ: ಉದ್ಯಮಿ ಬಂಧನ
Team Udayavani, Jul 8, 2018, 6:00 AM IST
ಬೆಂಗಳೂರು: ಜಿಎಸ್‌ಟಿಯಡಿ 15 ಕೋಟಿ ರೂ.ತೆರಿಗೆ ವಂಚಿಸಿದ ಆರೋಪದಡಿ ಬೆಂಗಳೂರಿನ ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ. ಜಿಎಸ್‌ಟಿ ವಂಚನೆ ಸಂಬಂಧ ರಾಜ್ಯದಲ್ಲಿ ಇದು ಪ್ರಥಮ ಬಂಧನವಾಗಿದೆ.
ಕೇಂದ್ರೀಯ ತೆರಿಗೆಗಳ ಇಲಾಖೆಯ ಬೆಂಗಳೂರು ದಕ್ಷಿಣ ಜಿಎಸ್‌ಟಿ ಆಯುಕ್ತಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಉದ್ಯಮಿಯನ್ನು ಬಂಧಿಸಿದರು. ಜಿಎಸ್‌ಟಿಯಡಿ ಗ್ರಾಹಕರಿಂದ ಸಂಗ್ರಹಿಸಿದ್ದ ತೆರಿಗೆಯನ್ನು ಪಾವತಿಸದ ಬೆಂಗಳೂರಿನ ಬೊಮ್ಮಸಂದ್ರದಲ್ಲಿನ ಆಟೋಮೊಬೈಲ್ ಕೈಗಾರಿಕೆಯೊಂದರ ವ್ಯವಸ್ಥಾಪಕ ನಿರ್ದೇಶಕರೇ ಬಂಧನ ಕ್ಕೊಳಗಾದ ವ್ಯಕ್ತಿ. ಬಳಿಕ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿದಾಗ ಎರಡು ವಾರದೊಳಗೆ 15 ಕೋಟಿ ರೂ. ಪಾವತಿಸುವಾಗಿ ಉದ್ಯಮಿ ಮುಚ್ಚಳಿಕೆ ನೀಡಿದ ಹಿನ್ನೆ ಲೆಯಲ್ಲಿ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾ ರೆ.
ನೂತನ ಜಿಎಸ್‌ಟಿ ವ್ಯವಸ್ಥೆ ಜಾರಿಯಾಗಿ ವರ್ಷ ಕಳೆದಿದ್ದು, ಎಲ್ಲ ತೆರಿಗೆದಾರರು ಸಮರ್ಪಕವಾಗಿ ತೆರಿಗೆ ಪಾವತಿಸುವಂತೆ ಕೇಂದ್ರೀಯ ತೆರಿಗೆ ಇಲಾಖೆಯೂ ಮೇಲ್ವಿಚಾರಣೆ ನಡೆಸುತ್ತಿದೆ. ಅದರಂತೆ ಮೇಲ್ವಿಚಾರಣೆ ನಡೆಸುವಾಗ ಆಟೋಮೊಬೈಲ್ ಕೈಗಾರಿಕೆಯೊಂದು ಭಾರಿ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಕಂಡುಬಂತು. ಕೂಡಲೇ ಅಧಿಕಾರಿಗಳು ಆ ಕಂಪೆನಿಯ ವಹಿವಾಟು, ತೆರಿಗೆ ಬಗ್ಗೆ ಪರಿಶೀಲನೆ ಆರಂಭಿಸಿದ್ದರು.
ವಂಚನೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದ ಕೂಡಲೇ ಕಂಪೆನಿಯ ಮೇಲೆ ದಾಳಿ ನಡೆಸಿ ವ್ಯವಹಾರಕ್ಕೆ ಸಂಬಂಧಪಟ್ಟ ರಸೀದಿ, ಇನ್‌ವಾಯ್ಸಗಳು, ಪಾವತಿಗಳನ್ನು ಪರಿಶೀಲಿಸಲಾಯಿತು. ಜಿಎಸ್‌ಟಿ ಜಾರಿಯಾದ 2017ರ ಜುಲೈ ತಿಂಗಳ ತೆರಿಗೆಯನ್ನಷ್ಟೇ ಕಂಪೆನಿ ಪಾವತಿಸಿತ್ತು. ನಂತರದ ಅಂದರೆ 2017ರ ಆಗಸ್ಟ್‌ನಿಂದ 2018ರ ಮೇ ತಿಂಗಳವರೆಗಿನ ತೆರಿಗೆ ಪಾವತಿಸದಿರುವುದು ಕಂಡುಬಂತು. ಕಂಪೆನಿಯು ತನ್ನ ಗ್ರಾಹಕರಿಗೆ ಜಿಎಸ್‌ಟಿ ತೆರಿಗೆ ವಿಧಿಸಿ ಅವರಿಂದ ಸಂಗ್ರಹಿಸಿದ್ದರೂ ಅದನ್ನು ಇಲಾಖೆಗೆ ಪಾವತಿಸದೆ ಸುಮಾರು 15 ಕೋಟಿ ರೂ. ವಂಚಿಸಿರುವುದು ಬಯಲಾಯಿತು.
ಕೂಡಲೇ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಬಂಧಿಸಲಾಯಿತು. ಬಳಿಕ ಮ್ಯಾಜಿಸ್ಟೇಟ್ ಮುಂದೆ ಹಾಜರುಪಡಿಸಿದಾಗ ಉದ್ಯಮಿಯು ಎರಡು ವಾರಗಳಲ್ಲಿ ತೆರಿಗೆ ಪಾವತಿಸುವುದಾಗಿ ಭರವಸೆ ನೀಡಿದರು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಡ ತೆರಿಗೆದಾರರ ಮೇಲೆ ಕಣ್ಣು
ಜಿಎಸ್‌ಟಿ ಜಾರಿಯಾಗಿ ಒಂದು ವರ್ಷ ಕಳೆದಿದ್ದು, ಪ್ರತಿ ತೆರಿಗೆದಾರರು ನಿಯಮಾನುಸಾರ ಸೂಕ್ತ ತೆರಿಗೆ ಪಾವತಿಸುತ್ತಿದ್ದಾರೆ ಎಂಬ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆದಿದೆ. ಅದರಲ್ಲೂ ಒಂದು ಕೋಟಿ ರೂ., ಐದು ಕೋಟಿ ರೂ. ಮೊತ್ತದ ತೆರಿಗೆ ಪಾವತಿದಾರರ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಅವರ ವಹಿವಾಟು, ವಿಧಿಸುತ್ತಿರುವ ಜಿಎಸ್‌ಟಿ, ಪಾವತಿಯ ಬಗ್ಗೆ ಸಲ್ಲಿಸುವ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ತೆರಿಗೆ ವಂಚನೆದಾರರ ವಿರುದ್ಧ ನಿದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರೀಯ ತೆರಿಗೆಗಳ ಇಲಾಖೆಯ ಬೆಂಗಳೂರು ದಕ್ಷಿಣ ಜಿಎಸ್‌ಟಿ ಆಯುಕ್ತಾಲಯದ ತಡೆ ಘಟಕವು (ಪ್ರಿವೆನÒನ್ ಯುನಿಟ್) ಕಾರ್ಯಾಚರಣೆ ನಡೆಸಿ 15 ಕೋಟಿ ರೂ. ತೆರಿಗೆ ಪಾವತಿಸದ ಆಟೋಮೊಬೈಲ್ ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕರನ್ನು ಬಂಧಿಸಲಾಗಿದೆ. ತೆರಿಗೆ ವಂಚಿಸಿರುವುದನ್ನು ಉದ್ಯಮಿ ಒಪ್ಪಿಕೊಂಡಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ.
– ಜಿ.ನಾರಾಯಣಸ್ವಾಮಿ, ಕೇಂದ್ರೀಯ ತೆರಿಗೆ ಆಯುಕ್ತ, ಬೆಂಗಳೂರು ದಕ್ಷಿಣ ಆಯುಕ್ತಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.