ಮಾಲ್ಗಳಲ್ಲಿ ಆಗಿಲ್ಲ ಜಿಎಸ್ಟಿ ಜಾರಿ!
Team Udayavani, Jul 11, 2017, 11:20 AM IST
ಬೆಂಗಳೂರು: ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಜಾರಿಯಾಗಿ 10 ದಿನ ಕಳೆದರೂ ಪ್ರತಿಷ್ಠಿತ ಮಾಲ್ಗಳಲ್ಲಿ ಜಿಎಸ್ಟಿಯಡಿ ತೆರಿಗೆ ವರ್ಗೀಕರಣ, ಆಯ್ದ ವಿವರ ಸಮರ್ಪಕವಾಗಿ ದಾಖಲಾಗದಿರುವುದು ಬೆಳಕಿಗೆ ಬಂದಿದೆ.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ನಗರದ ಮಂತ್ರಿಮಾಲ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮೇಲ್ಕಂಡ ಅಂಶಗಳು ಕಂಡುಬಂದಿವೆ. ತಕ್ಷಣವೇ ಅಧಿಕಾರಿಗಳು ಮಳಿಗೆದಾರರಿಗೆ ಮಾಹಿತಿ ನೀಡಿ ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಮಂತ್ರಿಮಾಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೆಲ ಮಳಿಗೆದಾರರು ಕೇಂದ್ರ ಹಾಗೂ ರಾಜ್ಯ ಜಿಎಸ್ಟಿ ತೆರಿಗೆ ವಿವರವನ್ನು ಪ್ರತ್ಯೇಕವಾಗಿ ನಮೂದಿಸದಿರುವುದು, ಗಣಕೀಕೃತ ರಸೀದಿಯಲ್ಲಿ ಕೆಲ ವಿವರಗಳನ್ನು ಸಮರ್ಪಕವಾಗಿ ನಮೂದಿಸದಿರುವುದು ಕಂಡುಬಂತು.
ಈ ಬಗ್ಗೆ ಮಳಿಗೆದಾರರಿಗೆ ಅರಿವು ಮೂಡಿಸಲಾಗಿದೆ. ಜಿಎಸ್ಟಿಐಎನ್ ಸಂಖ್ಯೆಯನ್ನು ದ್ವಿಪ್ರತಿಯಲ್ಲಿ ನಮೂದಿಸುವಂತೆ ಸೂಚಿಸಲಾಗಿದೆ. ಪರಿಶೀಲನೆಯ ಮುಖ್ಯ ಉದ್ದೇಶ ಮಳಿಗೆದಾರರಲ್ಲೂ ಜಾಗೃತಿ ಮೂಡಿಸುವುದಾಗಿದ್ದು, ಮುಂದುವರಿಯಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಬಿ.ವಿ. ಮುರಳಿಕೃಷ್ಣ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.