ಅಲ್ಪಜ್ಞರಿಂದ ಮಾರ್ಗದರ್ಶನಇಂದಿನ ದುರಂತ: ಬನ್ನಂಜೆ
Team Udayavani, Dec 28, 2017, 11:37 AM IST
ಬೆಂಗಳೂರು: ಏನೂ ಗೊತ್ತಿಲ್ಲದವರು ಜಗತ್ತಿಗೆ ಉಪದೇಶ ಮಾಡಲು ಹೊರಟಿರುವುದು. ಅರೆಬರೆ ತಿಳಿದಿರುವ ಅಲ್ಪಜ್ಞರು ಮಾರ್ಗದರ್ಶನ ಮಾಡುತ್ತಿರುವುದು ದುರಂತ ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ತೀಕ್ಷ್ಣವಾಗಿ ಹೇಳಿದ್ದಾರೆ.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬುಧವಾರ ನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಬನ್ನಂಜೆ ಪುರಸ್ಕಾರ-2017′ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಪರಂಪರೆ ಮತ್ತು ಜಾತಿ ಮಾತ್ರ ಶ್ರೇಷ್ಠ ಎಂಬ ಭ್ರಮೆಯಲ್ಲಿ ಎಲ್ಲರೂ ಇದ್ದಾರೆ ಎಂದು ಹೇಳಿದರು.
ಸಾಧಕರ ವಿಶೇಷತೆ: ಸತ್ಸಂಗ ಫೌಂಡೇಷನ್ ಬೆಂಗಳೂರು ಇದರ ಅಧ್ಯಕ್ಷ ಶ್ರೀ ಎಂ ಮಾತನಾಡಿ, ಬೌದ್ಧಿಕತೆ ಎಲ್ಲವೂ ಅಲ್ಲ ಅನ್ನುವುದು ವೇದ- ಉಪನಿಷತ್‌ಗಳು ಸಾಬೀತುಪಡಿಸಿವೆ ಎಂದರು, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಬನ್ನಂಜೆಯವರ ಬರಹದ ವಿಸ್ತಾರ ವಿಶಾಲವಾದದ್ದು. ಅವರ ಬರಹ ಭೂಮಿ ಮತ್ತು ವ್ಯೂಮವನ್ನು ವ್ಯಾಪಿಸಿದೆ ಎಂದು ಹೇಳಿದರು.
ಅಧ್ಯಯನ ಕೇಂದ್ರ: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವೀಣಾ ಬನ್ನಂಜೆ ಮಾತನಾಡಿ, ಪ್ರತಿಷ್ಠಾನದಿಂದ ಬೆಂಗಳೂರಿನಲ್ಲಿ “ಬನ್ನಂಜೆ ಅಧ್ಯಯನ ಕೇಂದ್ರ’ ಸ್ಥಾಪಿಸುವ ಯೋಜನೆಯಿದೆ. ಇದರಲ್ಲಿ ಬನ್ನಂಜೆಯವರ ಸಾಹಿತ್ಯ ಅಧ್ಯಯನಕ್ಕೆ ಗ್ರಂಥಾಲಯ. ಭಾಷಣಗಳ ಆಡಿಯೋ ಮತ್ತು ವಿಡಿಯೋ ವೀಕ್ಷಣೆಗೆ ಅವಕಾಶ. ಜೊತೆಗೆ ಬನ್ನಂಜೆಯವರು ಅಲ್ಲೇ ವಾಸ ಮಾಡುವ ವ್ಯವಸ್ಥೆಯ ಇರುತ್ತದೆ. ಅಲ್ಲದೇ ಒಂದು ಸಭಾಂಗಣ ಮಾಡಿ ಅಲ್ಲಿ ಬನ್ನಂಜೆಯವರ ಉಪನ್ಯಾಸಗಳು ನಿರಂತರವಾಗಿ ನಡೆಯುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪುರಸ್ಕಾರ: ಈ ವೇಳೆ ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಡಾ. ಶಂಕರ್ ರಾಜಾರಾಮನ್ ಅವರಿಗೆ 2017ನೇ ಸಾಲಿನ “ಬನ್ನಂಜೆ ಪುರಸ್ಕಾರ’ ಪ್ರದಾನ ಮಾಡಲಾಯಿತು. ಅಲ್ಲದೇ ಬನ್ನಂಜೆಯವರ ಕವನ ಸಂಕಲನ “ಇನ್ನಷ್ಟು ಹೇಳದೆ ಉಳಿದದ್ದು ಹಾಗೂ ವಿಷ್ಣು ಪುರಾಣದ ಕನ್ನಡ ರೂಪ “ಪರಾಶರ ಕಂಡ ಪರತತ್ವ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.