ಕ್ಯಾಬ್ ಚಾಲಕನ ಹತ್ಯೆಗೈದವನಿಗೆ ಗುಂಡೇಟು
Team Udayavani, Dec 25, 2019, 3:05 AM IST
ಬೆಂಗಳೂರು: ಇತ್ತೀಚೆಗೆ ಕ್ಯಾಬ್ ಚಾಲಕ ರಘು ಎಂಬಾತನನ್ನು ನಡುರಸ್ತೆಯಲ್ಲೇ ಹತ್ಯೆಗೈದು ಪರಾರಿಯಾಗಿದ್ದ ಸುಪಾರಿ ಹಂತಕನಿಗೆ ಉತ್ತರ ವಿಭಾಗದ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ಚೆನ್ನೈ ಮೂಲದ ಬಾಬು ಶಿವಕುಮಾರ್ (25) ಎಂಬಾತನಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ ಆರೋಪಿಯ ಹಲ್ಲೆಯಿಂದ ಗಾಯಗೊಂಡಿರುವ ಹೆಡ್ ಕಾನ್‌ಸ್ಟೆಬಲ್ ಅನಂತರಾಜು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆ ಪ್ರಕರಣ ಸಂಬಂಧ ಈಗಾಗಲೇ ಪ್ರಭಾಕರನ್ ಹಾಗೂ ನರಸಿಂಹ ಎಂಬವರನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು.
ಬಾಬು ಶಿವಕುಮಾರ್ ವಿರುದ್ಧ ನಗರದಲ್ಲಿ ಇದುವರೆಗೂ ಯಾವುದೇ ಪ್ರಕರಣಗಳು ದಾಖ ಲಾಗಿಲ್ಲ. ಆದರೆ, ಕೆಲವೊಂದು ಹತ್ಯೆ ಪ್ರಕರಣಗಲ್ಲಿ ಭಾಗಿಯಾಗಿರುವ ಮಾಹಿತಿಯಿದ್ದು, ತನಿಖೆ ಮುಂದುವರಿಸಲಾಗಿದೆ. ಕೆಲ ತಿಂಗಳ ಹಿಂದೆ ಲಗ್ಗೆರೆ ನಿವಾಸಿ ಕ್ಯಾಬ್ ಚಾಲಕ ರಘು ಹಣಕಾಸು ಹಾಗೂ ವೈಯಕ್ತಿಕ ವಿಚಾರಕ್ಕೆ ಪ್ರಭಾಕರನ್ ಚಿಕ್ಕಪ್ಪ ಮೂರ್ತಿ ಎಂಬವರ ಮೇಲೆ ಹಲ್ಲೆ ನಡೆಸಿದ್ದ.
ಈ ವಿಚಾರ ತಿಳಿದ ಪ್ರಭಾಕರನ್ ಒಂದೆರಡು ಬಾರಿ ರಘು ಮೇಲೆ ಹಲ್ಲೆ ನಡೆಸಲು ಸಿದ್ಧತೆ ನಡೆಸಿದ್ದ. ಆದರೆ, ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನು ಚೆನ್ನೈನಲ್ಲಿರುವ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದು, ಚಾಲಕನ ಕೊಲೆಗೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದ.
ಆಗ ಅವರು ಚೆನ್ನೈನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ತಮ್ಮ ಸ್ನೇಹಿತ ಬಾಬು ಶಿವಕುಮಾರ್ ಬಗ್ಗೆ ತಿಳಿಸಿದ್ದರು. ಡಿಸೆಂಬರ್‌ನಲ್ಲಿ ಆಗಮಿಸಿದ್ದ ಅವರು ಹಣದ ಆಸೆಗೆ ಕೃತ್ಯವೆಸಗಿದ್ದರು. ಕೃತ್ಯದ ಬಳಿಕ ಪ್ರಭಾಕರನ್, ಬಾಬುಗೆ 50 ಸಾವಿರ ರೂ. ಹಣ ಕೊಟ್ಟು ತಲೆಮರೆಸಿಕೊಳ್ಳುವಂತೆ ಸೂಚಿಸಿದ್ದ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಪ್ರರಕಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ನಂದಿನಿ ಲೇಔಟ್ ಪೊಲೀಸರು, ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ನರಸಿಂಹನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಭಾಕರನ್ ಮತ್ತು ಬಾಬು ಬಗ್ಗೆ ಮಾಹಿತಿ ನೀಡಿದ್ದ. ಈ ಸಂಬಂಧ ಪ್ರಭಾಕರನ್‌ನನ್ನು ಬಂಧಿಸಲಾಗಿತ್ತು. ಅನಂತರ ಬಾಬು ಶಿವಕುಮಾರ್ ಪತ್ತೆಗೆ ನಂದಿನಿ ಲೇಔಟ್ ಇನ್‌ಸ್ಪೆಕ್ಟರ್ ಲೋಹಿತ್ ಮತ್ತು ಮಹಾಲಕ್ಷ್ಮೀ ಲೇಔಟ್ ಠಾಣೆ ಪಿಎಸ್‌ಐ ವೆಂಕಟರಮಣ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಎರಡು ಕಾಲುಗಳಿಗೂ ಗುಂಡು: ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ ತನಗೆ ಪೊಲೀಸರು ಹುಡುಕಾಟ ನಡೆಸುತ್ತಿರುವ ಮಾಹಿತಿ ಪಡೆದು ಸ್ನೇಹಿತರೊಬ್ಬರ ಸಲಹೆ ಮೇರೆಗೆ ಜಾಲಹಳ್ಳಿ ಠಾಣೆ ವ್ಯಾಪ್ತಿಯ ಎಚ್‌ಎಂಟಿ ಬಸ್ ನಿಲ್ದಾಣ ಸಮೀಪದ ನಿರ್ಜನ ಪ್ರದೇಶದಲ್ಲಿ ಅವಿತುಕೊಂಡಿದ್ದ. ಮಹಾಲಕ್ಷ್ಮೀ ಲೇಔಟ್ ಠಾಣೆ ಪಿಎಸ್‌ಐ ವೆಂಕಟರಮಣ ಮತ್ತು ಎಚ್‌ಸಿ ಅನಂತರಾಜು ಆರೋಪಿಯನ್ನು ಬಂಧಿಸಲು ಮುಂದಾಗಿದ್ದು, ಆರೋಪಿ ಅನಂತರಾಜು ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಆಗ ಪಿಎಸ್‌ಐ ವೆಂಕಟರಮಣ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಸೂಚಿಸಿ ದ್ದರೂ, ಮತ್ತೆ ಹಲ್ಲೆಗೆ ಯತ್ನಿಸಿದ್ದಾನೆ. ಪಿಎಸ್‌ಐ ವೆಂಕಟರಮಣ ಆತ್ಮರಕ್ಷಣೆಗಾಗಿ ಬಾಬುನ ಒಂದು ಕಾಲಿಗೆ ಗುಂಡು ಹೊಡೆದಿ ದ್ದಾರೆ. ಆದರೂ, ಪಿಎಸ್‌ಐ ಮೇಲೆಯೇ ಹಲ್ಲೆಗೆ ಮುಂದಾದಾಗ ಮತ್ತೂಂದು ಕಾಲಿಗೂ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು.
ಹಣದ ಆಸೆಗೆ ಕೃತ್ಯ: ಈ ಸಂಬಂಧ ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದಿದ್ದ ಬಾಬು ಶಿವಕುಮಾರ್‌ಗೆ ರಘು ಕೊಲೆಗೆ 50 ಸಾವಿರ ರೂ. ಕೊಡುವುದಾಗಿ ಹೇಳಿದ್ದ. ಹಣದಾಸೆಗೆ ಆರೋಪಿ ತನ್ನ ಸಹಚರ ನರಸಿಂಹ ಹಾಗೂ ಪ್ರಭಾಕರನ್ ಜತೆ ಸೇರಿ ಡಿ.11ರ ತಡರಾತ್ರಿ 11 ಗಂಟೆ ಸುಮಾರಿಗೆ ಲಗ್ಗೆರೆ ಮುಖ್ಯರಸ್ತೆಯಲ್ಲಿ ಕ್ಯಾಬ್‌ನಲ್ಲಿ ಹೋಗುತ್ತಿದ್ದ ರಘುನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.