ಸರ್ಕಾರಿ ಶಾಲಾ ಶಿಕ್ಷಕರಿಗೆ “ಗುರು ಚೇತನ’
Team Udayavani, Aug 3, 2017, 11:46 AM IST
ಬೆಂಗಳೂರು: ಸರ್ಕಾರಿ ಶಾಲೆಯ ಶಿಕ್ಷಕರ ಜ್ಞಾನ ಹಾಗೂ ಬೋಧನಾ ಕ್ರಮದ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿನೂತನ ಕಾರ್ಯತಂತ್ರ ರೂಪಿಸಿದೆ. ಸರ್ಕಾರಿ ಶಾಲಾ ಶಿಕ್ಷಕರ ಬಲವರ್ಧನೆಗೆ ಇಲಾಖೆಯಿಂದ ಆಗಾಗ ತರಬೇತಿಗಳನ್ನು ನೀಡಲಾಗುತ್ತದೆ.
ವಿಶೇಷ ಯೋಜನೆಗಳು ಬಂದಾಗ ಪ್ರತ್ಯೇಕ ತರಬೇತಿ ನೀಡುವ ವ್ಯವಸ್ಥೆಯೂ ಇದೆ. ಇಲಾಖೆಯಿಂದ ನೀಡುವ ಇಂಥ ತರಬೇತಿ ಬಹುತೇಕ ಶಿಕ್ಷಕರಿಗೆ ಇಷ್ಟವೇ ಇರುವುದಿಲ್ಲ. ಇಲಾಖೆಯ ಅಧಿಕಾರಿಗಳ ಒತ್ತಡಕ್ಕೆ ಅನಿವಾರ್ಯವಾಗಿ ತರಬೇತಿಗೆ ಹೋಗಲೇ ಬೇಕಾಗುತ್ತದೆ.
ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿ ತುಂಬುವ ನೆಲೆಯಲ್ಲಿ ಅವರ ಜ್ಞಾನ ಮತ್ತು ಬೋಧನಾ ವಿಧಾನ ಇರಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಲು “ಗುರು-ಚೇತನ’ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸುತ್ತಿದೆ. ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಏನಿದು ಗುರು-ಚೇತನ?
ನಿತ್ಯವೂ ಹೊಸ ವಿಷಯ ಹಾಗೂ ವಿಚಾರಗಳೊಂದಿಗೆ ಪಾಠ ಕಲಿಸುವ ಗುರುಗಳು ಚೇತನ ಶೂನ್ಯರಾಗದೇ, ಚಲನಶೀಲತೆ ಹಾಗೂ ಚೈತನ್ಯ ತುಂಬುವವರಾಗಿರಬೇಕು. ಹಳೆಯ ಬೋಧನಾ ವಿಧಾನವನ್ನೇ ಅನುಸರಿಸದೇ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಮನದಟ್ಟು ಮಾಡುವ ನಿಟ್ಟಿನಲ್ಲಿ ಹೊಸ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕು. ಹಾಗೆಯೇ ಜ್ಞಾನದ ವೃದ್ಧಿಗೂ ಸಹಕಾರಿಯಾಗಲು ಗುರು-ಚೇತನ ವೃತ್ತಿಪರ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ.
ಈ ಕಾರ್ಯಕ್ರಮದಡಿ ಶಿಕ್ಷಕರ ಅಭಿಪ್ರಾಯ ಹಾಗೂ ಆಸಕ್ತಿಗೆ ಅನುಸಾರವಾಗಿ ತರಬೇತಿ ನೀಡಲಾಗುತ್ತದೆ. ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ತರಬೇತಿಯನ್ನು ಶಿಕ್ಷಕರ ಮೂಲಕವೇ ನೀಡಲಾಗುತ್ತದೆ. ಇಲ್ಲಿ ಶಿಕ್ಷಕರಿಗೆ ಮುಕ್ತ ಆಯ್ಕೆ ಇರುತ್ತದೆ. ಅವರ ಆಸಕ್ತಿಯ ವಿಷಯವನ್ನು ತೆಗೆದುಕೊಂಡು ತರಬೇತಿ ಪಡೆಯಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲೋತ್ಸವ
ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಅದರ ವೈವಿದ್ಯತೆಯ ಅರಿವು ಮೂಡಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ರಾಷ್ಟ್ರಮಟ್ಟದ ಸಂಗೀತ, ರಂಗಕಲೆ, ನೃತ್ಯ, ದೃಶ್ಯಕಲೆಗಳಲ್ಲಿ ಕಲಾ ಉತ್ಸವ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಂದಿಕೋಲು ಕುಣಿತ, ಪೂಜಾಕುಣಿತ, ಡೊಳ್ಳುಕುಣಿತ, ತೊಗಲುಗೊಂಬೆಯಾಟ, ಗಾಂಜೀಫಾ ಕಲೆ, ಯಕ್ಷಗಾನ, ಐತಿಹಾಸಿಕ ನಾಟಕ, ಭೂತಕುಣಿತ, ದೊಡ್ಡಾಟ, ಸಣ್ಣಾಟ, ವೀರಗಾಸೆ, ಬಯಲಾಟ ಮೊದಲಾದ ವಿಷಯ ವಸ್ತು ಆಧಾರಿತವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲೋತ್ಸವ ಏರ್ಪಡಿಸಿದೆ.
ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ತಂಡ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಕಲಾ ಉತ್ಸವ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಯುತ್ತದೆ. ಶಾಲಾ ತಂಡದಲ್ಲಿ ವಿಶೇಷ ಚೇತನ ಮಕ್ಕಳಿಗೂ ಆದ್ಯತೆ ಇರುತ್ತದೆ. ಆ.15ರೊಳಗೆ ತಾಲೂಕು ಮಟ್ಟದ, ಆ.30ರೊಳಗೆ ಜಿಲ್ಲಾಮಟ್ಟದ ಹಾಗೂ ಅಕ್ಟೋಬರ್ 15ರೊಳಗೆ ರಾಜ್ಯಮಟ್ಟದ ಸ್ಪರ್ಧೆ ಪೂರ್ಣಗೊಳ್ಳಲಿದೆ. ರಾಜ್ಯಮಟ್ಟದಲ್ಲಿ ಆಯ್ಕೆಯಾದವರು ರಾಷ್ಟ್ರಮಟ್ಟಕ್ಕೆ ಹೋಗಲಿದ್ದಾರೆ.
ಶಿಕ್ಷಕರಿಗೆ ಅವಶ್ಯಕತೆ ಆಧಾರದಲ್ಲಿ(ನೀಡ್ ಬೇಸ್ಡ್ ) ತರಬೇತಿ ನೀಡುವ ಉದ್ದೇಶದಿಂದ ಮತ್ತು ಅವರ ಜ್ಞಾನ ಹಾಗೂ ಬೋಧನಾ ಕೌಶಲತೆ ಸುಧಾರಣೆಗೆ ಪೂರಕವಾಗುವ ನಿಟ್ಟಿನಲ್ಲಿ ಗುರು-ಚೇತನ ಕಾರ್ಯಕ್ರಮ ರೂಪಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲಾ ಶಿಕ್ಷಕರಿಗೆ ವಿಷಯವಾರು ವೃತ್ತಿಪರ ತರಬೇತಿ ನೀಡಲಿದ್ದೇವೆ.
-ಬಿ.ಕೆ.ಬಸವರಾಜು, ನಿರ್ದೇಶಕ ಪ್ರಾಥಮಿಕ ಶಿಕ್ಷಣ
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸೂಚನೆಯಂತೆ ಕಲೋತ್ಸವ ನಡೆಸುತ್ತಿದ್ದೇವೆ. ಪ್ರತಿಭಾಕಾರಂಜಿ ಕೇವಲ ರಾಜ್ಯ ಮಟ್ಟಕ್ಕೆ ಸೀಮಿತವಾಗಿದೆ. ಕಲೋತ್ಸವ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮವಾಗಿದೆ. ಈ ಸಂಬಂಧ ಎಲ್ಲಾ ಶಾಲಾ ಮುಖ್ಯಶಿಕ್ಷಕರಿಗೂ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳ ಏಳ್ಗೆಗೆಗೂ ಇದು ಪೂರಕವಾಗಲಿದೆ.
-ಫಿಲೋಮಿನಾ ಲೋಬೊ, ನಿರ್ದೇಶಕಿ ಪ್ರೌಢ ಶಿಕ್ಷಣ
* ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.