ಗುರು ನಾನಕ್ ಮಹಾನ್ ಆಧ್ಯಾತ್ಮ ಚಿಂತಕ
Team Udayavani, Nov 13, 2019, 3:06 AM IST
ಬೆಂಗಳೂರು: ಗುರುನಾನಕ್ ಭ್ರಾತೃತ್ವ ಹಾಗೂ ದೇಶ ಭಕ್ತಿಯ ಮೌಲ್ಯಗಳನ್ನು ಸಾರಿದ ಮಹಾನ್ ಆಧ್ಯಾತ್ಮ ಚಿಂತಕ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಹಲಸೂರಿನ ಸಿಖ್ ಗುರುದ್ವಾರ ಮಂದಿರದಲ್ಲಿ ಮಂಗಳವಾರ ನಡೆದ ಸಿಖ್ ಧರ್ಮಗುರು ಗುರುನಾನಕ್ ಅವರ 550 ನೇ ಜಯಂತಿ ಕಾರ್ಯಕ್ರಮದಲ್ಲಿ ಸಿಖ್ ಸಮುದಾಯಕ್ಕೆ ಶುಭಾಶಯ ಕೋರಿ ಮಾತನಾಡಿದರು.
ಪ್ರೀತಿ, ಶಾಂತಿ, ಸತ್ಯದ ಕುರಿತು ಬೋಧಿಸಿದ ಗುರುನಾನಕ್ ಅವರು ಮಾನವನ ನಡುವೆ ಸದ್ಭಾವನೆ ಹಾಗೂ ವಿಶ್ವಾಸ ಉಳಿಸಿಕೊಂಡು ಹೋಗುವಂತೆ ತಿಳಿಸಿದ್ದಾರೆ. ಧರ್ಮ ಸಮನ್ವಯ ಸಾರಿದ ಗುರುನಾನಕರು ಭ್ರಾತೃತ್ವ ಹಾಗೂ ದೇಶ ಭಕ್ತಿಯ ಮೌಲ್ಯಗಳನ್ನು ಎಲ್ಲರಲ್ಲಿ ತುಂಬಿ ಸಹೋದರತೆ, ಸರ್ವಧರ್ಮ ಸಮಾನತೆ ಸಂದೇಶ ಸಾರಿದರು ಎಂದು ತಿಳಿಸಿದರು.
ಲಿಂಗಾಯತ ಧರ್ಮದಿಂದ ಪ್ರೇರಿತರಾಗಿ ದಾಸೋಹ ತತ್ವವನ್ನು ಅನುರಿಸುವಂತೆ ಎಲ್ಲರನ್ನು ಪ್ರೇರೇಪಿಸಿದ್ದರು. ಅಸ್ಪೃಶ್ಯತೆ ಖಂಡಿಸಿದ ಗುರುನಾನಕ್ ಅವರು ಗುರುದ್ವಾರದಲ್ಲಿ ಎಲ್ಲಾ ಜಾತಿಯವರಿಗೂ ಬೋಧನೆ, ಭೋಜನ ವ್ಯವಸ್ಥೆ ಕಲ್ಪಿಸಿದ್ದರು. ಅವರ ಈ ಸಮಾನತೆ ಸಂದೇಶ ಹಾಗೂ ಬಡವರ ಬಗ್ಗೆ ಕಾಳಜಿ ಎಲ್ಲರಿಗೂ ಆದರ್ಶವಾಗಬೇಕು. ಕವಿ, ಗಾಯಕ, ಸಮಾಜ ಸುಧಾರಕ, ಆಧ್ಯಾತ್ಮ ಚಿಂತಕವಾಗಿ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಇಂತಹ ಮಹಾಚೇತನಕ್ಕೆ ನಮಿಸೋಣ ಶಾಂತಿ ಸಹಬಾಳ್ವೆ ದಾರಿಯಲ್ಲಿ ಎಲ್ಲರೂ ಒಟ್ಟಾಗಿ ನಡೆಯೋಣ. ಇಂದು ಸಿಖ್ ಸಮುದಾಯ ಭಕ್ತಿ ಭಾವದಿಂದ ಭಾಗವಹಿಸಿದ್ದು, ಎಲ್ಲರಿಗೂ ಗುರು ನಾನಕರ ಆಶಿರ್ವಾದ ಲಭಿಸಲಿ ಎಂದರು. ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ತಲೆಗೆ ಕೇಸರಿ ಬಣ್ಣದ ಪಟಕಾ ತೊಟ್ಟು, ಧರ್ಮದ ಹಿರಿಯರೊಟ್ಟಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.