ಕ್ಷಮಿಸಿ, ಇನ್ಮು ಮುಂದೆ ತಪ್ಪದೆ ಬಂದು ಸಹಿ ಹಾಕ್ತೀನಿ – ಹ್ಯಾಕರ್ ಶ್ರೀಕಿ
Team Udayavani, Dec 14, 2021, 12:12 PM IST
ಬೆಂಗಳೂರು: ಇತ್ತೀಚೆಗಷ್ಟೇ ನಗರದ ಖಾಸಗಿ ಹೋಟೆಲ್‌ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜಾಮೀನಿನ ಮೇರೆಗೆ ಬಿಡುಗಡೆಯಾಗಿ, ನಾಪತ್ತೆಯಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಒಂದು ತಿಂಗಳ ಬಳಿಕ ಇದೀಗ ಪೊಲೀಸರ ಮುಂದೆ ಪ್ರತ್ಯಕ್ಷನಾಗಿದ್ದಾನೆ.
ಜೀವನ್ ಭೀಮಾನಗರದ ಪೊಲೀಸರ ಮುಂದೆ ಭಾನುವಾರ ದಿಢೀರ್ ಹಾಜರಾಗಿರುವ ಶ್ರೀಕಿ, ಹಾಜರಾತಿಗೆ ಸಹಿ ಹಾಕಿದ್ದಾನೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಠಾಣೆಗೆ ಬಂದು ಹಾಜರಾಗಿ ಸಹಿ ಹಾಕುವುದಾಗಿ ತಿಳಿಸಿದ್ದಾನೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾ ರಣೆಗೆ ಹಾಜರಾಗಿದ್ದರಿಂದ ಪೊಲೀಸ್ ಠಾಣೆಗೆ ಹಾಜ ರಾಗಿ ಸಹಿ ಹಾಕಲಾಗಿರಲಿಲ್ಲ ಎಂದೂ ಸಮಜಾಯಿಷಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬಿಟ್ ಕಾಯಿನ್ ಹಗರಣದ ಬಳಿಕ ತಲೆಮರೆಸಿ ಕೊಂಡಿದ್ದ ಶ್ರೀಕಿ, ಹಳೇ ವಿಮಾನ ನಿಲ್ದಾಣದ ಆರ್ಕಿಡ್ ಹೋಟೆಲ್‌ನಲ್ಲಿ ನೆಲೆಸಿದ್ದ. ಆ ವೇಳೆ ಮಾದಕವಸ್ತು ಸೇವನೆಯ ನಶೆಯಲ್ಲಿ ಹೋಟೆಲ್ ಸಿಬ್ಬಂದಿ ಮತ್ತು ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದ್ದ.
ಹೋಟೆಲ್‌ನಲ್ಲಿ ನಡೆಸಿದ ದಾಂಧಲೆ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಜೀವನ್ ಭೀಮಾ ನಗರ ಪೊಲೀಸರು ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿ ದ್ದರು. ಇದಾದ ಬಳಿಕ ನ್ಯಾಯಾಲಯ ಷರತ್ತಬದ್ಧ ಜಾಮೀನು ನೀಡಿತ್ತು. ಹಾಗಾಗಿ, ಜೈಲಿನಿಂದ ಹೊರಬಂದ ಶ್ರೀಕಿ ಅಂದಿನಿಂದ ಭಾನುವಾರ ದವರೆಗೂ ಕಣ್ಮರೆಯಾಗಿದ್ದ.
ಜಾಮೀನು ರದ್ಧತಿಗೆ ಸಿದ್ಧವಾಗಿದ್ದ ಪೊಲೀಸರು: ಈ ಹಿಂದೆ ಕೋರ್ಟ್ ಪ್ರತಿ ತಿಂಗಳ ನಾಲ್ಕನೇ ಶನಿವಾರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕ ಬೇಕೆಂದು ನ್ಯಾಯಾಲಯ ಷರತ್ತು ವಿಧಿಸಿದ್ದರೂ, ಶ್ರೀಕಿ ಹಾಜರಾಗದೆ ನಿಯಮಗಳನ್ನು ಗಾಳಿಗೆ ತೂರಿ ಓಡಾಡಿಕೊಂಡಿದ್ದ. ಆ ಹಿನ್ನೆಲೆಯಲ್ಲಿಯೇ ಜೀವನ್ ಭೀಮಾನಗರ ಠಾಣೆ ಪೊಲೀಸರು ಕೋರ್ಟ್ ನೀಡಿದ ಜಾಮೀನು ಷರತ್ತು ಉಲ್ಲಂ ಸಿ ಠಾಣೆಗೆ ಹಾಜರಾಗದೆ ಶ್ರೀಕಿ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ:- ಉಡುಪಿ: ಸಂತೆಕಟ್ಟೆಯ ಬಳಿ ಕಂಬಕ್ಕೆ ಢಿಕ್ಕಿ ಹೊಡೆದ ಮೀನಿನ ಲಾರಿ; ಚಾಲಕ ಸಾವು
ಹೀಗಾಗಿ ಆತನಿಗೆ ನೀಡಲಾಗಿದ್ದ ಜಾಮೀನ ರದ್ದುಪಡಿಸುವಂತೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದರು. ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ ಪೊಲೀಸರು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಠಾಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜತೆಗೆ ಶ್ರೀಕಿ ವಾಸವಿರುವ ವಿಳಾಸವನ್ನು ಪಡೆದುಕೊಳ್ಳಲಾಗಿದ್ದು, ಆತನ ಮೇಲೆ ನಿಗಾ ಇಡಲಾಗಿದೆ ಎಂದು ಜೀವನ್ ಭೀಮಾನನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾರಿ ನಿರ್ದೇಶನಾಲಯದ ತನಿಖೆ
ಬಿಟ್ ಕಾಯಿನ್ ಹಾಗೂ ವೆಬ್‌ಹ್ಯಾಕ್ ಮಾಡಿರುವ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಜಾರಿ ನಿರ್ದೇಶನಾಲಯ, ವಿಚಾರಣೆಗೆ ಹಾಜರಾಗುವಂತೆ ಶ್ರೀಕಿಗೆ ನೋಟಿಸ್ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗಿದ್ದೇನೆ ಎಂದು ಶ್ರೀಕಿ ಹೇಳಿದ್ದು, ಹೀಗಾಗಿ ಇಡಿ ಅಧಿಕಾರಿಗಳು ಬಿಟ್ ಕಾಯಿನ್ ಬಗ್ಗೆ ಈತನಿಂದ ಪೂರಕ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳು, ಹೇಗೆ ಹ್ಯಾಕ್ ಮಾಡಲಾ ಗುತ್ತಿತ್ತು. ಎಲ್ಲೆಲ್ಲಿ ಹ್ಯಾಕ್ ಮಾಡಲಾಗಿದೆ. ಬಿಟ್‌ಕಾಯಿನ್ ಪ್ರಕರಣದಲ್ಲಿ ಯಾರಿಗೆ ಎಷ್ಟು ವರ್ಗಾ ವಣೆ ಮಾಡಿ ದ್ದಾನೆ ಎಂಬುದರ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.