ಎಚ್‌ಎಎಲ್- ರೋಲ್ಸ್ ರಾಯ್ಸ ಒಡಂಬಡಿಕೆ
Team Udayavani, May 5, 2021, 2:25 PM IST
ಬೆಂಗಳೂರು: ಯುದ್ಧ ಹಡಗುಗಳಲ್ಲಿ ಬಳಕೆಯಾಗುವ ಎಂಟಿ30 ಎಂಜಿನ್‌ಗಳ ಅಳವಡಿಕೆ, ಮಾರುಕಟ್ಟೆ, ಸೇವೆಗಳಿಗೆ ಸಂಬಂಧಿಸಿದಂತೆ ಪ್ರತಿಷ್ಠಿತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.,(ಎಚ್‌ಎಎಲ್) ಮತ್ತು ರೋಲ್ಸ್ ರಾಯ್ಸ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಹಾಗೂ ರೋಲ್ಸ್-ರಾಯ್ಸ ಇಂಡಿಯಾ ಮತ್ತು ದಕ್ಷಿಣ ಏಷಿಯಾ ಅಧ್ಯಕ್ಷ ಕಿಶೋರ್ ಜಯರಾಮನ್ ಒಪ್ಪಂದಕ್ಕೆಪರಸ್ಪರ ಸಹಿ ಹಾಕಿದರು.
ನಂತರ ಮಾತನಾಡಿದ ಆರ್.ಮಾಧವನ್, ದಶಕಗಳಿಂದ ರೋಲ್ಸ್-ರಾಯ್ಸ ನೌಕಾ ಕ್ಷೇತ್ರದಲ್ಲಿನಮ್ಮ ಮೌಲ್ಯಯುತ ಪಾಲುದಾರ ಕಂಪೆನಿ ಆಗಿದೆ. ಈಒಪ್ಪಂದದ ಮೂಲಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.ವ್ಯಾಪಾರ ವೃದ್ಧಿಗೆ ಸಹಕಾರಿಯೂ ಆಗಿದೆ ಎಂದರು.
ಜಯರಾಮನ್ ಮಾತನಾಡಿ, ಮುಂದಿನ ದಿನಗಳಲ್ಲಿ ನೌಕಾಕ್ಷೇತ್ರದ ರಕ್ಷಣಾ ವಿಭಾಗದ ಸಾಮರ್ಥ್ಯ ವೃದ್ಧಿ ಹಾಗೂ ಹಲವುಪರಿಹಾರಗಳನ್ನು ಕಂಡುಕೊಳ್ಳಲು ಈ ಸಹಭಾಗಿತ್ವವು ವೇದಿಕೆಆಗಲಿದೆ ಎಂದು ವಿಶ್ಲೇಷಿಸಿದರು. ಎಂಟಿ 30 ವಿಶ್ವದ ಅತ್ಯಂತಶಕ್ತಿಯುತ ಎಂಜಿನ್ ಆಗಿದೆ. ನೌಕಾ ಅನಿಲ ಟರ್ಬೈನ್‌ನಲ್ಲಿಉತ್ಕೃಷ್ಠ ದರ್ಜೆಯ ಈ ಎಂಜಿನ್ ಹತ್ತಾರು ಅತ್ಯಾಧುನಿಕಅಪ್ಲಿಕೇಷನ್‌ಗಳನ್ನು ಇದು ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.