ಶ್ರದ್ಧಾ ಭಕ್ತಿಯಿಂದ ಹನುಮನ ಆರಾಧನೆ
Team Udayavani, Dec 17, 2021, 10:00 AM IST
ಬೆಂಗಳೂರು: ಹನುಮ ಜಯಂತಿ ಅಂಗವಾಗಿ ನಗರದ ವಿವಿಧೆಡೆ ಹನುಮ ದೇವಸ್ಥಾನಗಳಲ್ಲಿ ಗುರುವಾರ ಮುಂಜಾನೆಯಿಂದಲೇ ವಿಶೇಷ ಪೂಜಾಕೈಂಕರ್ಯಗಳು ನೆರವೇರಿದವು. ಆಂಜನೇಯ ಉತ್ಸವ ಮೂರ್ತಿಯನ್ನು ಸಿಂಗರಿಸಿಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ದೇಗುಲಗಳಲ್ಲಿ ಗಣಪತಿ ಹೋಮ, ನವಗ್ರಹಹೋಮಮತ್ತುಲಕ್ಷ್ಮೀ ಹೋಮ ನಡೆಯಿತು.ಭಕ್ತಾದಿಗಳು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತು ಹೂವು, ತೆಂಗಿನಕಾಯಿ, ನೈವೇದ್ಯ ಅರ್ಪಿಸಿ, ದೇವರ ದರ್ಶನ ಪಡೆದರು. ಪ್ರತಿ ವರ್ಷದಂತೆ ಪ್ರಸಕ್ತ ವರ್ಷ ಹನುಮ ಜಯಂತಿ ಅಂಗವಾಗಿ ವಿಜಯನಗರದ ಮಾರುತಿ ಮಂದಿರ, ಮೈಸೂರು ರಸ್ತೆಯ ಗಾಳಿ ಆಂಜನೇಯ, ಆರ್‌ಆರ್ ನಗರದ ಕಂಚೇನಹಳ್ಳಿ ಆಂಜನೇಯ, ಆನಂದ್‌ರಾವ್ ವೃತ್ತದ ಪಾತಾಳ ಆಂಜನೇಯ, ರಾಗಿ ಗುಡ್ಡದ ಪ್ರಸನ್ನಾಂಜನೇಯ, ಕೋರಮಂಗಲದ ಪಂಚಮುಖೀ ಆಂಜನೇಯ ದೇವಸ್ಥಾನ, ಮಹಾಲಕ್ಷ್ಮೀ ಬಡಾವಣೆ, ಮಲ್ಲೇಶ್ವರಂ ಸೇರಿದಂತೆ ಮುಂತಾದ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ಇದನ್ನೂ ಓದಿ;- ಕ್ಯಾ.ವರುಣ್‌ಸಿಂಗ್‌ಗೆ ಕಂಬನಿಯ ವಿದಾಯ
ನಗರದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ 5.30ಕ್ಕೆ ದೇವರಿಗೆ ಪಂಚಾಮೃತ ಅಭಿಷೇಕ, 6.30ಕ್ಕೆ ಪವಮಾನ ಹೋಮ, ಸುದರ್ಶನ ಹೋಮ, 9ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಆಂಜನೇಯ ಸ್ವಾಮಿ ಉತ್ಸವ ಕಾರ್ಯಕ್ರಮ ಜರುಗಿತು. ತದನಂತರ ತೀರ್ಥ, ಪಾನಕ, ಮಜ್ಜಿಗೆ,ಕೋಸಂಬರಿ, ಅನ್ನಸಂತರ್ಪಣೆ ನಡೆಯಿತು. ಮಹಾಲಕ್ಷೀಪುರದ ಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ 46ನೇ ಹನುಮ ಜಯಂತಿ ಪ್ರಯುಕ್ತ 108 ದಂಪತಿಗಳಿಂದ ಶತಲಕ್ಷ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಪೂಜೆ ಹಮ್ಮಿಕೊಳ್ಳಲಾಗಿತ್ತು.ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಅನ್ನಸಂತರ್ಪಣೆ: ಕೆ.ಆರ್.ಪುರದ ಭಟ್ಟರಹಳ್ಳಿ, ಬಸವನಪುರದಲ್ಲಿ ಹನುಮಂತ ಜಯಂತಿಯ ಅಂಗವಾಗಿ ಅನ್ನಸಂತರ್ಪಣೆ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು. ಅನ್ನಸಂತರ್ಪಣೆ ಜತೆಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಬೆಳಗಿನ ಉಪಹಾರ ವಿತರಿಸಲಾಯಿತು. ಮಲ್ಲೇಶ್ವರಂ ರೈಲು ನಿಲ್ದಾಣದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾಯಂಕಾಲ ಭರತನಾಟ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊರೊನಾದಿಂದಾಗಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಮುಂಜಾಗ್ರತೆಯಾಗಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸುವುದು, ಸ್ಯಾನಿಟೆ„ಸರ್ ಬಳಕೆಕಡ್ಡಾಯ ಮಾಡಲಾಗಿತ್ತು.
ರಾಮ, ಹನುಮ ವೇಷಧಾರಿಗಳ ಆಕರ್ಷಣೆ
ಆನಂದ್‌ರಾವ್ ವೃತ್ತದ ಪಾತಾಳ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹನುಮ ವೇಷಧಾರಿಗಳ ಗುಂಪು ಸಾರ್ವಜನಿಕರಿಗೆ ದರ್ಶನ ನೀಡಿತು. ಈ ವೇಳೆ ಶ್ರೀರಾಮನ ವೇಷಧಾರಿಯನ್ನು ಹನುಮ ವೇಷಧಾರಿಗಳು ಭುಜದ ಮೇಲೆ ಹೊತ್ತುಕೊಂಡ ಭಂಗಿ ಪ್ರದರ್ಶಿಸಿದರು. ನಂತರ ದೇವಸ್ಥಾನ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಜಯಂತಿ ಆಚರಣೆಗೆ ಮೆರಗು ನೀಡಿದರು ನಗರದ ರಸ್ತೆಗಳಲ್ಲಿ ರಾಮ, ಲಕ್ಷ್ಮಣ, ಆಂಜನೇಯ ವೇಷಾಧಾರಿಗಳು ಆಕರ್ಷಕವಾಗಿ ಕಂಡುಬಂದರು. ವೇಷಾಧಾರಿಗಳು ಬೈಕ್ ಹಾಗೂ ದೊಡ್ಡ ವಾಹನಗಳನ್ನು ಏರಿ ಆಂಜನೇಯನ ಭಕ್ತಿ ಗೀತೆಗಳನ್ನು ಪಠಣ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.