ಹಂಪನಾ ದಂಪತಿ ಬದುಕು ಆದರ್ಶವಾಗಲಿ


Team Udayavani, Oct 8, 2018, 12:20 PM IST

hanmapana.jpg

ಬೆಂಗಳೂರು: ಪ್ರೊ.ಹಂ.ಪ.ನಾಗರಾಜಯ್ಯ ಅವರು ನಾಡಿನ ವಿಚಾರವಂತರಲ್ಲಿ ಅಗ್ರಗಣ್ಯರು. ತಮ್ಮ ವಿಚಾರದ ಕಂಪನ್ನು ವಿಶ್ವಕ್ಕೆ ಹರಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ.

ನಾಡೋಜ ಪ್ರೊ.ಹಂ.ಪ.ನಾಗರಾಜಯ್ಯ ಜನ್ಮದಿನದ ಅಂಗವಾಗಿ ಕನ್ನಡ ಜನಶಕ್ತಿ ಕೇಂದ್ರ ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಶುಭಾಶಯ ಸಮಾರಂಭದಲ್ಲಿ ಗಿಫ್ಟ್ ಆಫ್ ನಾಲೆಡ್ಜ್ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹಂಪನಾ ದಂಪತಿ ಅಂತರ್ಜಾತಿ ವಿವಾಹವಾಗಿದ್ದು, ಅಂತರ್ಜಾತಿ ವಿವಾಹ ಹಾಗೂ ಜಾತಿ ದ್ವೇಷಿಸುವವವರಿಗೆ ಇವರ ಬದುಕು ಆದರ್ಶವಾಗಬೇಕು ಎಂದು ತಿಳಿಸಿದರು.

ನಾವು ರಾಮಾಯಣ ಮಹಾಭಾರತ ಅಧ್ಯಯನ ಮಾಡುವಾಗ ಹಲವು ಸಂಶಯಗಳು ಮೂಡುತ್ತವೆ. ಅವುಗಳನ್ನು ಇಂತಹ ವಿಚಾರವಂತರ ಜತೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬಹುದು. ನನ್ನ ರಾಜಕೀಯ ಜೀವನದÇÉೇ ನಾನು ಕಂಡ ವಿಶೇಷ ಸಂದರ್ಭ ಇದಾಗಿದೆ. ಕನ್ನಡದ ಸಾಹಿತಿಯೊಬ್ಬರಿಗೆ ವಿಶ್ವದ ನಾನಾ ಭಾಗಗಳಿಂದ ಗಣ್ಯ ವಿದ್ವಾಂಸರು ಬಂದು ಗೌರವಿಸುವುದು ಹೆಮ್ಮೆಯ ವಿಚಾರ ಎಂದರು. 

ಹಿರಿಯ ವಿಮರ್ಶಕ ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಪ್ರಾಕೃತ ಭಾಷಾ ಸಂಸ್ಕೃತಿ ಕುರಿತು ಸುದೀರ್ಘ‌ ಸಂಶೋಧನೆ ಕೈಗೊಳ್ಳುವ ಮೂಲಕ ಸಂಸ್ಕೃತ ಭಾಷೆಗೆ ಪರ್ಯಾಯ ಚಿಂತನೆಯೊಂದಿದೆ ಎಂದು ತೋರಿಸಿಕೊಟ್ಟ ಕೀರ್ತಿ ಪ್ರೊ.ಹಂ.ಪ.ನಾಗರಾಜಯ್ಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಭಾರತದ ಬಹುತೇಕ ಭಾಷೆಗಳು ಸಂಸ್ಕೃತ ಜನ್ಯ ಎಂದು ಸಂಸ್ಕೃತ ಭಾಷೆಯನ್ನೇ ಭಾರತದ ಪ್ರಧಾನ ಪರಂಪರೆ ಎಂದು ಕರೆಯಲಾಗುತ್ತಿತ್ತು. ಆದರೆ, ಸಂಸ್ಕೃತಕ್ಕೂ ಪೂರ್ವದಲ್ಲಿಯೇ ಇದ್ದ ಪ್ರಾಕೃತ ಭಾಷೆ ನಮ್ಮ ಭಾಷೆ ಹಾಗೂ ಸಂಸ್ಕೃತಿಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದು ತಿಳಿಸಿದರು.

ಹಂಪನಾ ಅವರು ವಿದ್ವತ್‌ ಪರಂಪರೆಗೆ ಸೇರಿದವರಾಗಿದ್ದಾರೆ. ಇಂದು ಹಳಗನ್ನಡದಲ್ಲಿ ಸುಲಲಿತವಾಗಿ ಮಾತನಾಡುವ, ಸಂಶೋಧನೆ ಕೈಗೊಳ್ಳುವ ಕೆಲವರಲ್ಲಿ ಒಬ್ಬರಾಗಿದ್ದಾರೆ. ವಿದೇಶದ 40ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾನಿಯಗಳಲ್ಲಿ ಕಾರ್ಯಗಾರವನ್ನು ಹಮ್ಮಿಕೊಂಡು

ಅಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಚಿಂತಕರಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ರುಚಿಯನ್ನು ಮಾಡಿಸುತ್ತಿದ್ದಾರೆ. ಇನ್ನು ಐದು ದಶಕಗಳ ಹಿಂದೆಯೇ ಅಂತರ್ಜಾತಿ ವಿವಾಹದಂತಹ ಕ್ರಾಂತಿಕಾರ ನಿರ್ಧಾರ ಕೈಗೊಂಡ ಮಹಾನ್‌ ಚಿಂತಕ ಎಂದರು. ಕಾರ್ಯಕ್ರಮಕ್ಕೆ ವಿದೇಶಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಚಿಂತಕರು ಆಗಮಿಸಿದ್ದರು.

ಇಂಗ್ಲಿಷ್‌ ಜಾರಿಗೆ ಹಿಂಜರಿಯಬೇಡಿ: ಇಂದು ಜ್ಞಾನಾರ್ಜನೆ, ವಿದ್ವತ್‌ಗೆ ಇಂಗ್ಲಿಷ್‌ ಕಲಿಕೆ ಅವಶ್ಯಕವಾಗಿದೆ. ಹೀಗಾಗಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಶಿಕ್ಷಣ ಜಾರಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ನಮ್ಮ ಬೆಂಬಲವಿದೆ. ಇನ್ನು ಇಂಗ್ಲಿಷ್‌ ಭಾಷೆಯಿಂದ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿರುವ ಕನ್ನಡ ಭಾಷೆಗೆ ಯಾವುದೇ ಹಾನಿಯಾಗುವುದಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಕನ್ನಡ ಸಂಸ್ಕೃತಿಗೆ ಸಾಕಷ್ಟು ವಿದೇಶಿಯರು ಪ್ರಭಾವಿತರಾಗಿ ಕನ್ನಡ ಭಾಷೆ, ಸಂಸ್ಕೃತಿ ಕಲಿಯುತ್ತಿದ್ದಾರೆ ಎಂದು ನಾಡೋಜ ಹಂ.ಪ.ನಾಗರಾಜಯ್ಯ ಹೇಳಿದರು.

ಟಾಪ್ ನ್ಯೂಸ್

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

pejavar

Pejawar Swamiji; ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತವಾಗಲಿ

IPL: Foreign players can no longer get crores; This is the new rule

IPL: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಹೀಗಿದೆ ಹೊಸ ನಿಯಮ

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

12-udupi

Yaduveer Wadiyar: ಉಡುಪಿ ಶ್ರೀಕೃಷ್ಣಮಠಕ್ಕೆ‌ ಸಂಸದ ಯದುವೀರ್‌‌ ಭೇಟಿ

11-joshi

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ

Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

11-bng

Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ

10-bng

Bengaluru: ಇಬ್ಬರು ಡ್ರಗ್ಸ್‌ ಪೆಡ್ಲರ್ ಸೆರೆ: 51 ಕೆ.ಜಿ. ಗಾಂಜಾ ಜಪ್ತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

pejavar

Pejawar Swamiji; ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತವಾಗಲಿ

IPL: Foreign players can no longer get crores; This is the new rule

IPL: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಹೀಗಿದೆ ಹೊಸ ನಿಯಮ

14-sirsi

Sirsi: ಯಕ್ಷಗಾನದ ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ಟ ಗೆ ಚಂದುಬಾಬು ಪ್ರಶಸ್ತಿ

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.