ಶಾಂತಿನಗರದಲ್ಲಿ ಹ್ಯಾರಿಸ್ ಪ್ರಚಾರ
Team Udayavani, Apr 26, 2018, 12:40 PM IST
ಬೆಂಗಳೂರು: ಶಾಂತಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಾಸಕ ಎನ್.ಎ.ಹ್ಯಾರಿಸ್ ಅವರು ಬುಧವಾರದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದು, ಬೆಳಗ್ಗೆ ದೊಮ್ಮಲೂರು ಭಾಗ ಹಾಗೂ ಸಂಜೆ ಅಗರಂ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿದ ಅವರು ಮತ ಯಾಚನೆ ಮಾಡಿದರು.
ತಮ್ಮ ಪ್ರಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ತಾವು ಎರಡು ಬಾರಿ ಶಾಸಕರಾಗಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ದು, ಈ ಕ್ಷೇತ್ರವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ನೀಲನಕ್ಷೆಯೊಂದಿಗೆ ಕಣಕ್ಕಿಳಿಯುತ್ತಿರು ವುದಾಗಿ ತಿಳಿಸಿದರು.
ಬೆಳೆಯುತ್ತಿರುವ ಬೆಂಗಳೂರಿಗೆ ಅಭಿವೃದ್ಧಿಯೇ ಪ್ರಗತಿಯ ಮಾನದಂಡ. ಜನಪ್ರತಿನಿಧಿಗಳ ಸಾಧನೆಯ ಹೆಜ್ಜೆ ಗುರುತು. ಈ ನಗರ ಅಭಿವೃದ್ಧಿ, ಮೂಲ ಸೌಕರ್ಯಗಳಿಂದಾಗಿ ಎಲ್ಲರ ಗಮನಸೆಳೆಯುತ್ತಿದೆ.
ಇದರ ಜತೆಗೆ ಎಲ್ಲರ ಅಭಿಲಾಷೆ ಬೆಂಗಳೂರು,ಶಾಂತಿನಗರವಾಗಿಯೂ ಉಳಿಯಬೇಕು ಎಂಬುದು ನಮ್ಮ ಆಶಯ ಎಂದವರು ಹೇಳಿದ್ದಾರೆ.
ಇಲ್ಲಿನ ಜನ ನನ್ನನ್ನು ಬಹುವಾಗಿ ಪ್ರೀತಿಸುತ್ತಾರೆ. ನನ್ನ ಕಾರ್ಯವೈಖರಿ ಕಂಡು ಮೂರನೇ ಅವಧಿಗೂ ನನ್ನನ್ನೇ ಆಯ್ಕೆ ಮಾಡುತ್ತಾರೆಂದು ನಂಬಿದ್ದೇನೆ ಎಂದರು.ಮೇ 12ರಂದು ನಡೆಯುವ ವಿಧಾನಸಭೆ
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ನನಗೆ, ಈ ಕ್ಷೇತ್ರದ ಋಣ ತೀರಿಸಲು ಮತ್ತೂಂದು ಅವಕಾಶ ಕೇಳಿದ್ದು, ಪಕ್ಷ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಿದ್ದು, ಮೂಲಸೌಲಭ್ಯಗಳ ಅಭಿವೃದ್ಧಿಯ ಮಾನದಂಡಗಳನ್ನು ಆಧರಿಸಿ ಉತ್ತಮ ಕ್ಷೇತ್ರ ಎಂದು ಆಯ್ಕೆ ಮಾಡಿರುವ ಬಿ-ಪ್ಯಾಕ್ (ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಸಮಿತಿ) ಶಾಂತಿನಗರವನ್ನು ಅತ್ಯುತ್ತಮ ಕ್ಷೇತ್ರ ಎಂದೂ, ಕ್ಷೇತ್ರವನ್ನು ಅಭಿವೃದ್ಧಿ ದೃಷ್ಟಿಯಿಂದ ನಂಬರ್ ಒನ್ ಕ್ಷೇತ್ರ ಎಂದು ಆಯ್ಕೆ ಮಾಡಿರುವುದು ನನ್ನ ಮಾತಿಗೆ ನಿದರ್ಶನ ಎಂದವರು ವಿವರಿಸಿದರು.ಶುಕ್ರವಾರ ಶಾಂತಿನಗರ ಹಾಗೂ ಜೌಗು ಪಾಳ್ಯದಲ್ಲಿ ಮತ ಯಾಚಿಸುವುದಾಗಿ ತಿಳಿಸಿದರು.
ಉತ್ತಮ ಪ್ರತಿಕ್ರಿಯೆ
ಬುಧವಾರ ಮತ ಯಾಚನೆ ಮಾಡಿದ ಕ್ಷೇತ್ರಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ
ಲಭ್ಯವಾಯಿತು. ಕ್ಷೇತ್ರದ ಜನತೆ ಆದರದಿಂದ ಬರಮಾಡಿಕೊಂಡು ಹರಸಿದ್ದು ಕಂಡುಬಂತು. ಅನೇಕ ಜನರು ಶಾಸಕರಿಂದಾದ ಒಳ್ಳೆಯ ಕೆಲಸವನ್ನು ಈ ಸಂದರ್ಭದಲ್ಲಿ ಸ್ಮರಿಸಿದ್ದಲ್ಲದೇ, ಮುಂದೆಯೂ ನಿಮ್ಮ ಕೈ ಬಲಪಡಿಸುವ ಮಾತನಾಡಿದ್ದು ವಿಶೇಷವಾಗಿತ್ತು.
ಹತ್ತು ವರ್ಷಗಳಲ್ಲಿ ಶಾಂತಿ ನಗರ ಕ್ಷೇತ್ರ ಮಹತ್ತರ ಬದಲಾವಣೆ ಕಂಡಿದೆ. ಹಿಂದೆ ರಸ್ತೆ, ಒಳಚರಂಡಿ ಸಮಸ್ಯೆ, ಜೋರು ಮಳೆ ಬಂದರೆ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗುವುದು ಸೇರಿ ವಿವಿಧ ಸಮಸ್ಯೆಗಳಿದ್ದವು. ಇವುಗಳನ್ನು ಹಂತ ಹಂತವಾಗಿ ಬಗೆಹರಿಸಿದ್ದೇನೆ.
●ಎನ್.ಎ.ಹ್ಯಾರಿಸ್, ಶಾಸಕ ಹಾಗೂ
ಶಾಂತಿನಗರ ಕಾಂಗ್ರೆಸ್ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.