ಬೆಂ.ಉತ್ತರದಿಂದ ದೇವೇಗೌಡರ ಸ್ಪರ್ಧೆ?
Team Udayavani, Mar 12, 2019, 12:30 AM IST
ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿರುವ ಮಾಜಿ ಪ್ರಧಾನಿ ದೇವೇಗೌಡರು, ಬೆಂಗಳೂರು ಉತ್ತರದಿಂದ ಸ್ಪರ್ಧಿಸಲಿದ್ದಾರೆಯೇ? ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರು ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆಯಲ್ಲಿ ಇಂಥದ್ದೊಂದು ಅಭಿಪ್ರಾಯವ್ಯಕ್ತವಾಗಿದೆ. ಜತೆಗೆ, ಸಭೆಯಲ್ಲಿಯೇ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದೂ ಆಗ್ರಹಿಸಲಾಯಿತು. ಈ ಬಗ್ಗೆ ಸಭೆ ನಂತರ ಮಾತನಾಡಿದ ದೇವೇಗೌಡರು, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಂತೂ ಖಚಿತ.
ಬೆಂಗಳೂರು ಉತ್ತರ, ತುಮಕೂರು ಮತ್ತು ಮೈಸೂರಿನಿಂದ ಸ್ಪರ್ಧೆ ಮಾಡಬೇಕು ಎಂಬ ಒತ್ತಡವಿದೆ. ಆದರೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿದರು. ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದೆ ಎಂದೂ ಅವರು ತಿಳಿಸಿದರು. ಅಂದರೆ, ಹೆಚ್ಚು ಕಡಿಮೆ ಗುರುವಾರ ಎಂಟು ಲೋಕಸಭೆ ಕ್ಷೇತ್ರಗಳ ಮುಖಂಡರ ಸಭೆ ಕರೆಯಲಾಗಿದ್ದು, ಅಂದೇ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಭೆ
ಅಭ್ಯರ್ಥಿಗಳ ಫೈನಲ್ ಮಾಡುವ ಬಗ್ಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹ ಖಾಸಗಿ ಹೋಟೆಲ್‌ನಲ್ಲಿ ಭಾನುವಾರವೇ ತುಮಕೂರು, ಸೋಮವಾರ ಮೈಸೂರು ಮುಖಂಡರ ಜತೆ ಸಭೆ ನಡೆಸಿದ್ದಾರೆ. ತುಮಕೂರು ಮತ್ತು ಮೈಸೂರು ಕ್ಷೇತ್ರಗಳನ್ನೂ ಜೆಡಿಎಸ್‌ಗೆà ಕೇಳಿ ಎಂದು ಈ ಭಾಗದ ನಾಯಕರು ಒತ್ತಾಯಿಸಿದ್ದಾರೆ. ಒಂದು ವೇಳೆ ಈ ಎರಡೂ ಕ್ಷೇತ್ರಗಳು ಸಿಕ್ಕರೆ ಇಲ್ಲಿ ಯಾರನ್ನು ಅಭ್ಯರ್ಥಿಗಳನ್ನಾಗಿ ಮಾಡಬಹುದು ಎಂಬ ಬಗ್ಗೆಯೂ ಚರ್ಚೆಯಾಗಿದೆ. ಮೈಸೂರಿನಿಂದ ಪ್ರೊ.ರಂಗಪ್ಪ, ಹರೀಶ್‌ಗೌಡ, ತುಮಕೂರು ಕ್ಷೇತ್ರಕ್ಕೆ ಎಂ.ಟಿ.ಕೃಷ್ಣಪ್ಪ, ನಿಂಗಪ್ಪ, ರಮೇಶ್‌ಬಾಬು ಸೇರಿ ಹಲವರ ಹೆಸರು ಪ್ರಸ್ತಾಪವಾಯಿತು ಎಂದು ಹೇಳಲಾಗಿದೆ.
ದೇವೇಗೌಡರು ಎಂದರೆ ನನಗೆ ಭಯವಿಲ್ಲ. ಅವರ ಬಗ್ಗೆ ಗೌರವವಿದೆ. ದೊಡ್ಡವರೊಂದಿಗೆ ಸೆಣಸಾಡಲು ಸಿದ್ಧನಿದ್ದೇನೆ. ಪಕ್ಷ ಎಲ್ಲಿ ಟಿಕೆಟ್ ನೀಡುತ್ತದೋ ಅಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಹೊರಗೆ ಹೋಗುವುದಿಲ್ಲ. ಇಲ್ಲಿ ಟಿಕೆಟ್ ನೀಡದೇ ಇದ್ದರೂ, ಬಿಜೆಪಿಯನ್ನು ಗೆಲ್ಲಿಸುವ ಶಕ್ತಿ ಇದೆ.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.