ಎಚ್‌ಡಿಕೆ 5 ವರ್ಷ ಸಿಎಂ ಆದರೆ ಅಸಮಾಧಾನವಿಲ್ಲ
Team Udayavani, Jun 4, 2018, 6:50 AM IST
ಬೆಂಗಳೂರು: “ಸಮ್ಮಿಶ್ರ ಸರ್ಕಾರದಲ್ಲಿ ಐದು ವರ್ಷವೂ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂಬ ಕರಾರು ವಿಚಾರದಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದಟಛಿ’ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂಬ ವಿಚಾರವಾಗಿ ನಾನು ಏನೂ ಮಾತನಾಡಿಲ್ಲ.
ವೇಣುಗೋಪಾಲ್ ಬಳಿಯೂ ಚರ್ಚಿಸಿಲ್ಲ. ಪಕ್ಷದ ಸಭೆಗೂ ಹೋಗಿಲ್ಲ. ಆದರೂ, ನನ್ನ ಹೆಸರನ್ನು ಸುಮ್ಮನೆ ಎಳೆದು
ತರಲಾಗಿದೆ ಎಂದರು. ನನ್ನ ಹಾಗೂ ಹೈಕಮಾಂಡ್ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಬಿಂಬಿಸುವ ಪ್ರಯತ್ನ
ಇದಾಗಿದೆ. ಆ ರೀತಿ ಏನೂ ಆಗಿಲ್ಲ.
ಕುಮಾರಸ್ವಾಮಿಯವರು ಐದು ವರ್ಷ ಸಿಎಂ ಎಂದು ಹೈಕಮಾಂಡ್ ತೀರ್ಮಾನಿಸಿದೆ. ಅದನ್ನು ಎಲ್ಲರೂ
ಒಪ್ಪಿಕೊಂಡಿದ್ದೇವೆ. ಆ ತೀರ್ಮಾನವನ್ನುವೇಣುಗೋಪಾಲ್ ಪ್ರಕಟಿಸಿದ್ದಾರೆ. ಒಂದು ತಂಡವಾಗಿ ನಾವೆಲ್ಲ ಅದನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು. ಸಂಪುಟದಲ್ಲಿ ಹಿರಿಯರಿಗೆ ಅವಕಾಶ ಕೊಡಬಾರದು ಎಂಬ ವಿಚಾರದಲ್ಲಿ
ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ
ಉತ್ತರಿಸಿದರು. ಎಸ್.ಆರ್.ಪಾಟೀಲ್ ಹಿರಿಯ ನಾಯಕರು. ಅವರು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಯಾಕೆ ರಾಜೀನಾಮೆ
ಸಲ್ಲಿಸಿದ್ದಾರೆ ಎಂಬುದು ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ. ಅವರಿಗೆ ಅಸಮಾಧಾನ ಆಗಿದ್ದರೆ ಕುಳಿತು ಚರ್ಚಿಸಿ ಸಮಾಧಾನ ಮಾಡಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು