ಕ್ಷೇತ್ರದ ಮಗನಾಗುವ ಆಸೆಯಿತ್ತು
Team Udayavani, May 27, 2018, 11:38 AM IST
ಬೆಂಗಳೂರು: ರಾಮಚಂದ್ರ ಅವರ ಪರವಾಗಿ ಶನಿವಾರ ಬೆಳಗ್ಗೆಯಿಂದ ಪ್ರಚಾರ ನಡೆಸಿದ ಪ್ರಜ್ವಲ್ ರೇವಣ್ಣ ಭಾಷಣ ಮಾಡದಂತೆ ದೇವೆಗೌಡರು ಸೂಚಿಸಿದ್ದರು. ಹಲವು ಬಡಾವಣೆಗಳಲ್ಲಿ ಕಾರ್ಯಕರ್ತರು ಮಾತನಾಡುವಂತೆ ಒತ್ತಾಯಿಸಿ ಪ್ರಜ್ವಲ್ ಪರ ಘೋಷಣೆ ಕೂಗಿ ಅವರು ಎಲ್ಲಿಯೂ ಮಾತನಾಡಿರಲಿಲ್ಲ.
ಆದರೆ, ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಕೆಲ ನಿಮಿಷಗಳ ಮೊದಲು ಮಾತನಾಡಿರುವ ಪ್ರಜ್ವಲ್, “ಕ್ಷೇತ್ರದ ಮಗನಾಗಿ ಕೆಲಸ ಮಾಡುವ ಆಸೆಯಿತ್ತು. ಇನ್ನು ಮುಂದೆಯೂ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ,’ ಎಂದರು.
ದಟ್ಟಣೆಯಲ್ಲಿ ಸಿಲುಕಿದ ಎಚ್ಡಿಡಿ: ರಾಮಚಂದ್ರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಜಾಲಹಳ್ಳಿಯಿಂದ ಗೊರಗುಂಟೆ ಪಾಳ್ಯದ ಕಡೆಗೆ ಹೋಗುವ ವೇಳೆ ಆ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಹೀಗಾಗಿ ಸುಮಾರು 15 ನಿಮಿಷಗಳ ಕಾಲ ಮಾಜಿ ಪ್ರಧಾನಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.