ಕುಡಿತದ ಚಟವಿದ್ದ ಮುಖ್ಯ ಪೇದೆ ಆತ್ಮಹತ್ಯೆ
Team Udayavani, Apr 30, 2022, 4:33 PM IST
ಬೆಂಗಳೂರು: ಪತ್ನಿ ಹಾಗೂ ಮಗಳು ಊರಿಗೆ ಹೋಗಿದ್ದ ವೇಳೆ ಮುಖ್ಯಪೇದೆ ನೇಣಿಗೆ ಶರಣಾಗಿರುವ ಘಟನೆ ಹೆಸರುಘಟ್ಟ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡಿಗೆಹಳ್ಳಿ ಪೊಲೀಸ್ ಠಾಣೆ ಮುಖ್ಯ ಪೇದೆ ಮಂಜುನಾಥ್ (44) ವಿಪರೀತ ಕುಡಿತದ ಚಟ ಅಂಟಿಸಿಕೊಂಟಿದ್ದರು. ಜತೆಗೆ ಜೀವನದಲ್ಲಿ ಜಿಗುಪ್ಸೆಯಿಂದ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಕೆಲಸಕ್ಕೆ ಹೋಗದಲೇ ಈತ ಕುಡಿತದ ಚಟದಲ್ಲಿ ತೊಡಗಿ ಕೊಂಡಿದ್ದ. ಹೀಗಾಗಿ ಕೆಲಸಕ್ಕೆ ಸರಿಯಾಗಿ ಹೋಗದೇ ಗೈರಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಜುನಾಥ್ಗೆ ಕುಟುಂಬದವರು ಬುದ್ಧಿ ಹೇಳಿ ಕೆಲಸಕ್ಕೆ ಕಳುಹಿಸುತ್ತಿದ್ದರೂ ಆತ ತನ್ನ ಚಾಳಿ ಬಿಟ್ಟಿರಲಿಲ್ಲ. ಪತ್ನಿ, ಓರ್ವ ಮಗಳು ಗುರುವಾರ ಊರಿಗೆ ಹೋಗಿದ್ದ ವೇಳೆ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದ ಮಂಜುನಾಥ್ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.