23ಕ್ಕೆ ಹಸೆಮಣೆ ಏರಬೇಕಿದ್ದ ಹೆಡ್ಕಾನ್ಸ್ಟೇಬಲ್ ಸಾವು
Team Udayavani, Aug 7, 2023, 10:25 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಹೆಡ್ಕಾನ್ಸ್ಟೇಬಲ್ವೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ ಮೂಲದ ನವೀನ್ ಕುಮಾರ್(35) ಮೃತ ಹೆಡ್ಕಾನ್ಸ್ಟೇಬಲ್. 2009ನೇ ಬ್ಯಾಚ್ನ ನವೀನ್ ಕುಮಾರ್ ನಗರದ ವಿವಿಧೆಡೆ ಹೆಡ್ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇತ್ತೀಚೆಗಷ್ಟೇ ಹೆಡ್ಕಾನ್ಸ್ಟೆàಬಲ್ ಆಗಿ ಮುಂಬಡ್ತಿ ಪಡೆದುಕೊಂಡು, ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದು, ಚಂದ್ರಾ ಲೇಔಟ್ನ ಬಿಸಿಸಿ ಲೇಔಟ್ನಲ್ಲಿ ವಾಸವಾಗಿದ್ದರು.
ಈ ಮಧ್ಯೆ ನವೀನ್ಕುಮಾರ್ಗೆ ಇದೇ ಆ.23, 24ರಂದು ಮದುವೆ ಕೂಡ ನಿಶ್ಚಯ ವಾಗಿತ್ತು. ಶುಕ್ರವಾರ ರಾತ್ರಿ ಕರ್ತವ್ಯ ಮುಗಿಸಿ ಕೊಂಡು ಮನೆಗೆ ತೆರಳಿದ ನವೀನ್ ಕುಮಾರ್ ಶನಿವಾರ ಮುಂಜಾನೆ ಎಚ್ಚರಗೊಂಡಿಲ್ಲ. ಸಹೋದರ ಪದೇ ಪದೆ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅನುಮಾನ ಗೊಂಡು ಆತ ಶನಿವಾರ ಬೆಳಗ್ಗೆ 8 ಗಂಟೆಗೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಬಳಿಕ ಸ್ಥಳೀಯ ಪೊಲೀಸರ ಸಹಾಯ ಪಡೆದು ಒಳ ಹೋಗಿ ನೋಡಿದಾಗ ಹಾಸಿಗೆ ಮೇಲೆ ಮಲಗಿದಲ್ಲೇ ಮೃತಪಟ್ಟಿದ್ದು, ಅನು ಮಾನಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ಕಳುಹಿಸಿದ್ದು, ವರದಿ ಬರಬರಬೇಕಿದೆ. ಕೌಟುಂಬಿಕ ವಿಚಾರಗಳಿಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿ ರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಅಂತಿಮವಾಗಿ ಮರಣೋತ್ತರ ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.