ಆರೋಗ್ಯ ಕರ್ನಾಟಕ ನನ್ನ ಸಂಕಲ್ಪ


Team Udayavani, Jun 27, 2021, 5:41 PM IST

Health Karnataka

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣಸಚಿವನಾಗಿಅಧಿಕಾರವಹಿಸಿಕೊಂಡ ಕ್ಷಣದಲ್ಲೇ, ರಾಜ್ಯದ ಆರೋಗ್ಯವಲಯವನ್ನು ಬಲಯುತವಾಗಿಸಿ ಆರೋಗ್ಯ ಕರ್ನಾಟಕ’ನಿರ್ಮಿಸುವ ಗುರಿ ಹಾಕಿಕೊಂಡಿದೆ. ಇದರಂತೆ, ಆರೋಗ್ಯ ಕ್ಷೇತ್ರದ ಮೂಲಸೌಕರ್ಯಾಭಿವೃದ್ಧಿ, ಹೊಸ ಆಸ್ಪತ್ರೆಗಳ ನಿರ್ಮಾಣ, ಖಾಲಿ ಹುದ್ದೆಗಳ ಭರ್ತಿ,ಉಚಿತ ಸೇವೆಗಳು ಸೇರಿದಂತೆ ಹಲವಾರುಸುಧಾರಣಾ ಕ್ರಮಗಳೊಂದಿಗೆ ಬದಲಾವಣೆಯ ಪರ್ವ ತರಲಾಗುತ್ತಿದೆ. ನನ್ನ ಈಜನ್ಮದಿನದಂದು ಮಹತ್ವದ ಹುದ್ದೆಯಲ್ಲಿದ್ದು ಸೇವೆ ಸಲ್ಲಿಸಿರುವುದನ್ನು ಸ್ಮರಿಸುವ ಹಾಗೂ ಇನ್ನು ಮುಂದೆ ಮಾಡಬೇಕಾದಕೆಲಸಗಳನ್ನು ಪಟ್ಟಿ ಮಾಡುವ ಸಂದರ್ಭ ಒದಗಿಬಂದಿದೆ.ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರ್ಕಾರ,ವಿವಿಧ ಸಂಘ, ಸಂಸ್ಥೆಗಳು ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ಜನರುಒಗ್ಗಟ್ಟಾಗಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ತೊಡಗಿದ್ದಾರೆ.

ಈ ಒಂದೂವರೆ ವರ್ಷದಲ್ಲಿ ಆರೋಗ್ಯ ಕ್ಷೇತ್ರದÇÉಾದಸುಧಾರಣೆಗಳು ಅನೇಕ. ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತಂದ ಪ್ರಗತಿಕಾರ್ಯಗಳಿಂದ ಇಂದು ಜನಸಾಮಾನ್ಯರಿಗೆ ಉತ್ತಮ ಆರೋಗ್ಯಸೇವೆಗಳುಲಭ್ಯವಿದೆ.ಹೊಸಗುರಿಗಳೊಂದಿಗೆಇನ್ನಷ್ಟು ಸುಧಾರಣೆತರುವ ಸಂಕಲ್ಪದೊಂದಿಗೆ ಮುನ್ನಡೆಯಲಾಗುತ್ತಿದೆ.

ಆರೋಗ್ಯ ಕೇಂದ್ರಗಳಲ್ಲಿ ಹಾಸಿಗೆ ವ್ಯವಸ್ಥೆ, ಪ್ರಯೋಗಾಲಯಗಳ ಸ್ಥಾಪನೆ, ಲಸಿಕಾ ಅಭಿಯಾನ ಸೇರಿದಂತೆ ಕೊರೊನಾ ವಿರುದ್ಧದಹೋರಾಟಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನು ಮಾಡುವಲ್ಲಿ ರಾಜ್ಯಮುಂದಿದೆ.ಕೇಂದ್ರ ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಕೂಡಕೋವಿಡ್‌ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಕೈಗೊಂಡಕ್ರಮಗಳನ್ನು ಶ್ಲಾ ಸಿರುವುದು ಹೆಮ್ಮೆಯ ವಿಚಾರ.ಪರೀಕ್ಷೆ, ಹಾಸಿಗೆ ಹೆಚ್ಚಳಕೋವಿಡ್‌ ಆರಂಭ ಕಾಲದಲ್ಲಿ ರಾಜ್ಯದಲ್ಲಿ ಕೇವಲ ಎರಡುಪ್ರಯೋಗಾಲಯಗಳಿದ್ದವು. ನಂತರ ಹಂತಹಂತವಾಗಿ ಲ್ಯಾಬ್‌ಗಳನ್ನು ಆರಂಭಿಸಿ ಒಟ್ಟು 241 ಲ್ಯಾಬ್‌ ಗಳು ಸ್ಥಾಪನೆಯಾದವು.ಈ ಪೈಕಿ 91 ಸರ್ಕಾರಿ ಪ್ರಯೋಗಾಲಯಗಳಾಗಿವೆ. ಇದರಿಂದಾಗಿಹೆಚ್ಚು ಸಂಪರ್ಕಿತರನ್ನು ಪತ್ತೆ ಮಾಡಿ ಅವರಿಗೂ ಪರೀಕ್ಷೆ ಮಾಡಿಸಿಸೋಂಕು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿದೆ.

ಪ್ರಸ್ತುತ ಪ್ರತಿದಿನ ಒಂದೂವರೆ ಲಕ್ಷದಷ್ಟು ಪರೀಕ್ಷೆ ನಡೆಸಲಾಗುತ್ತಿದೆ.ಕಳೆದ ವರ್ಷದ ಮಾರ್ಚ್‌ ನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 1,970ಆಕ್ಸಿಜನ್‌ ಹಾಸಿಗೆಗಳಿದ್ದು, ಅದನ್ನು 23,971 ಕ್ಕೆ ಏರಿಸಲಾಗಿದೆ. ಈಆಸ್ಪತ್ರೆಗಳಲ್ಲಿ ಯಾವುದೇ ಎಚ್‌ ಎಫ್ ಎನ್‌ ಸಿ ಹಾಸಿಗೆಗಳಿರಲಿಲ್ಲ.ಅದಕ್ಕಾಗಿ ಒಂದೇ ಬಾರಿಗೆ 1,248 ಹಾಸಿಗೆಗಳನ್ನು ಅಳವಡಿಸಲಾಯಿತು. 444 ಐಸಿಯು ಹಾಸಿಗೆಗಳ ಸಂಖ್ಯೆಯನ್ನು1,145 ಕ್ಕೆ ಹೆಚ್ಚಿಸಲಾಯಿತು.610 ವೆಂಟಿಲೇಟರ್‌ ಗಳನ್ನು2,158ಕ್ಕೆಏರಿಸಲಾಯಿತು. ಇದೇ ರೀತಿ ಮೆಡಿಕಲ್‌ಕಾಲೇಜುಗಳಲ್ಲಿ ಆಕ್ಸಿಜನ್‌ಹಾಸಿಗೆಗಳನ್ನು4,700 ರಿಂದ 9,405 ಕ, ವೆಂಟಿಲೇಟರ್‌ಗಳನ್ನು341ರಿಂದ 646 ಕ್ಕೆ ಏರಿಸಲಾಯಿತು. 15 ಎಚ್‌ ಎಫ‌…ಎನ್‌ ಸಿಹಾಸಿಗೆಗಳನ್ನು 570 ಕ್ಕೆ ಹೆಚ್ಚಿಸಲಾಯಿತು. ಇದಲ್ಲದೆ ಮೆಡಿಕಲ್‌ಕಾಲೇಜುಗಳಲ್ಲಿ ಲಿಕ್ವಿಡ್‌ ಆಮ್ಲಜನಕದ ಘಟಕಗಳ ಸಾಮರ್ಥ್ಯವನ್ನು151ಕೆಎಲ್‌ ನಿಂದ 224ಕೆಎಲ್‌ ಗೆ ಏರಿಸಲಾಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳ ಶೇ.50 ರಷ್ಟು ಹಾಸಿಗೆಗಳನ್ನು ಪಡೆಯುವುದು, ಪ್ರತಿಜಿÇÉೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕೋವಿಡ್‌ ಆರೈಕೆ ಕೇಂದ್ರಗಳನಿರ್ಮಾಣದಿಂದ ರೋಗಿಗಳ ಆರೈಕೆ ಸುಲಭವಾಗಿದೆ.ಆಕ್ಸಿಜನ್‌ ಸಾಂದ್ರಕಗಳ ಕೊಡುಗೆಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಕರೆಗೆ ಓಗೊಟ್ಟುಅನೇಕ ಖಾಸಗಿ ಕಂಪನಿ, ಸಂಘ ಸಂಸ್ಥೆಗಳು ಮುಂದೆ ಬಂದುಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಿವೆ.

ಇನ್ಫೋಸಿಸ್‌ ಪ್ರತಿಷ್ಠಾನದಿಂದ ಚರಕ ಆಸ್ಪತ್ರೆ ನಿರ್ಮಾಣಕ್ಕೆ ನೆರವು,ಜೆಎಸ್‌ ಡಬ್ಲೂ Â ಸ್ಟೀಲ್‌ ನಿಂದ ಬಳ್ಳಾರಿಯಲ್ಲಿ ಆಕ್ಸಿಜನ್‌ ಸಹಿತ ಹಾಸಿಗೆಗಳ ಕೋವಿಡ್‌ಕೇಂದ್ರ ನಿರ್ಮಿಸಲಾಗಿದೆ. ಈ ರೀತಿ ಅನೇಕಸಂಸ್ಥೆಗಳು ಹಾಸಿಗೆ, ಐಸಿಯು ಮೊದಲಾದ ಮೂಲಸೌಕರ್ಯಕ್ಕೆನೆರವು ನೀಡಿದವು. ಇದೇ ರೀತಿ ಇನ್ನಷ್ಟು ಸಂಸ್ಥೆಗಳು ಮುಂದೆಬಂದು ಆಕ್ಸಿಜನ್‌ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದ್ದು,ಸಾವಿರಾರು ರೋಗಿಗಳಿಗೆ ಜೀವರಕ್ಷಕವಾಗಿ ಕೆಲಸ ಮಾಡಿತು.ಕೋವಿಡ್‌ ಎರಡನೇ ಅಲೆಯ ವೇಳೆ ಮೆಡಿಕಲ್‌ ಆಕ್ಸಿಜನ್‌ ನಸಮಸ್ಯೆ ಹೆಚ್ಚಾಗಿ ಕಾಡಿತು.

ಇದಕ್ಕಾಗಿ ಕೈಗಾರಿಕಾ ಆಕ್ಸಿಜನ್‌ ಕೂಡಪಡೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿತು. ಆದರೆಶೀಘ್ರದಲ್ಲಿ ಸಾಗಣೆ ಮಾಡುವುದು ಸಮಸ್ಯೆಯಾಯಿತು. ಈ ವೇಳೆಕೈಗಾರಿಕೋದ್ಯಮಿಗಳು, ಪೂರೈಕೆದಾರರ ಜೊತೆ ಸಮಾಲೋಚಿಸಿತ್ವರಿತ ಕ್ರಮ ಕೈಗೊಳ್ಳಲಾಯಿತು. ಇದರಿಂದ ಸಕಾಲದಲ್ಲಿಆಸ್ಪತ್ರೆಗಳಿಗೆ ಆಕ್ಸಿಜನ್‌ ಸಿಲಿಂಡರ್‌ ತಲುಪಿಸಲು ನೆರವಾಯಿತು.

ಅನೇಕಖಾಸಗಿ ಕಂಪನಿಗಳು, ಟ್ರಸ್ಟ…, ಎನ್‌ ಜಿಒಗಳುಕೋವಿಡ್‌ಗಾಗಿ ಮೂಲಸೌಕರ್ಯ ಒದಗಿಸುವ ಆಶಯ ಹೊಂದಿದ್ದವು. ಕೆಲಕಂಪನಿಗಳು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ ಹಣಖರ್ಚು ಮಾಡಿ ಮೂಲಸೌಕರ್ಯ ನೀಡಲು ಬಯಸಿದ್ದವು.ಮೆಡಿಕಲ್‌ ಆಕ್ಸಿಜನ್‌ ಪೂರೈಕೆಯ ಸವಾಲುಗಳ ಸಂದರ್ಭದಲ್ಲಿಹೆಚ್ಚು ಸಹಾಯವಾಗಿದ್ದು ಆಕ್ಸಿಜನ್‌ಸಾಂದ್ರಕಗಳು. ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆಕೊಂಡಯ್ಯಬಹುದಾದ ಸಾಂದ್ರಕಗಳನ್ನು ನೀಡಲು ಕಂಪನಿಗಳು,ಸಂಘ, ಸಂಸ್ಥೆಗಳು ಮುಂದೆ ಬಂದವು.ಈಸಾಂದ್ರಕಗಳನ್ನು ಪಡೆದುಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಿಗೆ ಪೂರೈಕೆ ಮಾಡಲಾಯಿತು.ಆಕ್ಸಿಜನ್‌ ಕೊರತೆಯಿಂದಬಳಲುತ್ತಿದ್ದ ರೋಗಿಗಳು ಇದು ಬಹಳಷ್ಟುನೆರವಾಯಿತು.ವಿಶ್ವ ಆರೋಗ್ಯ ಸಂಸ್ಥೆಯಿಂದ 100 ಆಕ್ಸಿಜನ್‌ ಸಾಂದ್ರಕ,ಟೊಯೋಟಾ ಕಿರ್ಲೋಸ್ಕì ಮೋಟಾರ್ಸ್‌ ನಿಂದ 79 ಆಕ್ಸಿಜನ್‌ಸಾಂದ್ರಕ, ಸ್ನೇಹ ಚಾರಿಟೇಬಲ್‌ ಟ್ರಸ್ಟ… ನಿಂದ 500 ಆಕ್ಸಿಜನ್‌ಸಾಂದ್ರಕ, ಹರ್ಬಲೈಫ್ ಇಂಡಿಯಾದಿಂದ 150 ಆಕ್ಸಿಜನ್‌ಸಾಂದ್ರಕ, ಗ್ರೀನ್‌ ಕೋ ದಿಂದ 10 ಎಲ್‌ ಪಿಎಂ ಸಾಮರ್ಥ್ಯದ200 ಸಾಂದ್ರಕ ಸೇರಿದಂತೆ ವಿವಿಧ ಕಂಪನಿ, ಸಂಘಟನೆಗಳುಮೆಡಿಕಲ್‌ ಆಕ್ಸಿಜನ್‌ ಉಪಕರಣಗಳನ್ನು ನೀಡಿ ರೋಗಿಗಳ ಚಿಕಿತ್ಸೆಗೆನೆರವಾಗಿರುವುದು ಶ್ಲಾಘನೀಯ.

ಈ ಕೊಡುಗೆಗಳು ಕೊರೊನಾವಿರುದ್ಧದ ಒಗ್ಗಟ್ಟಿನ ಹೋರಾಟಕ್ಕೆ ಬಲ ನೀಡಿವೆ.ವೈದ್ಯರ ನೇಮಕರಾಜ್ಯದ ಇತಿಹಾಸದÇÉೇ ಮೊದಲ ಬಾರಿಗೆ ಅತಿ ಕಡಿಮೆಅವಧಿಯಲ್ಲಿ ನೇರ ನೇಮಕಾತಿ ಮೂಲಕ 1,763 ವೈದ್ಯರು,ವೈದ್ಯಾಧಿಕಾರಿಗಳ ಹುದ್ದೆ ತುಂಬಲಾಗಿದೆ.

715 ಹಿರಿಯ ತಜ್ಞರುಹಾಗೂ 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನೇಮಕದಿಂದಾಗಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಆರೋಗ್ಯ ಕೇಂದ್ರಗಳಲ್ಲಿ ಕೊರತೆ ನೀಗಿದೆ. ಕೋವಿಡ್‌ ಮೂರನೇಅಲೆ ಬರಬಹುದು ಹಾಗೂ ಇದರಲ್ಲಿ ಮಕ್ಕಳಿಗೆ ಹೆಚ್ಚುಸಮಸ್ಯೆಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.ಇದಕ್ಕೆ ಪೂರಕವಾಗಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ವಿಭಾಗವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ ಈ ನೇಮಕಾತಿ ಪ್ರಕ್ರಿಯೆಯಲ್ಲೇ ಹೊಸದಾಗಿ 153 ಮಕ್ಕಳ ತಜ್ಞರನ್ನು ನೇಮಿಸಲಾಗಿದೆ.

ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.