ಕರುಣಾಜನಕ ಕಥೆಗಳು: ತಾಯಿ ಮುಖ ನೋಡುವ ಅವಕಾಶವೂ ಸಿಗಲಿಲ್ಲ
ಅಮ್ಮ-ಮಗನನ್ನು ದೂರ ಮಾಡಿದ ಮಹಾಮಾರಿ | ಆಕ್ಸಿಜನ್ ಸಿಗದೆ ಸ್ವ್ಯಾಬ್ ಕಲೆಕ್ಟರ್ ಸಾವು
Team Udayavani, Apr 25, 2021, 11:39 AM IST
ಬೆಂಗಳೂರು: “ಯಾರಿಗೂ ಈ ರೀತಿ ಕಷ್ಟ ಬರಬಾರದು ಸರ್. ನಮ್ಮ ಶತ್ರುಗಳಿಗೂ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು. ನನ್ನ ಮಗನಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಮ್ಮ ಹೇಗಿದ್ದಾರೆ ಅಪ್ಪ ಎಂದು ಪೋನ್‌ನಲ್ಲಿ ಕೇಳುತ್ತಿದ್ದಾನೆ. ಅಯ್ಯೋ ದೇವರೇ, ಅವನಿಗೆ ನಿಮ್ಮ ಅಮ್ಮ ಇಲ್ಲ ಎಂದು ಹೇಗೆ ಹೇಳಲಿ’
ಹೀಗೆ. ಕೋವಿಡ್ ದಿಂದ ತನ್ನ ಪತ್ನಿಯನ್ನು ಕಳೆದುಕೊಂಡ ಪತಿ ಚಿತಾಗಾರದ ಬಳಿ ಶನಿವಾರ ಪತ್ನಿ ಮತ್ತು ಮಗನ ಸ್ಥಿತಿ ನೆನೆದು ಕಣ್ಣೀರಾದರು. ಕೋವಿಡ್ ಅಮ್ಮ -ಮಗನನ್ನು ದೂರ ಮಾಡಿದೆ. ಮಗ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊನೆ ಬಾರಿ ಹೆತ್ತತಾಯಿಯ ಮುಖ ನೋಡುವ ಅವಕಾಶವೂ ಮಗನಿಗಿಲ್ಲ. ಕರೆ ಮಾಡಿದಾಗೆಲ್ಲಾ ಅಪ್ಪ, ಅಮ್ಮ ಹೇಗಿದ್ದಾರೆ ಎಂದು ಕೇಳುತ್ತಾನೆ. ಏನೆಂದು ಹೇಳಲಿ ಎಂದು ಗೋಳಾಡಿದರು.
ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಪತ್ನಿಯನ್ನು ಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಉಸಿ-ರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ನನಗೆ ಮೂವರುಮಕ್ಕಳು. ಮಗಳಿಗೆ ಮದುವೆಯಾಗಿದೆ. ಎರಡನೇಯವನು ಆಸ್ಪತ್ರೆಯಲ್ಲಿದ್ದಾನೆ. ಇನ್ನೊಬ್ಬ ಮಗ ಇಲ್ಲೇ ಇದ್ದಾನೆ. ಅಂತ್ಯ ಸಂಸ್ಕಾರದ ಬಳಿಕ ಆಸ್ಪತ್ರೆ ಹತ್ತಿರ ಹೋಗಬೇಕು ಎಂದು ಕಣ್ಣೀರಾದರು.
“ನಾನು ನನ್ನ ತಮ್ಮನೇ ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಸ್ಯಾಚುರೇಷನ್ 92 ಇತ್ತು. ಆಸ್ಪತ್ರೆಯ ಒಳಗೆ ಅಮ್ಮನೇ ನಡೆದುಕೊಂಡು ಹೋದರು. ಐದು ದಿನಗಳಲ್ಲಿಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ತಮ್ಮನಿಗೆ ಇನ್ನೂ ಅಮ್ಮ ಮೃತಪಟ್ಟ ವಿಷಯ ಹೇಳಿಲ್ಲ.ಅವನಿಗೂ ಉಸಿರಾಟದ ತೊಂದರೆ ಇದೆ. ವಿಷಯ ತಿಳಿದರೆ ಸಮಸ್ಯೆ ಆಗಬಹುದು. ಅಮ್ಮ ಚೆನ್ನಾಗಿಯೇ ಇದ್ದಾರೆ ಎಂದು ಧೈರ್ಯ ತುಂಬುತ್ತಿದ್ದೇನೆ’ ಎಂದು ತಾಯಿಯನ್ನು ಕಳೆದುಕೊಂಡ ಮತ್ತೂಬ್ಬ ಮಗ ಚಿತಾಗಾರದ ಮುಂದೆ ಗೋಳಾಡಿದರು.
ಆರು ತಿಂಗಳ ಮಗುಗೂ ಜ್ವರ: ಮತ್ತೂಂದು ಪ್ರಕರಣದಲ್ಲಿ ಬಿಬಿಎಂಪಿನಿರ್ಲಕ್ಷ್ಯದ ಬಗ್ಗೆ ಮಹಿಳೆಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. “ಮೊದಲು ನೆಗಟಿವ್ ಅಂದರು. ನಂತರ ಮಗ, ಸೊಸೆ ಎಲ್ಲರಿಗೂ ಪಾಸಿಟಿವ್‌ಬಂತು. ಆರು ತಿಂಗಳ ಮಗುಗೂ ಜ್ವರ ಬಂದಿದೆ. ಬಿಯು ಸಂಖ್ಯೆ ನಾಲ್ಕು ದಿನ ಆದರೂ ಕೊಡಲಿಲ್ಲ. ಚಿಕಿತ್ಸೆಗಾಗಿ ಅಲೆದಾಡುವಂತಾಯಿತು ಎಂದು ಕಣ್ಣೀರಿಡುತ್ತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಚೆಕ್ ಮಾಡಿಸಿದಾಗ ಮೊದಲು ಪಾಸಿಟಿವ್ ಬಂದಿತ್ತು. ಕಿಮ್ಸ್ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆ ನೀಡದೇನೆ ಒಂದು ಲಕ್ಷ ರೂ. ಹಣ ಪಡೆದಿದ್ದಾರೆ. ಆಮೇಲೆ ಬಿಬಿಎಂಪಿಗೆ ಹೋದರೆ ಉಚಿತವಾಗಿ ಆಗುತ್ತದೆ. ಅಲ್ಲಿಗೆ ಹೋಗಿ ಅಂದರು. ಬಿಬಿಎಂಪಿಗೆ ಹೋಗಿ ಆಯುಕ್ತರ ಆಪ್ತಸಹಾಯಕಿಯನ್ನು ಭೇಟಿ ಯಾಗಿ ಮಾತಾನಾಡಿದ್ದೆವು. ಆದರೆ, ಬಿಯು ನಂಬರ್ ಬರಲೇ ಇಲ್ಲ ಎಂದು ದೂರಿದ್ದಾರೆ.
ನಮ್ಮ ಸೊಸೆ ಮತ್ತು ಮಗನಿಗೂ ಪಾಸಿಟಿವ್: ನಾಲ್ಕು ದಿನದ ಬಳಿಕ ಬಿಯು ನಂಬರ್ ಬಂತು. ಆಗ ವರದಿ ನೋಡಿದಾಗ ನೆಗೆಟಿವ್ ಬಂದಿತ್ತು. ಆಮೇಲೆ ನಮ್ಮ ಮಗನಿಗೆ ಹೆಚ್ಚು ಉಸಿರಾಟ ತೊಂದರೆ ಉಂಟಾಯಿತು. ಆಮೇಲೆಭಯಪಟ್ಟು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ ಬಳಿಕಪಾಸಿಟಿವ್ ಬಂತು. ಆಗ ಬಿಬಿಎಂಪಿನವರು ಮನೆ ಫೋಟೋ ತೆಗಿಯೋಕೆ ಬಂದರು. ಈಗ ನಮ್ಮ ಸೊಸೆ ಮತ್ತು ಮಗನಿಗೂ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ನಮ್ಮ ಮನೆಯಲ್ಲಿ ಆರು ತಿಂಗಳ ಮಗು ಇದೆ. ಆ ಮಗುವಿಗೂ ಕೂಡ ಜ್ವರ ಬಂದಿದೆ. ತಾಯಿಇಲ್ಲದಿರುವುದರಿಂದ ಹಾಲು ಸಹ ಕುಡಿಯುತ್ತಿಲ್ಲ. ನಾವೇನುಮಾಡಬೇಕು. ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು. ಎಲ್ಲರೂ ಹಾಳಾಗೋಗಿ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ವಾರಿಯರ್‌ಗೂ ಸಿಗಲಿಲ್ಲ ಹಾಸಿಗೆ :
ಕೋವಿಡ್ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಹಾಸಿಗೆ ಹಾಗೂ ಆಕ್ಸಿಜನ್ ಸಿಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ನಗರದ ಸ್ವ್ಯಾಬ್ ಕಲೆಕ್ಟರ್ ಗೀತಾ(35) ಕೋವಿಡ್ ಸೋಂಕಿನಿಂದ ಮೃತಪಟ್ಟ ಕೋವಿಡ್ ವಾರಿಯರ್. ಬಿಬಿಎಂಪಿ ಈಸ್ಟ್ ಝೊàನ್‌ನ ಮರ್ಫಿಟೌನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾಬ್ ಕಲೆಕ್ಟರ್ ಆಗಿದ್ದ ಗೀತಾ ಅವರಿಗೆ ಕಳೆದ ಒಂದು ವಾರದ ಹಿಂದೆ ಪಾಸಿಟಿವ್ ಆಗಿತ್ತು. ನಾಲ್ಕೈದು ಆಸ್ಪತ್ರೆಗಳಿಗೆ ಅಲೆದಾಡಿದರೂ ಹಾಸಿಗೆ ಸಿಕ್ಕಿರಲಿಲ್ಲ. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಲ್ಕು ಗಂಟೆ ಕಾದ ಬಳಿಕ ಹಾಸಿಗೆಸಿಕ್ಕಿದೆ. ಅಷ್ಟರಲ್ಲಿ ಆಕ್ಸಿಜನ್ ಲೆವಲ್ ಕಡಿಮೆಯಾಗಿ, ಸಾವನ್ನಪ್ಪಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ನಂತರ ಐಸಿಯು ಬೆಡ್ ಸಹ ನೀಡಿರಲಿಲ್ಲ. ಕೋವಿಡ್ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರೂ ಬಿಬಿಎಂಪಿಯಿಂದ ಸರಿಯಾದ ಗ್ಲೌಸ್, ಮಾಸ್ಕ್ ಕೊಡುತ್ತಿಲ್ಲ. ಮೃತ ಸೋಂಕಿತ ಮಹಿಳೆಗೆ ಎಂಟು ವರ್ಷದ ಮಗಳು ಇದ್ದಾಳೆ. ಮಗಳಿಗೆ ಯಾರು ದಿಕ್ಕು ಎಂದು ಸಂಬಂಧಿಕರು ಕಣ್ಣೀರು ಹಾಕಿದರು.
ಮಾವನ ಸಂಸ್ಕಾರಕ್ಕೆ ಬಡ್ಡಿಗೆ ಹಣ ತಂದ ಸೊಸೆ :
ಚಿತಾಗಾರದ ಸಿಬ್ಬಂದಿಗೆ ಹೆಚ್ಚು ಹಣ ನೀಡಿದರೆ ಅವರೇ ಎಲ್ಲಾ ಕೆಲಸ ಮಾಡುತ್ತಾರೆ. ಕಡಿಮೆ ದುಡ್ಡು ಕೊಟ್ರೆ ಎಲ್ಲವನ್ನೂ ನಮ್ಮ ಕೈಯಲ್ಲೇ ಮಾಡಿಸುತ್ತಾರೆ. ಉಚಿತ ಎಂದು ಬೋರ್ಡ್ ಹಾಕಿದ್ದಾರೆ. ಆದರೂ ಹಣ ಕೊಡಬೇಕು’ ಇದು, ಶನಿವಾರ ಕೋವಿಡ್ ದಿಂದ ಮಾವನನ್ನು ಕಳೆದುಕೊಂಡ ಮಹಿಳೆಯೊಬ್ಬರು ಚಿತಾಗಾರದ ಬಳಿ ಹೇಳಿದ್ದು. ತನ್ನ ಮಾವ ಕೋವಿಡ್ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರ ಮಾಡಲು ಯಲಹಂಕ ಚಿತಾಗಾರಕ್ಕೆ ಬಂದ ಮಹಿಳೆ ಅಲ್ಲಿ ಹಣ ಪೀಕುವ ವ್ಯವಸ್ಥೆ ಕಂಡು ಕಣ್ಣೀರು ಹಾಕಿದರು. ಕೊರೊನಾ ಸೋಂಕಿನಿಂದ ಮೃತಪಟ್ಟ ಮಾವನಸಂಸ್ಕಾರ ಮಾಡೋದಕ್ಕೆ ಆ್ಯಂಬುಲೆನ್ಸ್ ಚಾಲಕ ಐದು ಸಾವಿರ ರೂ. ಹಾಗೂ ಚಿತಾಗಾರದ ಸಿಬ್ಬಂದಿ ಮೂರು ಸಾವಿರ ರೂ. ಪಡೆದಿದ್ದಾರೆ. ಮೂರು ಸಾವಿರ ರೂ. ಕೊಟ್ಟರೂ ಮೃತದೇಹದ ಮೇಲಿನ ಪಿಪಿಇ ಕಿಟ್, ಶವದ ಮೇಲೆ ಹಾಕಿದ್ದ ಹೂವಿನ ಹಾರವನ್ನು ನಮ್ಮ ಕೈಯಲ್ಲೇ ಎತ್ತಿ ಬಿಸಾಕಿಸಿದರು. ಮಾವನ ಅಂತ್ಯ ಸಂಸ್ಕಾರಕ್ಕಾಗಿ ಫೈನಾನ್ಸರ್ ಹತ್ತಿರ ಹೋಗಿ 10 ಸಾವಿರ ರೂ. ಸಾಲ ತೆಗೆದುಕೊಂಡು ಬಂದಿದ್ದೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.