ಕುಂಚದಲ್ಲಿ ಅರಳಿದ ದೇವಲೋಕ


Team Udayavani, Dec 4, 2018, 11:59 AM IST

kunchadalli.jpg

ಬೆಂಗಳೂರು: ಬೆಣ್ಣೆ ಕದಿಯುವ ಕೃಷ್ಣ, ವರ ನೀಡುವ ಲಕ್ಷ್ಮೀ, ಸಿದ್ಧಿಬುದ್ಧಿಯ ವಿನಾಯಕ, ತಿರುಪತಿ ತಿಮ್ಮಪ್ಪ ಹೀಗೆ ಎಲ್ಲ ದೇವಾನುದೇವತೆಗಳು ಇಲ್ಲಿ ಅವತರಿಸುವೆ. ಇದು ದೇವಲೋಕ.

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಸೋಮವಾರದಿಂದ ಕಲರ್ ಆಫ್ ಗ್ರ್ಯಾಟಿಟ್ಯೂಡ್‌ ಶೀರ್ಷಿಕೆಯಡಿ ಆರಂಭವಾಗಿರುವ ಚಿತ್ರಕಲಾ ಪ್ರದರ್ಶನದಲ್ಲಿ ಕೇರಳದ ಮ್ಯೂರಲ್‌ ಕಲಾ ಪ್ರದರ್ಶನ ಪ್ರೇಕ್ಷಕರ ಮನ ಸೆಳೆಯುತ್ತಿದೆ. ಡಿ.9ರವರೆಗೂ ಪ್ರದರ್ಶನ ನಡೆಯಲಿದ್ದು, ಬೆಳಗ್ಗೆ 10 ರಿಂದ ಸಂಜೆ 7ರವರೆಗೂ ಪ್ರದರ್ಶನ ತೆರೆದಿರುತ್ತದೆ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಚಿತ್ರಪ್ರದರ್ಶನಗಳಲ್ಲಿ ಭಾಗವಹಿಸುವ ಕಲಾವಿದ ವಿಕಾಸ್‌ ಕೊವೂರ್‌ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಿಕಾಸ್‌ ಕೊವೂರ್‌ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕಿದೆ.

ಅದಕ್ಕಾಗಿ ಕಳೆದ 4 ವರ್ಷಗಳಿಂದ ವಿಕಾಸ್‌ ಕೊವೂರ್‌ ಬಳಿ ಚಿತ್ರಕಲೆ ಕಲಿತ ಅಂಚಿತ್ಯಾ ಸುರೇಶ್‌, ವಿಮಾಲ್‌ ಕುಮಾರ್‌, ಶೀತಲ್‌ ಚಂದ್ರನ್‌, ರಿಗ್ನಿಶ್‌ ಪುಳಿಯೊಳ, ಮಹೇಶ್‌ ಹಾಗೂ ಸುಮಾ ಪ್ರೇಮಾಚಂದ್‌ ಅವರು ಚಿತ್ರಗಳನ್ನು ರಚಿಸಿ ಈ ಕಲರ್ ಆಫ್ ಗ್ರ್ಯಾಟಿಟ್ಯೂಡ್‌ ಚಿತ್ರಪ್ರದರ್ಶನ ಹಮ್ಮಿಕೊಂಡಿದ್ದಾರೆ. ಈ ಚಿತ್ರಪ್ರದರ್ಶನದಿಂದ ಬಂದ ಹಣವನ್ನು ವಿಕಾಸ್‌ ಕೊವೂರ್‌ ಅವರ ಶಸ್ತ್ರಚಿಕಿತ್ಸೆಗೆ ಬಳಸಲಾಗುವುದು.

ಚಿತ್ರರಸಿಕರಿಗೆ ಗಂಧರ್ವ ಲೋಕ: ವಿಷ್ಣುವಿನ ಮತ್ಸಾವಾತರ, ಗಣಪತಿ ಮತ್ತು ಬಾಲ ಕೃಷ್ಣನ ತುಂಟಾಟಗಳು, ಕಂಸವಧೆ, ತರುಲತೆಗಳ ನಡುವೆ ಇರುವ ಕನ್ಯೆ ಈ ಚಿತ್ರಗಳ ಹಿಂಬದಿಯಲ್ಲಿ ಮೂಡಿ ಬಂದಿರುವ ಕಲಾತ್ಮಕ ಕುಸುರಿ ಚಿತ್ರರಸಿಕರನ್ನು ಗಂಧರ್ವ ಲೋಕಕ್ಕೆ ಕರೆದೊಯ್ಯಲಿದೆ.

ತಾಯಿ ಯಶೋಧೆಗೆ ತಿಳಿಯದಂತೆ ಬೆಣ್ಣೆ ಕದಿಯುವ ಕಳ್ಳಕೃಷ್ಣ, ಬೆಣ್ಣ ಕದ್ದ ಕೃಷನನ್ನು ಕಡೆಗೋಲಿನ ಹಗ್ಗದಿಂದ ಕಟ್ಟಿ ಶಿಕ್ಷೆ ನೀಡುತ್ತಿರುವ ತಾಯಿ ಯಶೋಧೆ, ಮೋಡ ಮತ್ತು ನವಿಲುಗರಿಗಳ ನಡುವೆ ಕೊಳಲನೂದುತ್ತಿರುವ ಕೃಷ್ಣ, ಗೋಪಿಕೆಯರ ವಸ್ತ್ರಾಪಹರಣ ಮಾಡುತ್ತಿರುವ ಬಾಲ ಕೃಷ್ಣ ಹೀಗೆ ಕೃಷ್ಣನ ತುಂಟಾಟಗಳು ಕಲಾವಿದ ವಿಕಾಸ್‌ ಕೊವೂರ್‌ ಅವರ ಕುಂಚದಲ್ಲಿ ಅಂದವಾಗಿ ಅರಳಿನಿಂತಿವೆ.

ಬಿಳಿ, ನೀಲಿ, ಹಸಿರು ಬಣ್ಣಗಳು ಹದವಾಗಿ ಬೆರೆತು ಮೂಡಿದ ನರಸಿಂಹ ಇಲ್ಲಿ ಉಗ್ರನಾಗಿಲ್ಲ, ವಿವಿಧ ಬಣ್ಣಗಳಿಂದ ಅಲಂಕಾರಗೊಂಡಿರುವ ಈ ತಿಮ್ಮಪ್ಪನ ನೋಡಿದರೆ ತಿರುಪತಿ ತಿಮ್ಮಪ್ಪನ ದರ್ಶನವಾದಂತ ಭಾವ ಮೂಡಲಿದೆ. ಸದಾ ಒಡವೆವೈಡೂರ್ಯಗಳ ನಡುವೆ ಕಳೆದು ಹೋಗಿರುವ ಲಕ್ಷ್ಮೀ ಇಲ್ಲಿ ತೀರಾ ಸರಳವಾಗಿದ್ದಾಳೆ. ಒಡವೆಯ ಅಲಂಕಾರಗಳಿಂದ ದೂರುದಿರುವ, ಕೈಯಲ್ಲಿ ದುಡ್ಡಿನ ಚೀಲವನ್ನು ಹಿಡಿಯದ ಲಕ್ಷ್ಮೀ ಚಿತ್ರ ನೋಡುಗರ ಮನ ಸೆಳೆಯಲಿದೆ.

ಮೋದಕ ಪ್ರಿಯ ಗಣೇಶನಿಗೆ ಸಂಬಂಧಿಸಿದ ಹಲವು ಪ್ರಸಂಗಗಳನ್ನು ಈ ಚಿತ್ರ ಪ್ರದರ್ಶನ ಬಿಡಿಸಿಡಲಿದೆ. ನೃತ್ಯಗಾರ್ತಿಯರು, ಕಿನ್ನರರು, ಗಂಧರ್ವ ಕನ್ಯೆಯರು, ಕಾಳಿಕ ಮಾತೆ, ಸತ್ಯಭಾಮ, ರುಕ್ಮಿಣಿ, ವನಗಳಲ್ಲಿ ಕೊಳಲನ್ನೂದುತ್ತಿರುವ ಕಳ್ಳ ಕೃಷ್ಣನ ಚಿತ್ರಗಳನ್ನು ನೋಡಿದರೆ ಪ್ರೇಕ್ಷಕರಲ್ಲಿ ಭಕ್ತಿ ಭಾವ ಮೂಡಲಿದೆ.

ರಾಧೆಯೊಂದಿಗೆ ಸರಸವಾಡುವ ಕೃಷ್ಣನ ನಾನಾ ಭಂಗಿಗಳು ಕೆಂಪು ರಂಗಿನಲ್ಲಿ ಅದ್ಭುತವಾಗಿ ಮೂಡಿ ಬಂದಿವೆ. ಆ್ಯಕ್ರಿಲಿಕ್‌ ಮಾಧ್ಯಮದಲ್ಲಿ ಮೂಡಿದ ಒಂದೊಂದು ಚಿತ್ರಗಳು ಪುರಾಣದ ಕಥೆಗಳನ್ನು ಸಾರಲಿವೆ. 30 ಕಲಾಕೃತಿಗಳು ಭಿನ್ನ ವಿಭಿನ್ನವಾಗಿ ಮೂಡಿಬಂದಿದ್ದು ಜನಮನ ಸೂರೆಗೊಳ್ಳುವಂತಿದೆ.

* ಶ್ರುತಿ ಮಲೆನಾಡತಿ

ಟಾಪ್ ನ್ಯೂಸ್

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

11

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.