Heavy Rain: ಭಾರೀ ಗಾಳಿಗೆ 56 ಮರ ಧರೆಗೆ; 6 ಮಂದಿಗೆ ಗಾಯ
Team Udayavani, Jul 28, 2024, 11:21 AM IST
ಬೆಂಗಳೂರು: ರಾಜಧಾನಿಯ ರಸ್ತೆಗಳ ಇಕ್ಕೆಲಗಳಲ್ಲಿರುವ ಬೃಹತ್ ಗಾತ್ರದ ಮರಗಳು ಆಗಾಗ್ಗೆ ಅಲ್ಲಲ್ಲಿ ಧರೆಗುರುಳಿ ಬೀಳುತ್ತಿದ್ದು, ಸಾರ್ವಜನಿಕರಲ್ಲಿ ಭಯ ಶುರುವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಶನಿವಾರ ಒಟ್ಟಾರೆ 56 ಮರಗಳು ಧರೆಗೆ ಉರುಳಿವೆ.
ಅದರಲ್ಲೂ ಆಟೋ, ಬೈಕ್, ಕಾರು ಸೇರಿದಂತೆ ವಾಹನ ಸವಾರರು ಮುಂದೇನೂ ಕಾದಿದೆಯೋ ಎಂಬ ಆತಂಕದಲ್ಲಿ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪಾಲಿಕೆ ಅರಣ್ಯ ವಿಭಾಗ ಅಧಿಕಾರಿಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ಮರಗಳನ್ನು ತೆರವು ಮಾಡದೇ ಇರುವುದು ಇಷ್ಟಕ್ಕೆಲ್ಲ ಕಾರಣ ಎಂಬುವುದು ಸಾರ್ವಜನಿಕರ ಆಕ್ರೋಶವಾಗಿದೆ.
ಈ ಮಧ್ಯೆ ಶನಿವಾರ ಕ್ವಿನ್ಸ್ ರಸ್ತೆ ಮತ್ತು ರಿಚ್ಮಂಡ್ ರಸ್ತೆ, ಸೌತ್ ಎಂಡ್ ಸರ್ಕಲ್, ಹೊಸಕೆರೆಹಳ್ಳಿ, ಸುಂಕೇನಹಳ್ಳಿ, ಅತ್ತಿಗುಪ್ಪೆ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಬಿದ್ದಿದ್ದು, 2 ಕಾರು, ಆಟೋ, ಬೈಕ್‌ಗಳು ಜಖಂ ಆಗಿದ್ದು ಆರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಆಟೋ ಮೇಲೆ ಮರ ಬಿದ್ದ ಹಿನ್ನೆಲೆ ಯಲ್ಲಿ ಆಟೋ ಚಾಲಕನಿಗೆ ಸಣ್ಣಪುಟ್ಟಗಾಯ ಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಅರಿತು ಬಿಬಿಎಂಪಿ ಅರಣ್ಯ ಘಟಕದ ಮರ ಗಳ ನಿರ್ವಹಣಾ ತಂಡ ಸ್ಥಳಕ್ಕೆ ದೌಡಾಯಿಸಿ ತುರ್ತಾಗಿ ಮರ, ರೆಂಬೆ ಕೊಂಬೆಗಳು ತೆರವುಗೊ ಳಿಸಿ, ಸಾರ್ವಜನಿಕರಿಗೆ ಹಾಗೂ ರಸ್ತೆಯಲ್ಲಿ ಸಂಚರಿ ಸುವ ವಾಹನಗಳಿಗೆ ಅನುವುಮಾಡಿಕೊಟ್ಟಿದೆ. ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ ಎಂದು ಪಾಲಿಕೆ ಅರಣ್ಯ ವಿಭಾಗದ ಉಪ ಸಂರಕ್ಷಣಾ ಅಧಿಕಾರಿಯಾದ ಬಿ.ಎಲ್.ಜಿ ಸ್ವಾಮಿ ತಿಳಿಸಿದ್ದಾರೆ.
ದಿಚಕ್ರ ವಾಹನ ಸವಾರಿಗೆ ಗಾಯ: ಕೆಂಪೇಗೌಡ ನಗರ ಬಳಿಯ ಗವಿಪುರಂ ಎಕ್ಸ್‌ಟೆಂಷನ್ ಬಳಿಯ ಸುಂಕೇನಹಳ್ಳಿ ಉದ್ಯಾನವನದಲ್ಲಿ ಗಾಳಿಯ ರಭಸಕ್ಕೆ ಮರದ ಸಣ್ಣ ಕೊಂಬೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮುಂಭಾಗದ ಮೇಲೆ ಮುರಿದು ಬಿದ್ದಿದ್ದು, ಕೊಂಬೆಗಳು ಬಿದ್ದ ರಭಸಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಗಗನ್ (38) ಮತ್ತವರ ಪುತ್ರ ಯುವ (10) ಗಾಯ ಗೊಂಡಿದ್ದಾರೆ. ಗಾಯಾಳುಗಳಿಗೆ ಪಾಲಿಕೆಯಿಂದ ಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅತ್ತಿಗುಪ್ಪೆಯ ಬಿನ್ನಿಮಿಲ್ ಎಂಪ್ಲಾಯಿಸ್ ಕಾಲೋನಿ, 14ನೇ ಮುಖ್ಯರಸ್ತೆಯ ಬದಿಯಲ್ಲಿ ಬೆಳೆದಿದ್ದ ಪೆಲ್ಟೋಪಾರಂ ಮರದ ಕೊಂಬೆಯು ಗಾಳಿ ರಭಸಕ್ಕೆ ರಸ್ತೆಯಲ್ಲಿದ್ದ ವಾಹನದ ಮೇಲೆ ಮುರಿದು ಬಿದ್ದಿದ್ದು, ರೆಂಬೆಯು ಬಿದ್ದ ರಭಸಕ್ಕೆ ವಾಹನವು ಸಂಪೂರ್ಣ ಜಖಂ ಆಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌತ್ ಎಂಡ್ ಸರ್ಕಲ್ ಬಳಿ ರಸ್ತೆ ಮೇಲೆ ಉರುಳಿದ ಮರ: ಸೌತ್ ಎಂಡ್ ಸರ್ಕಲ್ ಬಳಿಯ ಸುರಾನ ಕಾಲೇಜು ಸಮೀಪ ರಸ್ತೆ ಬದಿ ಯಲ್ಲಿ ಬೆಳೆದಿದ್ದ ಪೆಲೋಪಾರಂ ಮರದ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಕೂಡಲೇ ಸ್ಥಳಕ್ಕೆ ದೌಡಾ ಯಿಸಿದ ಸಂಚಾರಿ ಪೊಲೀಸರು ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಹೊಸಹಳ್ಳಿಯ 2ನೇ ಅಡ್ಡರಸ್ತೆ, ಅಂಬಾ ಭವಾನಿ ದೇವಸ್ಥಾನ ಹತ್ತಿರದ ಟೆಲಿಕಾಂ ಲೇಔಟ್‌ನಲ್ಲಿ ರಸ್ತೆ ಬದಿಯಲ್ಲಿದ್ದ ಮರದ ರೆಂಬೆಯು ಗಾಳಿಯ ರಭಸಕ್ಕೆ ರಸ್ತೆಯಲ್ಲಿದ್ದ ವಾಹ ನದ ಮೇಲೆ ಮುರಿದು ಬಿದ್ದಿದ್ದು, ರೆಂಬೆಯು ಬಿದ್ದ ರಭಸಕ್ಕೆ ವಾಹನ ಸಂಪೂರ್ಣ ಹಾನಿಗೊಳಗಾಗಿದೆ. ವಿವಿಧ ಕಡೆಗಳಲ್ಲಿ ರಸ್ತೆಗಳ ಮೇಲೆ ಮರಗಳು ಉರುಳಿಬಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ಕೆಲ ಕಾಲ ಅಡತೆಡೆ ಉಂಟಾಗಿತ್ತು ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಲು ಹೇಳಿದ್ದಾರೆ.
ಕ್ವೀನ್ಸ್ ರಸ್ತೆ 2 ಕಾರ್‌ಗಳು ಸಂಪೂರ್ಣ ಜಖಂ: ಮಳೆ, ಗಾಳಿ ಯಾವುದು ಇಲ್ಲದಿದ್ದರೂ ಶನಿವಾರ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಬಳಿ ಬೃಹತ್ ಮರವೊಂದು ಧರೆಗುರುಳಿದ್ದು, ಘಟನೆಯಲ್ಲಿ 2 ಕಾರುಗಳು ಸಂಪೂರ್ಣ ಜಖಂಗೊಂಡಿವೆ.ಅದೃಷ್ಟ ವಶಾತ್ ಮರ ಬಿದ್ದ ಸಮಯದಲ್ಲಿ ಸಾರ್ವಜನಿ ಕರು ಯಾರು ಅಲ್ಲಿ ಇರಲಿಲ್ಲ. ಯಾವುದೇ ಪ್ರಾಣ ಹಾನಿ ಅಥವಾ ಗಾಯಗಳಾಗಿಲ್ಲ.
ಈ ಘಟನೆಯಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಮರಗಳು ಉರುಳಿ ಬೀಳುವ ಹಂತದಲ್ಲಿದ್ದರೂ ಕೂಡ ಮುನ್ನೆಚ್ಚರಿಕೆ ತೆಗೆದು ಕೊಳ್ಳದೇ, ಅವುಗಳನ್ನು ತೆರವು ಮಾಡದ ಈ ಅನಾಹುತಕ್ಕೆ ಬಿಬಿಎಂಪಿ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯರು ರಸ್ತೆ ಬದಿಯಿ ರುವ 100-150 ವರ್ಷಗಳಷ್ಟು ಹಳೆಯದಾದ ಮರಗಳ ತೆರವಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಪಾಲಿಕೆಯ ಶಿಥಿಲಗೊಂಡ ಮರಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು. ಇಲ್ಲದೆ ಹೋದರೆ ಅಪಾಯ ತಪ್ಪಿದ್ದಲ್ಲ. ಮುಂದಾ ಗುವ ಅನಾಹುತಗಳಿಗೆ ಪಾಲಿಕೆ ಅಧಿಕಾರಿಗಳೇ ಹೊಣೆಗಾರ ಆಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ದಕ್ಷಿಣ ವಲಯದಲ್ಲಿ 34 ಮರಗಳು ಧರೆಗೆ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಶನಿವಾರ ಒಟ್ಟಾರೆ 56 ಮರಗಳು ಧರೆಗೆ ಉರುಳಿವೆ. ಪಾಲಿಕೆಯ ದಕ್ಷಿಣ ವಲಯದಲ್ಲಿ 34 ಮರಗಳು ಬಿದ್ದಿವೆ. ಪೂರ್ವ ವಲಯದಲ್ಲಿ 13 ಮರಗಳು ನೆಲಕ್ಕುರುಳಿವೆ. ಹಾಗೆಯೇ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 2, ಪಶ್ಚಿಮ ವಲಯ ವ್ಯಾಪ್ತಿಯಲ್ಲಿ 4 ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ 2 ಮರಗಳು ರಸ್ತೆ ಮೇಲೆ ಬಿದ್ದಿವೆ. ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಪಾಲಿಕೆಯ ಅರಣ್ಯ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.