![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Oct 24, 2020, 11:45 AM IST
ಬೆಂಗಳೂರು:ವರ್ಷದ ಗರಿಷ್ಠ ಮಳೆಗೆ ಗುರುವಾರ ನಗರ ಅಕ್ಷರಶಃ ತತ್ತರಿಸಿತು. ಆರ್.ಆರ್.ನಗರದಲ್ಲಿ ಸತತ2ದಿನವೂ ಮಳೆ ಪರಿಣಾಮ, ಫ್ಲ್ಯಾಶ್‌ಫ್ಲಡ್ ಉಂಟಾಯಿತು. ರಸ್ತೆಯಲ್ಲಿದ್ದ ವಾಹನಗಳು, ತಗ್ಗು ಪ್ರದೇಶಗಳಲ್ಲಿದ್ದ ಮನೆಗಳು, ನಿಲ್ದಾಣ ಗಳಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು, ಹಬ್ಬದ ಸಂತೆಗೆ ಬಂದ ಜನ, ವ್ಯಾಪಾರಿಗಳು, ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹೀಗೆ ಎಲ್ಲರಿಗೂ ಈ “ದಿಢೀರ್ ನೆರೆ’ ಬಿಸಿ ತಟ್ಟಿತು. ಹೊಸಕೆರೆ ಹಳ್ಳಿಯಲ್ಲಿ ರಾಜಕಾಲುವೆ ಉಕ್ಕಿಹರಿದ ಪರಿಣಾಮ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.
ಎರಡನೇ ದಿನ ಜನ ಜಾಗರಣೆ ಕಾರಣವಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 20 ಮಂದಿಯತಂಡ ಹೊಸಕೆರೆಹಳ್ಳಿಗೆ ತೆರಳಿ ರಕ್ಷಣಾ ಕಾರ್ಯ ಕೈಗೊಂಡಿತು. ಇದಕ್ಕೂ ಮುನ್ನ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮೂವರನ್ನು ರಕ್ಷಿಸಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಈ ಮಧ್ಯೆ ಸ್ಥಳಕ್ಕೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾತ್ರಿ 8ರ ಸುಮಾರಿಗೆ ಆರ್.ಆರ್. ನಗರದಲ್ಲಿ ಗರಿಷ್ಠ 103 ಮಿ.ಮೀ. ಮಳೆ ದಾಖಲಾಗಿದೆ. ಸಾರಕ್ಕಿ, ಉತ್ತನಹಳ್ಳಿ, ಪಟ್ಟಾಭಿರಾಮನಗರ, ಗೊಟ್ಟಿಗೆರೆ, ಹಂಪಿನಗರ, ಅಂಜನಾಪುರ ಮತ್ತಿತರಕಡೆ ಕನಿಷ್ಠ 25ರಿಂದ ಗರಿಷ್ಠ66 ಮಿ.ಮೀ. ಮಳೆ ಬಿದ್ದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಅಲ್ಪಾವಧಿಯಲ್ಲಿ ಅತಿಹೆಚ್ಚು ಮಳೆ ಅವಾಂತರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಬಕೆಟ್‌ಗಳಲ್ಲಿ ನೀರು ಹೊರಹಾಕುತ್ತಿದ್ದ ಮಕ್ಕಳು, ವೃದ್ಧರು, ಮಹಿಳೆಯರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಕೆ.ಜಿ. ರಸ್ತೆ, ಜೆ.ಸಿ. ರಸ್ತೆ, ಸಜ್ಜನ್‌ರಾವ್ ವೃತ್ತ, ಮೇಖ್ರೀ ವೃತ್ತ, ಆರ್.ವಿ. ರಸ್ತೆ, ಹೆಬ್ಟಾಳ, ಜಯನಗರ, ಶಾಂತಿನಗರಗಳಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಶಾಂತಿನಗರ, ಕೆ.ಆರ್. ಮಾರುಕಟ್ಟೆ ಮತ್ತಿತರ ಪ್ರಮುಖ ನಿಲ್ದಾಣಗಳಿಗೂ ಪ್ರಯಾಣಿಕರಿಗೂ ಈ ಗೋಳು ತಪ್ಪಲಿಲ್ಲ.
ರಾಜಧಾನಿಯ ದಕ್ಷಿಣದಲ್ಲೇ ಅಬ್ಬರ ಹೆಚ್ಚು :
ದಕ್ಷಿಣ ಭಾಗದಲ್ಲಿ ವರುಣನ ಆರ್ಭಟ ಜೋರಾಗಿತ್ತು. ರಾಜಕಾಲುವೆ ನೀರು ರಸ್ತೆ ಆವರಿಸಿದ್ದರಿಂದ ಹೊಸಕೆರೆಹಳ್ಳಿಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿತು. ಮೈಲಸಂದ್ರ ಕೆರೆ ಉಕ್ಕಿಹರಿದಿದ್ದರಿಂದ ಬೆಂಗಳೂರು-ಮೈಸೂರು ಮುಖ್ಯರಸೆ ¤ ಸಂಚಾರ ಹಲವು ಗಂಟೆ ಕಾಲ ಸ್ಥಗಿತಗೊಂಡಿತ್ತು. ಮೈಲಸಂದ್ರದಿಂದ ಕುಂಬಳಗೋಡುವರೆಗೂ ರಸ್ತೆಗಳು ಜಲಾವೃತಗೊಂಡಿದ್ದವು. ಬಿಎಂಟಿಸಿ ಹಾಗೂ ಕಾಲೇಜು ಸಿಬ್ಬಂದಿಯನ್ನು ಕರೆದೊಯ್ಯುವ ಬಸ್‌ಗಳು, ಕಾರುಗಳು ಸೇರಿದಂತೆ30ಕ್ಕೂ ಅಧಿಕ ವಾಹನಗಳು ಜಲಾವೃತಗೊಂಡು, ಮಾರ್ಗಮಧ್ಯೆಯೇ ಕೆಟ್ಟುನಿಂತವು. ಸ್ಥಳಕ್ಕೆ ಧಾವಿಸಿದ ಪೌರ ರಕ್ಷಣಾ ದಳ ಹಾಗೂ ಅಗ್ನಿಶಾಮಕ ಸಿಬ್ಬಂದಿ, ಬಸ್ ಮತ್ತಿತರ ವಾಹನಗಳ ಚಾಲಕರು, ಸವಾರರನ್ನು ರಕ್ಷಿಸಿದರು. ರಸ್ತೆಗಳಲ್ಲಿ
ಮೂರು ಅಡಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರ ಕೆಲವೆಡೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಬಸ್ ಸೇರಿದಂತೆ ವಾಹನಗಳಲ್ಲಿ ನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡಿದರು. ಬನಶಂಕರಿ, ಬಿಇಎಂಎಲ್ ಲೇಔಟ್, ಆರ್.ಆರ್. ನಗರದ ದತ್ತಾತ್ರೇಯ ಲೇಔಟ್, ಮೀನಾಕ್ಷಿ ಕಲ್ಯಾಣ ಮಂಟಪ, ಇಟ್ಟಮಡುಗು ಇತರೆಡೆ ನೀರು ನುಗ್ಗಿತು.
ಎಲ್ಲೆಲ್ಲಿ ಅವಾಂತರ? : ಕೋರಮಂಗಲ 4ನೇ ಬ್ಲಾಕ್, ಸಿಟಿ ಬೆಡ್ ಬಾಸ್ಕ್ರ್ ರಾವ್ ಪಾರ್ಕ್ ಹಾಗೂ ಶ್ರೀಕಂಠೇಶ್ವರ ಪಾರ್ಕ್ ಸುತ್ತಮುತ್ತಲ ರಸ್ತೆಗಳು ಹಾಗೂ ಮನೆಗಳು ಜಲಾವೃತವಾಗಿ ಸವಾರರು ಹಾಗೂ ನಿವಾಸಿಗಳು ಪರಿದಾಡಿದರು. ಬನಶಂಕರಿ 2ನೇ ಹಂತ, ಎಲ್‌ಐಸಿ ಕಾಲೋನಿ 1ನೇ ಕ್ರಾಸ್, ಐಟಿಐ ಲೇಔಟ್, ಸಿಂಡಿಕೇಟ್ ಲೇಔಟ್, ವಿದ್ಯಾಪೀಠ, ಉತ್ತರಹಳ್ಳಿ, ವಿ.ವಿ.ಪುರಂ, ಕೋಣಕುಂಟೆ, ವಿದ್ಯಾಪೀಠ, ಪುಟ್ಟೇನಹಳ್ಳಿ, ಯಲಚೇತನಹಳ್ಳಿ, ಚಿಕ್ಕಕಲ್ಲಸಂದ್ರ, ಜೆ.ಪಿ.ನಗರ, ಕುಮಾರಸ್ವಾಮಿ ಲೇಔಟ್, ಬೆಳ್ಳಂದೂರು, ಮಹದೇವಪುರ, ವಸಂತಪುರ, ಉತ್ತರಹಳ್ಳಿ, ಬೇಗೂರು ನಂದಿಯು ಲೇಔಟ್ ಸೇರಿದಂತೆ ನಗರದ ಹಲವೆಡೆ ರಸ್ತೆಗಳು, ಮನೆಗಳು ಹಾಗೂ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ಉತ್ಸಾಹಕ್ಕೆ ತಣ್ಣೀರು : “ಕೋವಿಡ್-19′ ಹಾವಳಿಯಿಂದಾಗಿ ಬಹುದಿನಗಳ ನಂತರ ಹಬ್ಬಕ್ಕೆಊರಿಗೆ ಹೊರಟವರ ಉತ್ಸಾಹಕ್ಕೆ ಮಳೆ ಕೆಲಹೊತ್ತು ತಡೆಯೊಡ್ಡಿತು. ಕೆಲಸ ಮುಗಿಸಿ ಹೊರಟವರಿಗೆ ರಸ್ತೆಗಳು ಜಲಾವೃತಗೊಂಡಿದ್ದರಿಂದ ಪರದಾಡುವಂತಾಯಿತು. ತದನಂತರ ಮನೆಗಳಿಗೆ ತೆರಳಿ, ಅಲ್ಲಿಂದ ಮೆಜೆಸ್ಟಿಕ್ ಅಥವಾ ಹತ್ತಿರದ ಬಸ್, ರೈಲು ನಿಲ್ದಾಣ ತಲುಪಲು ಹರಸಾಹಸ ಪಡುವಂತಾಯಿತು.
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.