ಕರಾವಳಿ, ಮಲೆನಾಡಲ್ಲಿ ಮಳೆ ಅಬ್ಬರ
Team Udayavani, Jun 30, 2018, 6:10 AM IST
ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಶುಕ್ರವಾರವೂ ಮಳೆಯಾಗಿದ್ದು, ಉಡುಪಿ ಸಮೀಪದ ಕಾಕೊ¤àಟದಲ್ಲಿ ದೈವಸ್ಥಾನದ ಆವರಣ ಗೋಡೆ ಕುಸಿದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ.
ಈ ಮಧ್ಯೆ, ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಭೂಕುಸಿತ ಉಂಟಾದ ಕಾರಣ ಶುಕ್ರವಾರವೂ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಇದೇ ವೇಳೆ, ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್‌ನಲ್ಲಿ ರಾಜ್ಯದಲ್ಲಿಯೇ ಅಧಿಕ, 13 ಸೆಂ.ಮೀ.ಮಳೆ ಸುರಿಯಿತು.
ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯ ವೇಳೆ ಮಳೆ ಸುರಿದು, ವಾಹನ ಸವಾರರು ಪರದಾಡುವಂತಾಯಿತು. ಈ ಮಧ್ಯೆ, ಕರಾವಳಿಯ ಹಲವೆಡೆ ಶುಕ್ರವಾರವೂ ಮಳೆಯಾಗಿದ್ದು, ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕಾಕೊ¤àಟದಲ್ಲಿ ದೈವಸ್ಥಾನದ ಆವರಣ ಗೋಡೆ ಕುಸಿದು ಬಿದ್ದು, ಸೇನಾಪುರಮನೆಯ ಧನ್ಯಾ ಕೆ.(22) ಎಂಬುವರು
ಮೃತಪಟ್ಟಿದ್ದಾರೆ. ಮನೆ ಸಮೀಪದಲ್ಲಿರುವ ಜಟ್ಟಿಗೇಶ್ವರ ದೈವಸ್ಥಾನದಿಂದ ಕಾಲುದಾರಿಯಲ್ಲಿ ಮರಳುತ್ತಿದ್ದಾಗ ಆವರಣದ ಗೋಡೆ ಕುಸಿದು ಬಿತ್ತು. ಕೆಂಪು ಕಲ್ಲುಗಳ ಅಡಿ ಸಿಲುಕಿದ್ದ ಧನ್ಯಾ ಮೇಲೆ ಮಳೆ ನೀರು ಹರಿದ ಕಾರಣ ಉಸಿರುಕಟ್ಟಿ ಮೃತಪಟ್ಟಿದ್ದಾರೆ.
ದಾರಿಯಲ್ಲಿ ಬರುತ್ತಿದ್ದ ಕಿರಿಮಂಜೇಶ್ವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬ ಇದನ್ನು ಗಮನಿಸಿ ಊರವರಿಗೆ ವಿಷಯ ತಿಳಿಸಿದ. ಸ್ಥಳೀಯರು ಬಂದು ಕಲ್ಲುಗಳನ್ನು ಸರಿಸಿ ನೋಡುವಷ್ಟರಲ್ಲಿ ಯುವತಿ ಮೃತಪಟ್ಟಿದ್ದಳು. ಮಂಗಳಗಂಗೋತ್ರಿಯಲ್ಲಿ ಅವರು ಸಂಖ್ಯಾಶಾಸ್ತ್ರದಲ್ಲಿ ಪ್ರಥಮ ವರ್ಷದ ಎಂಎಸ್‌ಸಿ ಓದುತ್ತಿದ್ದರು. ಭಾರೀ ಮಳೆ ಯಿಂದಾಗಿ ಬೈಂದೂರು ವಲಯದ ಹಳ್ಳಿಹೊಳೆ ಹಿ.ಪ್ರಾ. ಶಾಲೆ ಹಾಗೂ ಉಪ್ಪುಂದದ ಸರಕಾರಿ ಮಾದರಿ ಹಿ.ಪ್ರಾ.ಶಾಲೆಗಳಿಗೆ ಶುಕ್ರವಾರ ರಜೆ ನೀಡಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆಯೂ ಸಾಧಾರಣ ಮಳೆಯಾಗಿದೆ. ಈ ಮಧ್ಯೆ, ಶೃಂಗೇರಿ ತಾಲೂಕು ನೆಮ್ಮಾರ್‌ನಲ್ಲಿ ಕಾಣೆಯಾಗಿದ್ದ ವ್ಯಕ್ತಿಯನ್ನು ಹುಡುಕಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದವರು ಆಗಮಿಸಿದ್ದು,
ಶುಕ್ರವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರು.ಆದರೆ, ಮೃತದೇಹ ಪತ್ತೆಯಾಗಲಿಲ್ಲ. ಗುರುವಾರ ಸಂಜೆ ಜಮೀನಿಗೆ ಹೋಗಿದ್ದ ನೆಮ್ಮಾರ್ ಗ್ರಾಮದ ಉಮೇಶ್ ನಾಪತ್ತೆಯಾಗಿದ್ದು, ತುಂಗಾ ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂಬ ಶಂಕೆ ಮೂಡಿದೆ.
ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಉಂಟಾದ ಭೂಕುಸಿತದ ಪರಿಣಾಮ ಶುಕ್ರವಾರವೂ ಘನ ವಾಹನ ಹಾಗೂ ಬಸ್ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು. ತೀರ್ಥಹಳ್ಳಿ ಮಾರ್ಗವಾಗಿ ಉಡುಪಿ, ಮಂಗಳೂರಿಗೆ ತೆರಳುವ ಮಿನಿಬಸ್ ಸಂಚಾರ ನಿಷೇಧಿಸಲಾಗಿದೆ. ದುರಸ್ತಿ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಶನಿವಾರದಿಂದ ಬಸ್ ಸಂಚಾರಕ್ಕೆ
ಅವಕಾಶ ನೀಡಲಾಗುತ್ತದೆ. ಆದರೆ, ಇತರ ಘನ ವಾಹನಗಳಿಗೆ ಸಂಚಾರ ನಿರ್ಬಂಧವಿರಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಲವೆಡೆಯೂ ಮಳೆಯಾಗುತ್ತಿದ್ದು, ಹೊನ್ನಾವರ ತಾಲೂಕಿನ ಗುಂಡಬಾಳ ಹೊಳೆ ತುಂಬಿ ಹರಿಯುತ್ತಿದೆ. ಕಾರವಾರ ದಿಂದ ಭಟ್ಕಳ ಕಡಲತೀರದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿದ್ದು, ಸಾಂಪ್ರದಾಯಿಕ ಮೀನು ಗಾರರು ಕಡಲದಂಡೆ ಮೀನುಗಾರಿಕೆಗೆ ಇಳಿದಿಲ್ಲ. ಹಾಸನ ಜಿಲ್ಲೆಯ ಹಲವೆಡೆಯೂ ಮಳೆಯಾಗುತ್ತಿದ್ದು,
ಹೇಮಾವತಿ ಜಲಾಯಶಕ್ಕೆ ಒಳ ಹರಿವು ಮತ್ತೆ ಹೆಚ್ಚಾಗಿದೆ. ಶುಕ್ರವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 2907 ಅಡಿಗಳಿಗೆ ಏರಿದ್ದು, ಜಲಾಶಯ ಭರ್ತಿಯಾಗಲು ಇನ್ನು 16 ಅಡಿಗಳಷ್ಟೇ ಬಾಕಿ ಇದೆ. ಜಲಾಶಯಕ್ಕೆ ಶುಕ್ರವಾರ ಒಂದೇ ದಿನ 2 ಅಡಿಗಳಷ್ಟು ನೀರು ಹರಿದು ಬಂದಿದೆ. ಈ ಮಧ್ಯೆ, ಇನ್ನೆರಡು ದಿನ ಕರಾವಳಿಯ ಬಹುತೇಕ ಎಲ್ಲೆಡೆ, ಒಳನಾಡಿನ ಕೆಲವೆಡೆ ಉತ್ತಮ ಮಳೆಯಾಗಲಿದೆ.
ಕರಾವಳಿಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ: ರಮೇಶ್ ಜಾರಕಿಹೊಳಿ
Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ
Mangaluru: ಸ್ವಾಭಿಮಾನ ಸಮಾವೇಶಕ್ಕೆ ನಮ್ಮಲ್ಲಿ ಅಪಸ್ವರವಿಲ್ಲ: ಸಚಿವ ಪರಮೇಶ್ವರ್
ಗ್ಯಾರಂಟಿಯಲ್ಲಿ ಸಣ್ಣ ಬದಲಾವಣೆಯ ಚರ್ಚೆ ನಡೆಯುತ್ತಿದೆ, ಆದರೆ… H.M. ರೇವಣ್ಣ ಹೇಳಿದ್ದೇನು?
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.