ಉಸಿರು ಹಸಿರಾಗಲು ಇಲ್ಲಿದೆ ಪರಿಹಾರ
Team Udayavani, Nov 11, 2018, 12:18 PM IST
ಬೆಂಗಳೂರು: ಹೊಸ ವಾಹನಗಳ ನೋಂದಣಿ ನಿಯಂತ್ರಣ, ಪರಿಸರ ಸಂರಕ್ಷಣೆ, ಹಸಿರೀಕರಣ ಹೆಚ್ಚಳ, ಸಮೂಹ ಸಾರಿಗೆ ಅಭಿವೃದ್ಧಿ, ಎರಡನೇ ದರ್ಜೆಯ ನಗರಗಳ ಅಭಿವೃದ್ಧಿಯಂತಹ ಕ್ರಮಗಳಿಗೆ ಸರ್ಕಾರ ಮುಂದಾಗದಿದ್ದರೆ, ಬೆಂಗಳೂರು ಮಾಲಿನ್ಯ ಸ್ಥಿತಿ ಚಿಂತಾಜನಕವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸದ್ಯ 1.20 ಕೋಟಿ ಜನರು ನೆಲೆಸಿದ್ದು, ನಿತ್ಯ 30 ಲಕ್ಷ ಜನರು ನಗರಕ್ಕೆ ಬಂದು ಹೋಗುತ್ತಿದ್ದಾರೆ. ಇದನ್ನು ಮೀರಿ ನಿತ್ಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಸಾವಿರಾರು ಜನರು ನಗರಕ್ಕೆ ಆಗಮಿಸುತ್ತಿದ್ದಾರೆ. ಜನದಟ್ಟಣೆ ಹೆಚ್ಚಾದಂತೆ ಕಟ್ಟಡಗಳು, ವಾಹನಗಳು, ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ದೆಹಲಿಯಂತಹ ಪರಿಸ್ಥಿತಿ ಬೆಂಗಳೂರಿಗೆ ಬರುವುದರಲ್ಲಿ ಅನುಮಾನವಿಲ್ಲ.
ನಗರದ ಮೇಲಿನ ಒತ್ತಡ ಕಡಿಮೆ ಮಾಡಲು ಸರ್ಕಾರ ಶೀಘ್ರ ಕ್ರಮಗಳನ್ನು ಕೈಗೊಳ್ಳಲು ಕಾರ್ಯಪ್ರವೃತ್ತವಾಗಬೇಕಿದೆ. ಅದರಂತೆ ಎರಡನೇ ದರ್ಜೆಯ ನಗರಗಳಿಗೆ ಬೆಂಗಳೂರಿನ ಹಲವು ಕೈಗಾರಿಕೆ ಹಾಗೂ ಕಂಪನಿಗಳನ್ನು ವರ್ಗಾವಣೆ ಮಾಡಬೇಕಿದೆ. ಇದರಿಂದಾಗಿ ಬೇರೆ ಊರುಗಳಿಂದ ಬೆಂಗಳೂರಿಗೆ ಬರುವ ಜನಸಂಖ್ಯೆ ಕಡಿಮೆಯಾಗಲಿದ್ದು, ಜನದಟ್ಟಣೆಯೂ ನಿಯಂತ್ರಣಕ್ಕೆ ಬರುತ್ತದೆ ಎನ್ನುತ್ತಾರೆ ಪರಿಸರವಾದಿಗಳು.
ಇದರೊಂದಿಗೆ ನಗರದಲ್ಲಿ ಸಮೂಹ ಸಾರಿಗೆಗೆ ಹೆಚ್ಚು ಆದ್ಯತೆ ನೀಡಿ, ಖಾಸಗಿ ವಾಹನಗಳ ಬಳಕೆಗಿಂತಲೂ ಕಡಿಮೆಯ ಬೆಲೆಗೆ ಸಮೂಹ ಸಾರಿಗೆ ಸೇವೆಗಳು ದೊರೆಯಬೇಕಿದೆ. ಇದರೊಂದಿಗೆ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಹಂತದ ಸಂಪರ್ಕ ವ್ಯವಸ್ಥೆ ಮಾಡಿದಾಗ ಸ್ವಂತ ವಾಹನಗಳ ಬಳಕೆ ಕಡಿಮೆಯಾಗುತ್ತದೆ. ಹೀಗಾಗಿ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಶೀಘ್ರ ಕ್ರಮಕ್ಕೆ ಮುಂದಾಗಬೇಕು ಎಂದು ಪರಿಸರವಾದಿ ವಿಜಯ್ ನಿಶಾಂತ್ ಅವರ ಒತ್ತಾಯಿಸುತ್ತಾರೆ.
ನಗರದಲ್ಲೇ ಉಳಿವ ಮಾಲಿನ್ಯ: ಬೆಂಗಳೂರಿನ ಭೌಗೋಳಿಕ ಪ್ರದೇಶ ದೆಹಲಿಗಿಂತಲೂ ವಿಭಿನ್ನವಾಗಿದೆ. ದೆಹಲಿಯಲ್ಲಿ ಮಾಲಿನ್ಯ ಬೇರೆಡೆಗೆ ಚಲಿಸುತ್ತದೆ. ಆದರೆ, ಬೆಂಗಳೂರು ತಗ್ಗು-ದಿಣ್ಣೆಯಂತಹ ಪ್ರದೇಶವಿದೆ. ಹೀಗಾಗಿ ಮಾಲಿನ್ಯ ನಗರದಲ್ಲಿಯೇ ಉಳಿಯುವಂತಾಗುತ್ತದೆ. ಇದರೊಂದಿಗೆ ನಗರದಲ್ಲಿ ವಾಹನಗಳ ಸಂಖ್ಯೆ ಮಿತಿ ಮೀರಿದರಿಂದ ಅತಿಹೆಚ್ಚು ಮಾಲಿನ್ಯ ಉಂಟಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ ಹಿರಿಯ ಪರಿಸರವಾದಿ ಸುರೇಶ್ ಹೆಬ್ಳೀಕರ್.
ನಗರದಲ್ಲಿನ ಹಲವಾರು ರೀತಿಯ ಮಾಲಿನ್ಯವನ್ನು ಕೆಲವೊಂದು ಮರಗಳು ತನ್ನ ಎಲೆಗಳಲ್ಲಿ ಹಿಡಿದಿಟ್ಟುಕೊಳ್ಳುತ್ತವೆ. ಅಂತಹ 150ಕ್ಕೂ ಹೆಚ್ಚು ಪ್ರಬೇಧದ ಮರಗಳ ಪಟ್ಟಿ ಹಾಗೂ ನಗರದಲ್ಲಿ ಮಾಲಿನ್ಯ ನಿಯಂತ್ರಣ, ವಾತಾವರಣಕ್ಕೆ ಅನುಗುಣವಾಗಿ ನೆಡಬೇಕಾದ ಮರಗಳ ಕುರಿತ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿ ವರ್ಷಗಳು ಕಳೆದಿವೆ. ಒಂದೊಮ್ಮೆ ವರದಿ ಅನುಷ್ಠಾನಗೊಳಿಸಿದರೆ, ಸ್ವಲ್ಪಮಟ್ಟಿಗೆ ಮಾಲಿನ್ಯ ನಿಯಂತ್ರಣವಾಗಲಿದೆ.
-ಯಲ್ಲಪ್ಪ ರೆಡ್ಡಿ, ಪರಿಸರವಾದಿ
ನಿತ್ಯ ನಗರದಲ್ಲಿ ಸಾವಿರಾರು ವಾಹನಗಳು ನೋಂದಾಣಿಯಾಗುತ್ತಿವೆ. ಜತೆಗೆ ನಗರದಲ್ಲಿನ 15 ವರ್ಷಕ್ಕೂ ಹಳೆಯ ವಾಹನಗಳಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಕೂಡಲೇ ಸರ್ಕಾರ ಇಂತಹ ವಾಹನಗಳನ್ನು ನಿಷೇಧಿಸಬೇಕು. ಜತೆಗೆ ಸಮೂಹ ಸಾರಿಗೆ ಸುಲಭವಾಗಿ ಸಾರ್ವಜನಿಕರಿಗೆ ದೊರೆಯುವಂತಾಗಬೇಕು.
-ಶ್ರೀಹರಿ, ಸಂಚಾರ ತಜ್ಞ
ನಗರದ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು
– 15 ವರ್ಷ ಮೀರಿದ ವಾಹನಗಳನ್ನು ನಿಷೇಧಿಸಬೇಕು.
– ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳನ್ನಾಗಿ ಪರಿವರ್ತಿಸಬೇಕು.
– ಮೆಟ್ರೊ ಕಾಮಗಾರಿಗಾಗಿ ಮರಗಳನ್ನು ಕಡಿಯುವುದಕ್ಕಿಂತಲೂ ಮರುನಾಟಿಗೆ ಹೆಚ್ಚು ಆದ್ಯತೆ ನೀಡಬೇಕು.
– ಮೆಟ್ರೊ ಬಳಕೆದಾರರ ಸಂಖ್ಯೆ ಹೆಚ್ಚಿಸಲು ಮೆಟ್ರೊ ಪ್ರಯಾಣ ದರ ಕಡಿಮೆ ಮಾಡಬೇಕು.
– ಮೆಟ್ರೊ ನಿಲ್ದಾಣಗಳಿಂದ ಲಾಸ್ಟ್ ಮೈಲ್ ಕನೆಕ್ಟಿವಿಟಿ ವ್ಯವಸ್ಥೆ ಮಾಡಬೇಕು.
– ಹೊಸ ವಾಹನಗಳ ನೋಂದಣಿ ನಿಯಂತ್ರಿಸಬೇಕು.
– ಅರಣ್ಯೀಕರಣಕ್ಕೆ ಒತ್ತು ನೀಡಬೇಕು.
– ಬಿಎಂಟಿಸಿ ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
* ವೆಂ. ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.