ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ: ಕ್ಲೇಮ್ ಕಮಿಷನರ್ ಕೆಲಸ ಆರಂಭಿಸಲಿ
Team Udayavani, Oct 21, 2020, 12:24 PM IST
ಬೆಂಗಳೂರು: “ಜನರ ನೆನಪಿನ ಶಕ್ತಿ ಬಹಳ ಸೀಮಿತವಾದದ್ದು, ಆದ್ದರಿಂದ ನಡೆದಿದ್ದರ ಬಗ್ಗೆ ಜನ ಮರೆತು ಹೋಗುವ ಮೊದಲು ಕ್ಲೇಮ್ ಕಮಿಷನರ್ ಕಾರ್ಯಾರಂಭ ಮಾಡದಿದ್ದರೆ, ಅವರನ್ನು ನೇಮಕ ಮಾಡಿದ ಉದ್ದೇಶ ಸಾರ್ಥಕವಾಗುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಗಲಭೆಯಲ್ಲಿ ಉಂಟಾದ ಆಸ್ತಿ-ಪಾಸ್ತಿ ನಷ್ಟದಅಂದಾಜುಮಾಡಿಹೊಣೆಗಾರಿಕೆ ಗುರುತಿಸಲು ಕ್ಲೇಮ್ ಕಮಿಷನರ್ ನೇಮಕ ಮಾಡಬೇಕು ಎಂದು ಸರ್ಕಾಸಲ್ಲಿಸಿದ ಹಾಗೂ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ಈ ರೀತ ಮೌಖೀಕ ಅಭಿಪ್ರಾಯ ವ್ಯಕ್ತಪಡಿಸಿತು.
ಈ ವೇಳೆ ಕ್ಲೇಮ್ ಕಮಿಷನರ್ ಅವರಿಗೆ ಕಚೇರಿ, ಸಿಬ್ಬಂದಿ, ಮೂಲಸೌಕರ್ಯ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದುಸರ್ಕಾರದ ಪರ ವಕೀಲರು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಚೇರಿಗಾಗಿ ಎರಡುಕಡೆ ಜಾಗ ಗುರುತಿಸಲಾಗಿದ್ದು, ಅದರಲ್ಲಿ ಕ್ಲೇಮ್ ಕಮಿಷನರ್‌ಅವರು ಯಾವುದನ್ನು ಬಯಸುತ್ತಾರೋ ಅಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತಿದೆ ಎಂದರು.
ಅದಕ್ಕೆ, ಕ್ಲೇಮ್ ಕಮಿಷರ್ ನೇಮಕ ಮಾಡಿ ಬಹಳ ದಿನ ಆಗಿದೆ. ಈವರೆಗೆ ಪ್ರಕ್ರಿಯೆನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ. ಈ ರೀತಿಯ ವಿಳಂಬ ಕ್ಲೇಮ್ ಕಮಿಷರ್ ನೇಮಕ ಉದ್ದೇಶವನ್ನೇ ವಿಫಲಗೊಳಿಸಲಿದೆ ಎಂದು ನ್ಯಾಯಪೀಠ ಸೂಕ್ಷ್ಮವಾಗಿ ಹೇಳಿತು.
ಇದೇವೇಳೆಅರ್ಜಿದಾರವಕೀಲಎನ್.ಪಿ.ಅಮೃತೇಶ್ ನ್ಯಾಯಪೀಠಕ್ಕೆ ಮನವಿ ಮಾಡಿ, ಕ್ಲೇಮ್ ಕಮಿಷನರ್ ಕಚೇರಿಯನ್ನು ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ನೀಡಿದರೆ ಸಾರ್ವಜನಿಕರು ದೂರುನೀಡಲು,ವ್ಯವಹರಿಸಲುಕಷ್ಟವಾಗಬಹುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೊದಲು ಕ್ಲೇಮ್ ಕಮಿಷನರ್‌ಗೆ ನೀಡಿರುವ ಕಚೇರಿ, ಸೌಲಭ್ಯ ಗಳ ಕುರಿತು ಸರ್ಕಾರ ವರದಿ ನೀಡಲಿ. ನಂತರ ಈ ಕುರಿತು ಪರಿಶೀಲಿಸೋಣ ಎಂದು ಹೇಳಿತು. ಅಲ್ಲದೇ,ಕ್ಲೇಮ್‌ಕಮಿಷನರ್‌ಗೆ ಅಧಿಕಾರ ನೀಡಿ ಹೊರಡಿಸಿರುವ ಅಧಿಸೂಚನೆ ದೋಷ ಪೂರಿತವಾಗಿದೆ. ಹೀಗಾಗಿ ಸರ್ಕಾರ ಲೋಪ ಸರಿಪಡಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸ ಬೇಕು. ಕಮಿಷನರ್‌ಗೆ ಅಗತ್ಯವಿರುವ ಎಲ್ಲ ಸೌಕರ್ಯ ನೀಡಿ, ಅವರಿಗೆ ಕಾರ್ಯಾರಂಭ ಮಾಡಲು ಎಲ್ಲ ವ್ಯವಸ್ಥೆ ಮಾಡಬೇಕು. ಈ ಕುರಿತ ವರದಿಯನ್ನು ನ.12ರೊಳಗೆ ಸಲ್ಲಿಸುವಂತೆ ಸೂಚಿಸಿದ ನ್ಯಾಯ ಪೀಠ, ವಿಚಾರಣೆ ನ.13ಕ್ಕೆ ಮುಂದೂಡಿತು.
ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿ ಮುಂದಕ್ಕೆ :
ಡ್ರಗ್ಸ್ ಮಾರಾಟ ಜಾಲ ಪ್ರಕರಣ ಸಂಬಂಧ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.22ಕ್ಕೆ ಮುಂದೂಡಿದೆ. ಸಂಜನಾ ಸಲ್ಲಿಸಿರುವ ಜಾಮೀನು ಅರ್ಜಿ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆಗ, ಸಿಸಿಬಿ ಪರ ಎಸ್‌ಪಿಪಿ ಹಾಜರಾಗಿ, ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆ ಮಾಡಲು ಆಗ್ರಹಿಸಿ ಅನಾಮಿಕರು ಸ್ಫೋಟಕ ವಸ್ತುಗಳ ಸಮೇತ ಎನ್‌ಡಿಪಿಎಸ್‌ಕೋರ್ಟ್ ನ್ಯಾಯಾಧೀ ಶಕರಿಗೆ ಪತ್ರ ಬರೆದಿದ್ದಾರೆ. ಆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಸಂಜನಾ ಪರ ವಕೀಲರು, ಜಾಮೀನು ಅರ್ಜಿ ವಿಚಾರಣೆ ಸದ್ಯ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಇಲ್ಲ. ಆ ನ್ಯಾಯಾಲಯ ಆರೋಪಿಗಳಿಗೆಈಗಾಗಲೇ ಜಾಮೀನು ನಿರಾಕರಿಸಿದೆ. ಹಾಗಾಗಿ, ಜಾಮೀನುಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಇನ್ನು ಪತ್ರದ ವಿಚಾರ ಇಲ್ಲಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ ಎಂದರು. ಜಾಮೀನು ಅರ್ಜಿಗೆ ಅ.22ರಂದು ಆಕ್ಷೇಪಣೆ ಸಲ್ಲಿಸಲು ಸಿಸಿಬಿ ವಕೀಲರಿಗೆ ಸೂಚಿಸಿದ ಪೀಠ ವಿಚಾರಣೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರಲ್ಲಿ ವಂಚನೆ
Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ
Bengaluru: ಸಿನಿಮೀಯವಾಗಿ ಬೈಕ್ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.