High Court: ಅರ್ಜಿ ವಿಲೇವಾರಿ ವಿಳಂಬ: ಅಪರಾಧಿಗೆ ಜೀವದಾನ


Team Udayavani, Aug 29, 2023, 2:25 PM IST

High Court: ಅರ್ಜಿ ವಿಲೇವಾರಿ ವಿಳಂಬ: ಅಪರಾಧಿಗೆ ಜೀವದಾನ

ಬೆಂಗಳೂರು: ತನ್ನ ಇಬ್ಬರು ಪತ್ನಿಯರು ಹಾಗೂ ಒರ್ವ ಪುತ್ರಿಯನ್ನು ಕೊಲೆ ಮಾಡಿ ಕಳೆದ 30 ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿರುವ ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರದ ಅಪರಾಧಿ ಸಾಯಿಬಣ್ಣನಿಗೆ ಜೀವದಾನ ನೀಡಿರುವ ಹೈಕೋರ್ಟ್‌, ಅಪರಾಧಿಗೆ 70 ವರ್ಷ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.

ಇದರಿಂದ ಗಲ್ಲು ಶಿಕ್ಷೆ ವಿಧಿಸಲ್ಪಟ್ಟು ಕಳೆದ ಮೂರು ದಶಕಗಳಿಂದ ಸೆರೆವಾಸ ಅನುಭವಿಸುತ್ತಿರುವ ಸಾಯಿಬಣ್ಣ ಈಗ ಜೀವವಿರುವರೆಗೂ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ. ಗಲ್ಲು ಶಿಕ್ಷೆ ಪ್ರಶ್ನಿಸಿ ಸಾಯಿಬಣ್ಣ ಅಲಿಯಾಸ್‌ ನಿಂಗಪ್ಪ ನಾಟಿಕರ್‌ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಜಿ.ನರೇಂದರ್‌ ಮತ್ತು ನ್ಯಾ.ಸಿ.ಎಂ.ಪೂಣಚ್ಚ ಅವರಿದ್ದ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಇಡೀ ಪ್ರಕರಣದ ವಿವರಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿದರೆ ಅರ್ಜಿದಾರನು ಈಗಾಗಲೇ 30ವರ್ಷಕ್ಕೂ ಅಧಿಕ ಸೆರೆವಾಸ ಅನುಭವಿಸಿದ್ದಾನೆ. ನಮ್ಮ ಪ್ರಕಾರ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಸ್ವಾತಂತ್ರÂ ನೀಡುವುದರ ಜತೆಗೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದರೆ ನ್ಯಾಯ ಸಂದಾಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಮೊದಲಿಗೆ ಸರ್ಕಾರದಲ್ಲಿ 2005ರ ಮೇ 31ರಿಂದ 2007ರ ಜ.9ರವರೆಗೆ ಅಂದರೆ ಒಂದು ವರ್ಷ 9 ತಿಂಗಳು 9 ದಿನ ವಿಳಂಬವಾಗಿದೆ. 2ನೇದಾಗಿ ರಾಜ್ಯಪಾಲರ ಸಚಿವಾಲಯದಲ್ಲಿ 2007ರ ಜ.12 ರಿಂದ 2007ರ ಫೆ.2ರವರೆಗೆ ವಿಳಂಬವಾಗಿದೆ. ಮೂರನೆಯ ದಾಗಿ ಕೇಂದ್ರ ಸರ್ಕಾರಕ್ಕೆ ಸಂವಹನ ಕಳುಹಿಸಿಕೊಡುವಲ್ಲಿ 24 ದಿನ ವಿಳಂಬವಾಗಿದೆ. ನಾಲ್ಕನೆಯದಾಗಿ ರಾಷ್ಟ್ರಪತಿ ಬಳಿ ಅರ್ಜಿ 2007ರ ಫೆ.28ರಿಂದ 2013ರ ಜ.3ರವರೆಗೆ ಇತ್ಯರ್ಥವಾಗದೆ ಉಳಿದಿತ್ತು. ಒಟ್ಟಾರೆ ನಾಲ್ಕು ಹಂತಗಳಲ್ಲಿ ಕ್ಷಮಾದಾನ ಅರ್ಜಿ ಪರಿಗಣಿಸುವುದು 7 ವರ್ಷ 8 ತಿಂಗಳು ವಿಳಂಬವಾಗಿದೆ. ಆದರೆ, ಅದಕ್ಕೆ ಯಾವುದೇ ಕಾರಣ ನೀಡಿಲ್ಲ  ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಅಪರಾಧಿಯನ್ನು 2003ರ ಜ.10ರಿಂದ 2019ರ ಮೇ 20ರವರೆಗೆ ಬೆಳಗಾವಿಯ ಒಂದೇ ಕೊಣೆಯಲ್ಲಿ ಏಕಾಂಕಿ ಯಾಗಿ ಇರಿಸಲಾಗಿದೆ. ಅದರಂತೆ ಆತ 16 ವರ್ಷ ಏಕಾಂಗಿ ಸೆರೆವಾಸ ಅನುಭವಿಸಿದಂತಾಗಿದೆ. ಅದೇ ರೀತಿ ಕಾರಾಗೃಹ ಅಧಿಕಾರಿಗಳು ಸಲ್ಲಿಸಿರುವ ಆರೋಗ್ಯ ವರದಿ ಪ್ರಕಾರ ಅರ್ಜಿ ದಾರನಿಗೆ ಎದೆಯ ಎರಡೂ ಭಾಗ ನೋವಿದೆ. ಭಯದಿಂದ ತತ್ತರಿಸಿದ್ದಾನೆ ಮತ್ತು ಬೇಧಿಯಿಂದ ಬಳಲಿ ಆಯಾಸವಾಗಿದೆ ಎಂದು ತಿಳಿಸಲಾಗಿದೆ. ಏಕಾಂಗಿ ಸೆರೆವಾಸದಿಂದ ಹೀಗಾಗಿರ ಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲರು, ಅರ್ಜಿದಾರನ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವುದು 7 ವರ್ಷಕ್ಕೂ ಹೆಚ್ಚು ವಿಳಂಬ ವಾಗಿದೆ ಮತ್ತು ಕಾನೂನಿನಲ್ಲಿ ಸಮ್ಮತಿ ಇಲ್ಲದಿದ್ದರೂ ಏಕಾಂಗಿ ಸೆರೆವಾಸ ವಿಧಿಸಲಾಗಿದೆ. ಹಾಗಾಗಿ ಅವರಿಗೆ ನೀಡಿರುವ ಗಲ್ಲು ಶಿಕ್ಷೆ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಪ್ರಕರಣದಲ್ಲಿ ಹೈಕೋರ್ಟ್‌ಗೆ ನೆರವು ನೀಡಲು ಅಮಿಕಸ್‌ ಕ್ಯೂರಿ ಆಗಿ ನೇಮಕಗೊಂಡಿದ್ದ ಹಿರಿಯ ನ್ಯಾಯವಾದಿ ವಿಕ್ರಂ ಹುಯಿಲಗೋಳ. ಏಕಾಂಗಿ ಸೆರೆವಾಸ ವಿಧಿಸಿರುವುದು ನಿಜವಾಗಿದೆ. ಹಾಗಾಗಿ ಗಲ್ಲು ಶಿಕ್ಷೆಯನ್ನು  ಕಡಿತಗೊಳಿಸುವಂತೆ ಕೋರಲು ಆತನಿಗೆ ಹಕ್ಕಿದೆ. ಕ್ಷಮಾದಾನ ಅರ್ಜಿ ಪರಿಗಣಿಸು ವುದು ಮತ್ತು ವಿಲೇವಾರಿಯಲ್ಲಿ ವಿಳಂಬವಾಗಿರುವುದನ್ನು ಗಾಯವೆಂದು ಪರಿಗಣಿಸಬಹುದಾಗಿದೆ ಎಂದಿದ್ದರು. ಆದರೆ, ಶಿಕ್ಷೆ ಕಡಿತದ ಅರ್ಜಿಯನ್ನು ವಜಾಗೊಳಿಸಬೇಕೆಂದು ಪ್ರಾಸಿಕ್ಯೂಷನ್‌ ಕೋರಿತ್ತು.

ಅನೈತಿಕ ಸಂಬಂಧ: ಕೊಲೆ:

ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಸಾಯಿಬಣ್ಣ 1988ರಲ್ಲಿ ಪತ್ನಿ ಮಾಲಕವ್ವಳನ್ನು ಕೊಲೆ ಮಾಡಿ ತಾನೇ ಬಂದು ಪೊಲೀಸರಿಗೆ ಶರಣಾಗಿದ್ದನು. ಆನಂತರ ಜೈಲಿನಲ್ಲಿರುವಾಗ ಸಹಕೈದಿ ದತ್ತು ಎಂಬಾತನೊಂದಿಗೆ ಆತನ ಸ್ನೇಹ ಬೆಳೆಯಿತು. ಜಾಮೀನು ಪಡೆದು ಸಹ ಕೈದಿ ದತ್ತುವಿನ ಪುತ್ರಿ ನಾಗಮ್ಮಗಳನ್ನು ವಿವಾಹವಾಗಿದ್ದನು. 2ನೇ ಪತ್ನಿ ನಾಗಮ್ಮಳಿಗೆ ವಿಜಯಲಕ್ಷಿ$¾ ಎಂಬ ಮಗು ಜನಿಸಿತ್ತು. ಈ ಮಧ್ಯೆ ಮೊದಲ ಪತ್ನಿ ಕೊಲೆ ಕೇಸಿನಲ್ಲಿ ಸಾಯಿಬಣ್ಣನಿಗೆ ಜೀವಾವಧಿ ಶಿಕ್ಷೆ ಆಗಿತ್ತು. 1994ರಲ್ಲಿ ಪೆರೋಲ್‌ ಪಡೆದು ಹೊರಬಂದಿದ್ದ ಸಾಯಿಬಣ್ಣ 2ನೇ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿ ಮತ್ತೆ ಜೈಲು ಸೇರಿದ್ದ. ಕಲಬುರಗಿ ಸೆಷನ್ಸ್‌  ಕೋರ್ಟ್‌, ಸಾಯಿಬಣ್ಣಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ನಂತರ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಕೂಡ ಆ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿನಾಯ್ತಿಗೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಟಾಪ್ ನ್ಯೂಸ್

1-cc

ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್

Snaehamayi-krishna-GTD

MUDA: ಮಗಳ-ಅಳಿಯಗೆ ಮುಡಾ ಸೈಟ್‌: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು

Congress-Symbol

CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ

2-bbk-11

BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್

Sringeri-DKS

Devotee: ಟೆಂಪಲ್‌ ರನ್‌ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್‌

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

CT-Ravi-Threat

Threat: ಹೆಬ್ಬಾಳ್ಕರ್‌ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ

Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

16-bng

Bengaluru: 4 ಕೋಟಿ ಪ್ರಯಾಣಿಕರು: ಏರ್‌ ಪೋರ್ಟ್ ದಾಖಲೆ

15-metro

Bengaluru: ಪ್ರತಿ ಸೋಮವಾರ ಮುಂಜಾನೆ 4.15ರಿಂದಲೇ ಮೆಟ್ರೋ ಸೇವೆ

14-bng

Bengaluru: ತಾಯಿಗೆ ನಿಂದಿಸುತ್ತಿದ್ದ ತಮ್ಮನ ಕೊಂದ ಸಹೋದರನ ಬಂಧನ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

3-shimogga

Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ

1-cc

ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್

Snaehamayi-krishna-GTD

MUDA: ಮಗಳ-ಅಳಿಯಗೆ ಮುಡಾ ಸೈಟ್‌: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು

Congress-Symbol

CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ

2-bbk-11

BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.