ಕಿಡ್ನಿ ಕಸಿಗೆ ತಕ್ಷಣ ಕ್ರಮಕ್ಕೆ ಹೈ ನಿರ್ದೇಶನ
Team Udayavani, Dec 4, 2018, 11:58 AM IST
ಬೆಂಗಳೂರು: ಕಿಡ್ನಿ ಕಸಿಗೆ ಅನುಮತಿ ನೀಡುವಂತೆ ಕೋರಿ ಟೆಕ್ಕಿಯೊಬ್ಬರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಜರುಗಿಸುವಂತೆ “ರಾಜ್ಯ ಮಾನವ ಅಂಗಾಂಗ ಕಸಿ ಅನುಮತಿ ಅಧಿಕಾರಯುತ ಸಮಿತಿ’ಗೆ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಕಿಡ್ನಿ ಕಸಿ ಮಾಡಿಸಲು ತನಗೆ ಅನುಮತಿ ನೀಡಲು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಹಾಗೂ ಮಾನವ ಅಂಗಾಂಗ ಕಸಿ ಅನುಮತಿಗೆ ಅಧಿಕಾರಯುತ ಸಮಿತಿ ಮುಖ್ಯಸ್ಥರಿಗೆ ನಿರ್ದೇಶಿಸಬೇಕು.
ಅಲ್ಲದೇ ಕಿಡ್ನಿ ಕಸಿ ಮಾಡಲು ಅರ್ಜಿಯಲ್ಲಿ ಹೆಸರಿಸಲಾಗಿರುವ ನಗರದ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡುವಂತೆ ಕೋರಿ ವೈಟ್‌ಫೀಲ್ಡ್ ನಿವಾಸಿ ಸಾಫ್ಟ್ವೇರ್ ಇಂಜಿನಿಯರ್ ಮಹಮ್ಮದ್ ಝೈದ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ನಡೆಸಿತು.
ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಆಯುಕ್ತರು, ಮಾನವ ಅಂಗಾಂಗ ಕಸಿ ಅನುಮತಿ ಸಮಿತಿ ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸಿ, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಉಳಿದ ಪ್ರತಿವಾದಿ ಖಾಸಗಿ ಆಸ್ಪತ್ರೆಗಳಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿತು.
ಅರ್ಜಿಯ ವಿಚಾರಣೆ ವೇಳೆ ಝೈದ್ ಪರ ವಕೀಲೆ ಅನುಚಂಗಪ್ಪ ವಾದಿಸಿ, ಅರ್ಜಿದಾರಿಗೆ ಕಿಡ್ನಿ ದಾನ ಮಾಡಲು ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ. ಆದರೆ, ಪ್ರತಿವಾದಿ ಆಸ್ಪತ್ರೆಗಳು ಮಾತ್ರ ಕಿಡ್ನಿ ಕಸಿ ಮಾಡುತ್ತಿಲ್ಲ. ಸಮಿತಿಯಿಂದ ಅನುಮತಿ ಹಾಗೂ ಕೋರ್ಟ್‌ನಿಂದ ಆದೇಶ ಪಡೆದು ತರುವಂತೆ ಸೂಚಿಸುತ್ತಿದ್ದಾರೆ ಎಂದು ದೂರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕ್ನಿಡಿ ಕಸಿ ಮಾಡಿಸಲು ಅನುಮತಿ ಕೋರಿ ಸಮಿತಿಗೆ ಅರ್ಜಿದಾರರು ಮನವಿ ಸಲ್ಲಿಸಬೇಕು. ಅದನ್ನು ಸಮಿತಿ ಕೂಡಲೇ ಪರಿಗಣಿಸಬೇಕು ಎಂದು ಸೂಚಿಸಿತು. ಅಲ್ಲದೇ ನೀವು ಒಬ್ಬ ವ್ಯಕ್ತಿಯ ಜೀವ ಕಾಪಾಡಬೇಕಿದೆ ಎಂದು ಸಮಿತಿ ಪರ ಹಾಜರಿದ್ದ ಸರ್ಕಾರಿ ವಕೀಲರಿಗೆ ಸಲಹೆ ನೀಡಿತು.
ಪ್ರಕರಣವೇನು?: ಮಹಮ್ಮದ್ ಝೈದ್‌ಗೆ 2012ರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. 2013ರಲ್ಲಿ ಆತನಿಗೆ ತಾಯಿಯೇ ಕಿಡ್ನಿ ದಾನ ಮಾಡಿದ್ದರು. ಆದರೆ, 2016ರಲ್ಲಿ ಮತ್ತೆ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತ್ತು. ತೀವ್ರ ಶೋಧದ ನಂತರ ಸಂಬಂಧಿ ಮನ್ಸೂರ್ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದರು.
ಆದರೆ, ಮನ್ಸೂರ್ ತಮಗೆ ಹತ್ತಿರದ ಸಂಬಂಧಿಯಲ್ಲ ಎಂಬ ಕಾರಣ ಮುಂದಿಟ್ಟು ಕಿಡ್ನಿ ಕಸಿ ಮಾಡಲು ಪ್ರತಿವಾದಿ ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ. ಆದ್ದರಿಂದ ಕಿಡ್ನಿ ಕಸಿ ಮಾಡಿಸುವುದಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರಕ್ಕೆ ಮತ್ತು ಕಿಡ್ನಿ ಕಸಿ ಮಾಡುವಂತೆ ಪ್ರತಿವಾದಿ ಆಸ್ಪತ್ರೆಗಳಿಗೆ ನಿರ್ದೇಶಿಸುವಂತೆ ಟಿಕ್ಕಿ ಝೈದ್ ಅರ್ಜಿಯಲ್ಲಿ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.