ಸರ್ಕಾರಕ್ಕೆ ಹೈ ನೋಟಿಸ್‌


Team Udayavani, Jul 11, 2018, 12:01 PM IST

highcourt4.jpg

ಬೆಂಗಳೂರು: ಯಲಹಂಕ ಬಳಿ ಪುಟ್ಟೇನಹಳ್ಳಿ ಕೆರೆಯಂಚಿನ 500 ಮೀಟರ್‌ ವ್ಯಾಪ್ತಿಯಲ್ಲಿ ಅನಿಲ ಆಧಾರಿತ ವಿದ್ಯುತ್‌ ಘಟಕ ಸ್ಥಾಪಿಸಲು ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ವಿದ್ಯುತ್‌ ಘಟಕ ಸ್ಥಾಪನೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಯಲಹಂಕ-ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿಗಳ ಸಂರಕ್ಷಣಾ ಟ್ರಸ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿದ್ಯುತ್‌ ಘಟಕ ಸ್ಥಾಪನೆಗೆ ಅನುಮೋದನೆ ನೀಡುವ ಮುನ್ನ ಕಾನೂನು ಪ್ರಕಾರ ಸಾರ್ವಜನಿಕ ಅಹವಾಲು ಆಲಿಸಿಲ್ಲ. ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಸಲ್ಲಿಸಿದ್ದ ಮನವಿಗಳನ್ನೂ ಪರಿಗಣಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಪ್ರತಿವಾದಿಗಳಾದ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ, ರಾಜ್ಯ ಮಾಲಿನ್ಯ ಪರಿಹಾರ ಅಧ್ಯಯನ ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ಕರ್ನಾಟಕ ವಿದ್ಯುತ್‌ ನಿಗಮಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಅರಣ್ಯ ಇಲಾಖೆಯು 2015ರ ಏಪ್ರಿಲ್‌ 29ರಂದು ಕೆರೆಯನ್ನು ಪಕ್ಷಿ ಸಂಕುಲ ಸಂರಕ್ಷಣಾ ತಾಣ ಎಂದು ಘೋಷಿಸಿದೆ. ಕೆರೆಯ ಸುತ್ತ 127 ಪ್ರಕಾರದ ಪ್ರಾಣಿ, ಪಕ್ಷಿಗಳಿವೆ. ಆದರೆ, ಉದ್ದೇಶಿತ ಯಲಹಂಕ-ಪುಟ್ಟೇನಹಳ್ಳಿ ಕೆರೆಯ ನಡುವೆ ವಿದ್ಯುತ್‌ ಘಟಕ ಸ್ಥಾಪನೆಯಿಂದ ಕೆರೆಗಳು ಹಾಳಾಗುತ್ತವೆ. ಪ್ರಾಣಿಪಕ್ಷಿಗಳ ಜೀವಸಂಕುಲಕ್ಕೆ ಅಪಾಯ ಎದುರಾಗಲಿದೆ ಎಂದು ಟ್ರಸ್ಟಿ ಅರ್ಜಿಯಲ್ಲಿ ಹೇಳಿದೆ.

ಟಾಪ್ ನ್ಯೂಸ್

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

Tiger-hu

Hunasuru: ಕೂಂಬಿಂಗ್ ವೇಳೆಯೇ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಎರಗಿದ ಹುಲಿ!

ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

Tumkur University ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

1-eqwewewqe

Ayodhya: ಭಾಗಶಃ ನಿರ್ಮಿಸಿದ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ!

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Nandini

Thirupathi Laddu: ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್‌ಗೆ ಜಿಪಿಎಸ್‌ ಕಣ್ಗಾವಲು!

MP Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ

Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

2

Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

1-chess–bg

Chess Olympiad; ಭಾರತಕ್ಕೆ ಅವಳಿ ಸ್ವರ್ಣ ಸಂಭ್ರಮ

Sampaje: ಸಹಪಾಠಿಯ ಮರ್ಮಾಂಗ ಎಳೆದ ವಿದ್ಯಾರ್ಥಿಗಳು!

Sampaje: ಸಹಪಾಠಿಯ ಮರ್ಮಾಂಗ ಎಳೆದ ವಿದ್ಯಾರ್ಥಿಗಳು!

POlice

Kasaragod: ಹಲ್ಲೆ ಪ್ರಕರಣ: ಕೇಸು ದಾಖಲು

ganja

Bajpe; ಗಾಂಜಾ ಸೇವನೆ; ಮೂವರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.