ವೈಜ್ಞಾನಿಕ ಸಂಶೋಧನೆಗಳಿಂದ ಉನ್ನತ ಸ್ಥಾನ


Team Udayavani, Jul 30, 2019, 3:08 AM IST

vijnanika

ಬೆಂಗಳೂರು: ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಳು ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನು ಹೆಚ್ಚಿಸುತ್ತವೆ. ವಿಜ್ಞಾನ ಕ್ಷೇತ್ರದ ಸಂಶೋಧನೆಗಳಿಂದಲೇ ದೇಶದ ಅಂತಾರಾಷ್ಟ್ರೀಯ ಸ್ಥಾನಮಾನ ಮತ್ತಷ್ಟು ಹೆಚ್ಚಾಗಲಿದೆ ಎಂದು ಸಮಾಗಮವನ್ನು ಉದ್ಘಾಟಿಸಿದ ಪರಮಾಣು ಶಕ್ತಿ ಆಯೋಗದ ಸದಸ್ಯ ಡಾ.ಅನಿಲ್‌ ಕಾಕೋಡ್ಕರ್‌ ಅಭಿಪ್ರಾಯಪಟ್ಟರು.

ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂನಲ್ಲಿ ಆಯೋಜಿಸಿದ್ದ “ವಿಜ್ಞಾನ ಪ್ರದರ್ಶನ ಮತ್ತು ಸಮಾಗಮದಲ್ಲಿ ಮಾತನಾಡಿದ ಅವರು, ಈ ಮೆಗಾ ವಿಜ್ಞಾನ ಸಮಾಗಮ ಹಿಂದೆ ಮುಂಬೈ, ದೆಹಲಿ ನಗರಗಳಲ್ಲಿ ನಡೆದಿತ್ತು. ಸದ್ಯ ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಸೆಪ್ಟೆಂಬರ್‌ 28ರ ತನಕ ನಗರದಲ್ಲೇ ಈ ಪ್ರದರ್ಶನ ಮುಂದುವರಿಯುತ್ತದೆ. ನಂತರ ಈ ಸಮಾಗಮ ಕೊಲ್ಕತ್ತಾದಲ್ಲಿ ಮುಕ್ತಾಯವಾಗಲಿದೆ. ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡನೇ ಸರಣಿ ಪ್ರದರ್ಶನವಾಗಿರುವುದು ನಿಜಕ್ಕೂ ಸಂತೋಷ ತಂದಿದೆ. ಇದರ ಪ್ರಯೋಜನ ವಿಜ್ಞಾನ ಕ್ಷೇತ್ರದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಿಗಬೇಕಿದೆ ಎಂದರು.

2019ರ ಮೇ ತಿಂಗಳಲ್ಲಿ ಮುಂಬೈನಲ್ಲಿ ಚಾಲನೆ ಪಡೆದುಕೊಂಡ ಈ ವಿಜ್ಞಾನ ಸಮಾಗಮ ಒಟ್ಟು 11 ತಿಂಗಳ ಕಾಲ ನಡೆಯಲಿದೆ. ಮುಂಬೈನ ಪರಮಾಣು ಶಕ್ತಿ ಇಲಾಖೆ (ಡಿಎಇ), ನವ ದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ ಟಿ), ಹಾಗೂ ಕೊಲ್ಕತ್ತಾದ ನ್ಯಾಷನಲ್‌ ಕೌನ್ಸಿಲ್‌ ಆಫ್ ಸೈನ್ಸ್‌ ಮ್ಯೂಸಿಯಂ (ಎನ್‌ ಸಿಎಸ್‌ ಎಂ) ಸಹಯೋಗದಲ್ಲಿ “ವಿಜ್ಞಾನ ಸಮಾಗಮ ಮತ್ತು ಮೆಗಾ ವಿಜ್ಞಾನ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ವಿಶ್ವದ ಪ್ರಮುಖ ಮೆಗಾ- ವಿಜ್ಞಾನ ಯೋಜನೆಗಳನ್ನು ಒಟ್ಟಿಗೆ ಸೇರಿಸುವ ಅತಿದೊಡ್ಡ ವಿಜ್ಞಾನ ಸಮಾಗಮಕ್ಕೆ ಇಂದು ಚಾಲನೆ ದೊರೆತಿದೆ. ಇದೇ ವೇಳೆ ಮಾತನಾಡಿದ ಬೆಂಗಳೂರಿನ ಎನ್‌ಐಎಎಸ್‌ನ ನಿರ್ದೇಶಕ ಮತ್ತು ಡಿಎಸ್‌ ಟಿಯ ಮಾಜಿ ಕಾರ್ಯದರ್ಶಿ ಪ್ರೊ.ವಿ.ಎಸ್‌ .ರಾಮಮೂರ್ತಿ, ಇತ್ತೀಚಿನ ದಶಕಗಳಲ್ಲಿ ಭಾರತ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಅಭೂತಪೂರ್ವವಾದ ಸಾಧನೆಗಳನ್ನು ಮಾಡಿದೆ. ಈ ರೀತಿ ಬೃಹತ್‌ ವಿಜ್ಞಾನ ಪ್ರದರ್ಶನಗಳು ಮತ್ತಷ್ಟು ಸಾಧನೆಗೆ ಸ್ಪೂರ್ತಿಯಾಗಲಿವೆ. ಈ ಮೆಗಾ ಸಮಾಗಮ ಪ್ರತಿಯೊಬ್ಬರನ್ನು ಆಕರ್ಷಿಸಲಿದೆ ಎಂದರು.

ವಿಶೇಷಗಳು
-9 ಲಕ್ಷ ಜನ ಭಾಗವಹಿಸುವ ನಿರೀಕ್ಷೆ
-550 ಚದುರ ಅಡಿ ಜಾಗದಲ್ಲಿ ಪ್ರದರ್ಶನ
-150 ವಿಜ್ಞಾನಿಗಳು ಭಾಗಿ
-7 ವಿಜ್ಞಾನ ಯೋಜನೆಗಳ ಅನಾವರಣ
-30 ಮೀ.ದೂರದರ್ಶಕ ಸೇರಿ ಯೋಜನೆಗಳ ಮಾಹಿತಿ

ಹೊಸ ಯೋಜನೆಗಳು: 30 ಮೀಟರ್‌ ಟೆಲಿಸ್ಕೋಪ್‌(ಟಿಎಂಟಿ), ಇಂಟರ್‌ನ್ಯಾಷನಲ್‌ ಥರ್‌ವೊà ನ್ಯೂಕ್ಲಿಯರ್‌ ಎಕ್ಸಿಪರಿಮೆಂಟಲ್‌ ರಿಯಾಕ್ಟರ್‌(ಐಟಿಇಆರ್‌), ಲೈಗೊ, ಫೇರ್‌, ಇಂಡಿಯನ್‌ ಬೇಸ್ಡ್ ನ್ಯೂಟ್ರಿನೊ ಅಬ್‌ಸರ್ವವೆಟರಿ(ಐಎನ್‌ಒ), ಸ್ಕೇÌರ್‌ ಕಿಲೋಮೀಟರ್‌ ಅರ್ರೆ (ಎಸ್‌ಕೆಎ)

ಯೋಜನೆ ವಿಶೇಷತೆಗಳು
ಟಿಎಂಟಿ: ಸೌರ ಮಂಡಲ, ಗ್ರಹಗಳು ಹಾಗೂ ಗ್ಯಾಲಕ್ಸಿ ಸೇರಿ ಬಾಹ್ಯಾಕಾಶದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದು, ನೆಲದಿಂದಲೇ ಚಿತ್ರಗಳನ್ನು ತೆಗೆಯಲಿದೆ. ವಿಶ್ವದಲ್ಲೇ ಅತಿ ದೊಡ್ಡ ಟಿಎಂಟಿ ಯೋಜನೆ ಭಾರತದಲ್ಲಿ ರೂಪಿಸಲಾಗಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಜತೆಗೂಡಿ ಈ ಯೋಜನೆಯನ್ನು ಹೊರತಂದಿದ್ದಾರೆ. ಯೋಜನೆಗೆ 1.4 ಬಿಲಿಯನ್‌ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ ಈಗಾಗಲೇ 13 ಸಾವಿರ ಕೋಟಿ ರೂ.ಅನುದಾನ ನೀಡಿದೆ.

ಐಎನ್‌ಒ: ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಎಲೆಕ್ಟ್ರಿನೋ ಮತ್ತು ನ್ಯೂಟ್ರಿನೊ ಬಗ್ಗೆ ಅಧ್ಯಯನ ಮಾಡಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 1,500 ಕೋಟಿ ರೂ. ನೆರವು ನೀಡಿದೆ.

ಲೈಗೊ: ಭಾರತ ಮತ್ತು ಅಮೆರಿಕಾ ವಿಜ್ಞಾನಿಗಳ ಸಹಯೋಗದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ವಿಶ್ವದಾದ್ಯಂತ ಭೂಮಿಯನ್ನು ತಲುಪುವ ಗುರುತ್ವದ ಅಲೆಗಳ ಬಗ್ಗೆ ಅಧ್ಯಯನ ಮಾಡಲಿದೆ

ಆನ್‌ ಲೈನ್‌ ವೀಕ್ಷಣೆಗೆ ಅವಕಾಶ: ಈ ಮೆಗಾ ವಿಜ್ಞಾನ ಸಮಾಗಮದ ಪ್ರಮುಖ ಕಾರ್ಯಕ್ರಮಗಳನ್ನು ಆನ್‌ ಲೈನ್‌ ನಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದ್ದು, www.vigyansamagam.in ಎಂಬ ವೆಬ್‌ ಸೈಟ್‌ ನಲ್ಲಿ ವೀಕ್ಷಿಸಬಹುದು. ಇದಲ್ಲದೆ ವಿಶ್ವೇಶ್ವರಯ್ಯ ಮ್ಯೂಸಿಯಂನ ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ ಪೇಜ್‌ಗಳಲ್ಲೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ರಜೆ ದಿನಗಳಲ್ಲೂ ಪ್ರದರ್ಶನ: ಶನಿವಾರ, ಭಾನುವಾರಗಳು ಸೇರಿದಂತೆ ರಜೆ ದಿನಗಳಲ್ಲೂ ಈ ಸಮಾಗಮ ಪ್ರದರ್ಶನ ಮುಂದುವರಿಯಲಿದ್ದ, ಬೆಳಗ್ಗೆ 10 ರಿಂದ ಸಂಜೆ 6ರ ತನಕ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಟಾಪ್ ನ್ಯೂಸ್

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

1-mang

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.