ಅಧಿಕಾರಿಗಳ ವರ್ತನೆಗೆ ಹೈ ಛೀಮಾರಿ
Team Udayavani, Jun 13, 2018, 11:54 AM IST
ಬೆಂಗಳೂರು: ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಅಧಿಕಾರಿಗಳ ಧೋರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಕೋರ್ಟ್ ಆದೇಶ ಪಾಲಿಸದ ಸರ್ಕಾರ ಹಾಗೂ ಆಡಳಿತ ವರ್ಗಕ್ಕೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದೆ.
ನಿವೇಶನ ಹಂಚಿಕೆಗೆ ಸಂಬಂಧಪಟ್ಟಂತೆ ಏಕಸದಸ್ಯ ಪೀಠದ ಆದೇಶ ಉಲ್ಲಂ ಸಿದ ಆರೋಪ ಕುರಿತು ಎಸ್.ಎನ್.ನರಸಿಂಹಮೂರ್ತಿ ಎಂಬುವವರು ಬಿಡಿಎ ಆಯುಕ್ತರ ವಿರುದ್ಧ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ರಾಘವೇಂದ್ರ ಚೌಹಾಣ್ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರಿಗೆ ನಿವೇಶನ ನೀಡುವಂತೆ ನಿರ್ದೇಶಿಸಿದ್ದ ಆದೇಶ ಉಲ್ಲಂಘನೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಬಳಿಕವೂ ಆದೇಶ ಪಾಲಿಸದ ಬಿಡಿಎ ಕಾರ್ಯವೈಖರಿಯನ್ನು ತರಾಟೆ ತೆಗೆದುಕೊಂಡಿತು.
ಕೋರ್ಟ್ ಆದೇಶಕ್ಕೆ ಆಡಳಿತ ವರ್ಗ ಬೇಜವಾಬ್ದಾರಿ ತನ ತೋರಿದ್ದು, ಅಧಿಕಾರಿಗಳು ಮತ್ತೆ ಮತ್ತೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕೋರ್ಟ್ ಆದೇಶ ಉಲ್ಲಂ ಸುವ ಆಡಳಿತ ವರ್ಗಕ್ಕೆ ನಾಚಿಕೆಯಾಗಬೇಕು ಎಂದು ನ್ಯಾಯಪೀಠ ಕಿಡಿಕಾರಿತು.
ನ್ಯಾಯಾಂಗ ನಿಂದನೆ ಕೇಸ್‌ಗಳು ದಾಖಲಾಗುತ್ತವೆ ಎಂದರೆ ಆಡಳಿತ ವರ್ಗದ ಕಾರ್ಯವೈಖರಿ ಹೇಗೆದೆ ಎಂದು ತಿಳಿಯುತ್ತದೆ. ಈ ಪ್ರಕರಣದ ಮುಂದಿನ ವಿಚಾರಣೆ ವೇಳೆ ಬಿಡಿಎ ಆಯುಕ್ತರು ಖುದ್ದು ಹಾಜರಾಗಿ, ಸ್ಪಷ್ಟನೆ ನೀಡಬೇಕು ನ್ಯಾಯಮೂರ್ತಿಗಳು ಎಂದು ವಿಚಾರಣೆಯನ್ನು ಜೂ. 18ಕ್ಕೆ ಮುಂದೂಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.