ಪೊಲೀಸರ ನೋಟಿಸ್ಗೆ ಹೈ ತಡೆಯಾಜ್ಞೆ
Team Udayavani, Jun 1, 2017, 12:16 PM IST
ಬೆಂಗಳೂರು: ಮಹಿಳೆಯೊಬ್ಬರ ದೂರಿನ ಆಧಾರದಲ್ಲಿ “ಆದಿತ್ಯ ಬಿರ್ಲಾ ಫ್ಯಾಶನ್ ಅಂಡ್ ರೀಟೈಲ್ ಲಿಮಿಟೆಡ್’ನ ಮೂವರು ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ನೀಡಿದ್ದ ನೋಟೀಸ್ಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಪೊಲೀಸ್ ಇನ್ಸಪೆಕ್ಟರ್ ನೀಡಿರುವ ನೋಟೀಸ್ ರದ್ದುಗೊಳಿಸುವಂತೆ ಕಂಪೆನಿಯ ಸಿಇಒ ಆಶೀಶ್ ದೀಕ್ಷಿತ್ ಹಾಗೂ ಮತ್ತಿಬ್ಬರು ಅಧಿಕಾರಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧದ ಪೊಲೀಸ್ ನೋಟೀಸ್ಗೆ ಮುಂದಿನ ವಿಚಾರಣೆಯವರೆಗೆ ತಡೆಯಾಜ್ಞೆ ನೀಡಿ ಜೂನ್ 5ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ರಾಮಮೂರ್ತಿನಗರ ಠಾಣೆ ಇನ್ಸಪೆಕ್ಟರ್ ಚಂದ್ರಾಧರ್ಗೆ ತಾಕೀತು ಮಾಡಿತು.
ಇಂದಿರಾನಗರದ ನಿವಾಸಿ ಶೀತಲ್. ಆರ್ ಎಂಬವವರು ನೀಡಿದ ದೂರಿನ ಅನ್ವಯ ರಾಮಮೂರ್ತಿ ನಗರ ಠಾಣೆ ಇನ್ಸಪೆಕ್ಟರ್, ಮೇ 24ರಂದು ಕಂಪೆನಿಯ ಸಿಇಒ, ಆಶೀಶ್ ದೀಕ್ಷಿತ್, ಸಿಎಫ್ಒ ವಿನಯ್ ಬೋಪತ್ಕರ್ ಹಾಗೂ ಹಣಕಾಸು ಅಧಿಕಾರಿ ವಿಕಾಸ್ ಅಗರ್ವಾಲ್ಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು.
ದೂರು ನೀಡಿರುವ ಶೀತಲ್ ಅವರ ಪತಿ ಅರುಣ್ ರಾಮಮೂರ್ತಿ ನಮ್ಮ ಸಂಸ್ಥೆಯ ಮಾಜಿ ಉದ್ಯೋಗಿ. ಅಧಿಕಾರ ದುರ್ಬಳಕೆ ಹಿನ್ನೆಲೆಯಲ್ಲಿ 2014ರಲ್ಲಿ ಮಹದೇವಪುರ ಠಾಣೆಯಲ್ಲಿ ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿದ್ದರೂ ಶೀತಲ್ ಸಲ್ಲಿಸಿರುವ ದೂರಿನ ಅನ್ವಯ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಅಧಿಕಾರಿ ನೋಟೀಸ್ ಕಳುಹಿಸಿರುವುದು ಕಾನೂನು ಬಾಹಿರ ಎಂದು ಕಂಪನಿ ಪರ ವಕೀಲರು ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.