ಟ್ರಾನ್ಸ್ಫಾರ್ಮರ್ ತೆರವು:2 ವಾರಗಳಲ್ಲಿ ಸಭೆ ನಡೆಸಿ
Team Udayavani, Jul 23, 2021, 3:58 PM IST
ಬೆಂಗಳೂರು: ನಗರದ ಎಂಟು ವಲಯಗಳಲ್ಲಿ ಫುಟ್ಪಾತ್ ಮೇಲೆ ಈಗಾಗಲೇಸ್ಥಾಪಿಸಲಾಗಿರುವ ವಿದ್ಯುತ್ ಟ್ರಾನ್Õಫಾರ್ಮರ್ ತೆರವು ಗೊಳಿಸುವ ಸಂಬಂಧರಚಿಸಲಾಗಿರುವ ಬಿಬಿಎಂಪಿ ಮತ್ತುಬೆಸ್ಕಾಂ ಅಧಿಕಾರಿಗಳನ್ನು ಒಳಗೊಂಡಸಮನ್ವಯ ಸಮಿತಿ ಎರಡು ವಾರಗಳಲ್ಲಿಸಭೆ ಸೇರಿ ನಿರ್ಣಯ ಕೈಗೊಳ್ಳಬೇಕುಎಂದು ಹೈಕೋರ್ಟ್ ಆದೇಶಿಸಿದೆ.
ನಗರದಲ್ಲಿ ಪಾದಚಾರಿ ಮಾರ್ಗಹಾಗೂ ರಾಜಕಾಲುವೆಗಳ ಮೇಲಿರುವಟ್ರಾನ್ಸ್ಫಾರ್ಮರ್ ತೆರವಿಗೆ ಆದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ವಿ.ಜಿ. ಅತ್ರಿ ಸಲ್ಲಿಸಿರುವ ಸಾರ್ವಜನಿಕಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿಎ.ಎಸ್.ಓಕಾನೇತೃತ್ವದವಿಭಾಗೀಯ ನ್ಯಾಯಪೀಠ ಗುರುವಾರವಿಚಾರಣೆ ನಡೆಸಿತು.
ಈ ವೇಳೆ ಬೆಸ್ಕಾಂ ಪರ ವಕೀಲರು ವಾದಮಂಡಿಸಿ ಸಮನ್ವಯ ಸಮಿತಿ ಕಳೆದಜು.17ರಂದು ಸಭೆ ನಡೆಸಿದೆ, ಆದರೆಪಾಲಿಕೆ ಮತ್ತು ಬೆಸ್ಕಾಂ ಅಧಿಕಾರಿಗಳತಂಡ ಜಂಟಿ ಪರಿಶೀಲನೆ ನಡೆಸಿಸಲ್ಲಿಸಿರುವ ವರದಿ ಲಭ್ಯವಾಗದ ಕಾರಣಯಾವುದೇ ನಿರ್ಧಾರ ಕೈಗೊಂಡಿಲ್ಲ.ಪಾಲಿಕೆ ಪರ್ಯಾಯ ಜಾಗವನ್ನುಸೂಚಿಸಿದರೆ ಬೆಸ್ಕಾಂ ಟ್ರಾನ್ಸ್ಫಾರ್ಮರ್ಗಳನ್ನು ತೆರವುಗೊಳಿಸಲಿದೆ ಎಂದರು.
ಅದಕ್ಕೆ, ಪಾಲಿಕೆ ಪರ ವಕೀಲರು, ಜಂಟಿಸಮೀಕ್ಷೆಯಲ್ಲಿ ಪಾದಚಾರಿ ಮಾರ್ಗದಮೇಲಿನ ಟ್ರಾನ್ಸ್ಫಾರ್ಮರ್ಗಳನ್ನುಗುರುತಿಸಲಾಗಿದೆ. ಬೆಸ್ಕಾಂ ಅವುಗಳನ್ನುಅಳವಡಿಸುವಾಗ ಪಾಲಿಕೆಯ ಅನುಮತಿಪಡೆದಿಲ್ಲ. ಹಾಗಾಗಿ ಪಾಲಿಕೆ ಯಾವುದೇನಿರ್ಧಾರಕೈಗೊಂಡಿಲ್ಲ ಎಂದರು.ಆಗ ನ್ಯಾಯಪೀಠ “”ಪಾಲಿಕೆ ಹಾಗೂಬೆಸ್ಕಾಂ ಅಧಿಕಾರಿಗಳು ಕಚೇರಿಯಿಂದಹೊರಬಂದು ಬೀದಿಯಲ್ಲಿ ನಿಂತರೆ ಸಾಕುಪಾದಚಾರಿ ಮಾರ್ಗದ ಮೇಲಿನ ಟ್ರಾನ್Õಫಾರ್ಮರ್ಗಳು ಗೋಚರಿಸುತ್ತವೆ, ಅವುಸಾರ್ವಜನಿಕರಿಗೆ ಅಪಾಯಕಾರಿಯಾಗಿಪರಿಣಮಿಸಿವೆ”ಎಂದು ಹೇಳಿತು.
ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ಈಗಾಗಲೇ ಮಳೆಗಾಲಶುರುವಾಗಿದೆ, ಈಗ ಟ್ರಾನ್ಸ್ಫಾರ್ಮರ್ಗಳು ಇನ್ನೂ ಅಪಾಯಕಾರಿಯಾಗಿವೆ.ಪಾಲಿಕೆ ಮತ್ತು ಬೆಸ್ಕಾಂ ನ್ಯಾಯಾಲಯದಆದೇಶ ಪಾಲಿಸುತ್ತಿಲ್ಲ ಎಂದರು.ನಂತರ ನ್ಯಾಯಪೀಠ, ಸಮನ್ವಯಸಮಿತಿ ಎರಡು ವಾರಗಳಲ್ಲಿ ಸಭೆ ನಡೆಸಿಟ್ರಾನ್ಸ್ಫಾರ್ಮರ್ ಗಳ ತೆರವು ಕುರಿತುನಿರ್ಧಾರ ಕೈಗೊಂಡು ನ್ಯಾಯಾಲಯಕ್ಕೆಆ.12ರೊಳಗೆ ತಿಳಿಸಬೇಕು ಎಂದುಆದೇಶಿಸಿ ವಿಚಾರಣೆಯನ್ನು ಆ.13ಕ್ಕೆಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.