ಹೆದ್ದಾರಿ ಮದ್ಯದಂಗಡಿ: ಸುಪ್ರೀಂಗೆ ಮೊರೆ
Team Udayavani, Apr 15, 2017, 12:29 PM IST
ಬೆಂಗಳೂರು: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಅಕ್ಕ-ಪಕ್ಕದಲ್ಲಿ “ಸಿಎಲ್-07′ ಪರವಾನಗಿ ಹೊಂದಿರುವ ಹೋಟೆಲ್‌ಗಳನ್ನೂ ತೆರವುಗೊಳಿಸಲು ಆದೇಶಿಸಿದ್ದು, ಈ ಆದೇಶವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲಿಕರ ಸಂಘ ತೀರ್ಮಾನಿಸಿದೆ.
ನಗರದ ಕೃಷಿ ಭವನದಲ್ಲಿ ಶುಕ್ರವಾರ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲಿಕರ ಸಂಘದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ಶಿ. ಬಾಳಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬಳಿ ಇರುವ ಎಲ್ಲ ಪ್ರಕಾರದ ಹೋಟೆಲ್‌ಗಳು ಇರಕೂಡದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಸರ್ಕಾರದ ನೀತಿ-ನಿಯಮಗಳಡಿ ಕೋಟ್ಯಂತರ ರೂ. ಹೂಡಿಕೆ ಮಾಡಿ, ನಿರ್ಮಿಸಿದ ಶಾಶ್ವತ ಕಟ್ಟಡಗಳನ್ನು ಸ್ಥಳಾಂತರಿಸುವುದು ಕಷ್ಟಸಾಧ್ಯ. ಅಷ್ಟಕ್ಕೂ ಈ ಮಾದರಿಯ ಹೋಟೆಲ್‌ಗಳಲ್ಲಿ ತಂಗುವವರಿಗೆ ಮಾತ್ರ ಮದ್ಯ ಸರಬರಾಜು ಮಾಡಲಾಗುತ್ತದೆ. ಆದ್ದರಿಂದ ಆದೇಶವನ್ನು ಪುನರ್‌ಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.
ನಿಯಮ ತಿದ್ದುಪಡಿಗೆ ಒತ್ತಾಯ: ರಾಜ್ಯಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬಳಿ ಸುಮಾರು 953 “ಸಿಎಲ್- 07′ ಪರವಾನಗಿ ಪಡೆದ ಹೋಟೆಲ್‌ಗಳಿವೆ. ಇವುಗಳಿಗೆ ಕನಿಷ್ಠ 1ರಿಂದ 10 ಕೋಟಿ ರೂ.ವರೆಗೂ ಬಂಡವಾಳ ಹೂಡಲಾಗಿದೆ. ಕನಿಷ್ಠ 30 ಕೊಠಡಿಗಳಿರುವ ಲಾಡಿjಂಗ್ ವ್ಯವಸ್ಥೆ ಈ ಹೋಟೆಲ್‌ಗಳಲ್ಲಿದೆ. ಇಲ್ಲಿ ಉಳಿದುಕೊಳ್ಳುವವರಿಗೆ ಮಾತ್ರ ಮದ್ಯ ಸರಬರಾಜು ಮಾಡಲಾಗುತ್ತದೆ.
ವಾರ್ಷಿಕ 300 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಯುತ್ತದೆ. ಈಗ ಸುಪ್ರೀಂ ಕೋರ್ಟ್ ಆದೇಶದಿಂದ ಹೋಟೆಲ್‌ಗಳನ್ನು ರಸ್ತೆ ಬದಿಯಿಂದ 500 ಮೀಟರ್ ದೂರದಲ್ಲಿ ಸ್ಥಳಾಂತರಿಸಲು ಆಗುವುದಿಲ್ಲ. ಬದಲಿಗೆ ನೆಲಸಮಗೊಳಿಸಬೇಕಾಗುತ್ತದೆ. ಈ ಬಗ್ಗೆ ಕೂಡ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ಅರ್ಜಿಯ ಮೂಲಕ ಮನದಟ್ಟು ಮಾಡಿಕೊಡಲಾಗುವುದು ಎಂದರು.
ಇದಲ್ಲದೆ, ಪ್ರಧಾನಿ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವರನ್ನೂ ಖುದ್ದು ಭೇಟಿ ಮಾಡಿ, ಮನವರಿಕೆ ಮಾಡಿಕೊಡ ಲಾಗುವುದು ಎಂದ ಅವರು, ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಭೇಟಿಯಾಗಿ ಅಗತ್ಯಬಿದ್ದರೆ ನಿಯಮಾವಳಿಗಳ ತಿದ್ದುಪಡಿ ಮಾಡುವಂತೆ ಕೋರಲಾಗುವುದು ಎಂದೂ ತಿಳಿಸಿದರು.
ರಾಜ್ಯದಲ್ಲಿ ಸುಮಾರು ಹತ್ತು ಸಾವಿರ ಮದ್ಯ ಮಾರಾಟ ಪರವಾನಗಿದಾರರಿದ್ದಾರೆ. ಇವರಿಂದ ಸರ್ಕಾರಕ್ಕೆ ವಾರ್ಷಿಕ 16ರಿಂದ 18 ಸಾವಿರ ಕೋಟಿ ರೂ. ಆದಾಯ ಬರುತ್ತದೆ ಎಂದು ಉಮೇಶ್ ಬಾಳಿ ಮಾಹಿತಿ ನೀಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರೇವಣಸಿದ್ದಪ್ಪ ಗು. ಕಲಬುರ್ಗಿ, ಪ್ರಧಾನ ಕಾರ್ಯದರ್ಶಿ ಗೋವಿಂದ ದು. ಕೌಲಗಿ ಮತ್ತಿತರರು ಭಾಗವಹಿಸಿದ್ದರು.
10000 ಪರವಾನಗಿದಾರರು
ಪ್ರವಾಸೋದ್ಯಮ ಹೋಟೆಲ್‌ಗಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಿ, ಹೋಟೆಲ್‌ಗಳ ಹಿತರಕ್ಷಣೆಗಾಗಿ ಅಗತ್ಯಬಿದ್ದರೆ ಹೋರಾಟಗಳನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.