ಹಿಂದೂ ಏಕತಾ ಮೆರವಣಿಗೆ ಇಂದು
Team Udayavani, May 27, 2018, 11:37 AM IST
ಬೆಂಗಳೂರು: ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ.ಜಯಂತ ಆಠವಲೆಯವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ (ಮೇ 27ರಂದು) ನಗರದಲ್ಲಿ ಹಿಂದೂ ಏಕತಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಗ್ಗೆ 10.30ಕ್ಕೆ ವಿಜಯನಗರದ ಆದಿಚುಂಚನಗಿರಿ ಮಠದಿಂದ ಭವ್ಯ ಮೆರವಣಿಗೆ ಹೊರಡಲಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ವಿಚಾರವನ್ನು ಪ್ರಸಾರ ಮಾಡುವ ಚಿತ್ರರಥ, ಪ್ರಾಚೀನ ಕಲೆ, ಲಾಠಿ-ದಂಡ ಸರಪಳಿಯ ಪ್ರಾತ್ಯಕ್ಷಿಕೆಗಳು ಮೆರವಣಿಗೆಯ ರಂಗು ಹೆಚ್ಚಿಸಲಿವೆ. ರಣರಾಗಿಣಿ ಮಹಿಳೆಯ ಶಾಖೆಯಿಂದ ûಾತ್ರತೇಜವನ್ನು ಜಾಗೃತಗೊಳಿಸುವ ಪ್ರಾತ್ಯಕ್ಷಿತೆ, ಹಿಂದೂ ಸಂಸ್ಕೃತಿಯ ಶ್ರೇಷ್ಠತ್ವವನ್ನು ತೋರಿಸುವಂತಹ ಉಡುಗೆ-ತೊಡುಗೆ, ಬಾಲಸಾಧಕರ ಆಕರ್ಷಕ ಕಕ್ಷೆಯೂ ಇರುತ್ತದೆ.
ಮೆರವಣಿಗೆಯ ನಂತರ ಸಮಾರೂಪ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಆದಿಚುಂಚನಗಿರಿ ಸಂಸ್ಥಾನದ ಸೌಮ್ಯನಾಥ ಸ್ವಾಮೀಜಿ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಭಾಗವಹಿಸಲಿ¨ªಾರೆ ಎಂದು ಬೆಂಗಳೂರು ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕ ಮೋಹನ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ.ಜಯಂತ ಬಾಳಾಜಿ ಆಠವಲೆಯವರು ಸನಾತನ ಧರ್ಮದ ಪ್ರಸಾರ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾಗಿ¨ªಾರೆ. ಪರಾತ್ಪರ ಗುರು ಡಾ.ಜಯಂತ ಆಠವಲೆಯವರ 76 ನೇ ಜನ್ಮದಿನೋತ್ಸವದ ನಿಮಿತ್ತ ಬೆಂಗಳೂರಿನಲ್ಲಿ ಭವ್ಯ ಹಿಂದೂ ಏಕತಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಹಲವಾರು ಹಿಂದುತ್ವವಾದಿ ಮತ್ತು ಆಧ್ಯಾತ್ಮಿಕ ಸಂಘಟನೆಗಳು ಸಹಭಾಗಿಯಾಗಲಿವೆ ಎಂಬ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.