“ಹಿಂದುಗಳಿಂದ ಮಾತ್ರ ಹಿಂದುತ್ವ ರಕ್ಷಣೆ ಸಾಧ್ಯ’

Team Udayavani, Jan 23, 2017, 11:56 AM IST

MUTALIK.jpg

ಬೆಂಗಳೂರು: ಯಾವುದೇ ಕಾನೂನು, ರಾಜಕಾರಣಿಗಳು ಅಥವಾ ಪೊಲೀಸರಿಂದ ಅಲ್ಲ, ಕೇವಲ ಹಿಂದೂ ಸಂಘಟನೆ ಗಳಿಂದಲೇ ಹಿಂದುತ್ವ ರಕ್ಷಣೆ ಸಾಧ್ಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಪ್ರತಿಪಾದಿಸಿದರು. 

ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರಿನ ವಿಜಯ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ “ಪ್ರಾಂತೀಯ ಹಿಂದೂ ಅಧಿವೇಶನ’ದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ದೇಶದಲ್ಲಿ ಅಲಕ್ಷ್ಯ ಮಾಡಿದರೆ ಅನಾಹುತವಾಗುತ್ತದೆ. ಅದಕ್ಕಾಗಿ ಹಿಂದೂ ಸಮಾಜವನ್ನು ಜಾಗೃತ ಹಾಗೂ ಸಂಘಟಿತಗೊಳಿಸಬೇಕಿದೆ. ನಮ್ಮ ಪೂರ್ವಜರು ಯುದ್ಧಕ್ಕೆ ಹೋಗುವಾಗಲೂ ದೇವರ ಸ್ಮರಣೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರಜಾಗೃತಿ ಎಂಬುದು ಆಧ್ಯಾತ್ಮದ ನೆಲೆಯಲ್ಲಿ ಆಗಬೇಕು. ನಾವೆಲ್ಲ ದೇಶವನ್ನು ಸಂಘಟಿತಗೊಳಿಸುವ ನಾಯಕರಾಗಿದ್ದೇವೆ. ಆದ್ದರಿಂದ ನಮ್ಮಲ್ಲಿರುವ ನಿಷ್ಕ್ರಿಯತೆ ಹಾಗೂ ನಿದ್ರಾವಸ್ಥೆಯನ್ನು ದೂರ ಮಾಡಬೇಕಿದೆ ಎಂದರು.

ಕಾಶ್ಮೀರಿ ಹಿಂದೂಗಳ ನಿದ್ರಾವಸ್ಥೆಯಿಂದಾಗಿ 27 ವರ್ಷಗಳಿಂದ ಅವರು ಇಂದಿಗೂ ಅನಾಥ ಮತ್ತು ನಿರಾಶ್ರಿತ ಜೀವನ ನಡೆಸುತ್ತಿದ್ದಾರೆ. ಹಿಂದೂ ಆಗಿರುವುದೇ ಅವರ ಅಪರಾಧವಾಗಿತ್ತು. ಪಾಕಿಸ್ತಾನವು ಭಾರತದ ಇಸ್ಲಾಮೀಕರಣವನ್ನು ಕಾಶ್ಮೀರದಿಂದ ಆರಂಭಿಸಿತ್ತು. ಆಗ ಅಲ್ಲಿನ ಮುಸ್ಲಿಮರು ಗೆದ್ದರು, ಅಖಂಡ ಭಾರತದ ಹಿಂದೂಗಳು ಸೋತರು. ಇಂದು ದೇಶದಲ್ಲಿ 50 ಸಾವಿರ ಕಾಶ್ಮೀರಗಳಾಗಿವೆ.

ಇನ್ನೂ ಸುಮ್ಮನಿದ್ದರೆ ಹಿಂದೂಗಳ ಅಸ್ತಿತ್ವದ ಪ್ರಶ್ನೆ ಎದುರಾಗುತ್ತದೆ. ಆದ್ದರಿಂದ ಹಿಂದುತ್ವದ ರಕ್ಷಣೆಗೆ ಹಿಂದೂ ಸಂಘಟನೆಗಳೇ ಮುಂದಾಗಬೇಕು. ಯಾವುದೇ ಕಾನೂನು, ರಾಜಕಾರಣಿಗಳು ಅಥವಾ ಪೊಲೀಸರಿಂದ ಹಿಂದುತ್ವದ ರಕ್ಷಣೆ ಸಾಧ್ಯವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಕ್ತಿ ಶಾಂತನಂದ ಮಹರ್ಷಿ, ಡಾ. ಮಹರ್ಷಿ ಆನಂದ್‌ ಗುರೂಜಿ, ಯುವ ಬ್ರಿಗೇಡ್‌ನ‌ ಚಕ್ರವರ್ತಿ ಸೂಲಿಬೆಲೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಭಾಮೈದ

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊ*ಲೆ ಮಾಡಿದ ಭಾಮೈದ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಭಾಮೈದ

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊ*ಲೆ ಮಾಡಿದ ಭಾಮೈದ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

15(1)

Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.