ತಿಂಗಳಾದರೂ ಸಿಗದ ಹಂತಕರ ಸುಳಿವು


Team Udayavani, Oct 6, 2017, 11:47 AM IST

ramalinga-reddy.jpg

ಬೆಂಗಳೂರು: ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿಲಂಕೇಶ್‌ ಹತ್ಯೆ ನಡೆದು ಬುಧವಾರಕ್ಕೆ ಒಂದು ತಿಂಗಳು ಕಳೆದಿದೆ. ಗೌರಿ ಹಂತಕರ ಜಾಡು ಹಿಡಿದು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹಂತಕರ ನಿಖರ ಸುಳಿವು ಇದುವೆರೆಗೂ ಲಭ್ಯವಾಗಿಲ್ಲ.

ಗೌರಿಹಂತಕರನ್ನು ಶೀಘ್ರವಾಗಿ ಬಂಧಿಸಬೇಕು ಎಂದು 100 ಸಿಬ್ಬಂದಿಯನ್ನೊಳಗೊಂಡ ಎಸ್‌ಐಟಿ ತನಿಖಾ ತಂಡ, ಕಳೆದ ಒಂದು ತಿಂಗಳಲ್ಲಿ ಹಲವು  ದೃಷ್ಟಿಕೋನಗಳಲ್ಲಿ ಗೌರಿ ಹಂತಕರ ತನಿಖೆ ಕೈಗೊಂಡಿದೆ. ಹತ್ಯೆಗೆ ಬಳಸಿದ್ದು 7.65 ಎಂ.ಎಂ ನಾಡಪಿಸ್ತೂಲ್‌ ಎಂದು ಪತ್ತೆಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ. ಅದರಂತೆ, ನಾಡಪಿಸ್ತೂಲ್‌ ಸರಬರಾಜಾಗಿರುವ ಮೂಲ ಪತ್ತೆಹಚ್ಚಲು ವಿಜಯಪುರ, ಕಲಬುರಗಿ, ನಕ್ಸಲೈಟ್ಸ್‌ ಸಂಪರ್ಕಗಳನ್ನು ಜಾಲಾಡಿ ಕೆಲವರನ್ನು ವಿಚಾರಣೆಗೊಳಪಡಿಸಿದೆ.

500 ಮಂದಿ ವಿಚಾರಣೆ: ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಗೌರಿ ಲಂಕೇಶ್‌ ಹತ್ಯೆಯನ್ನು ಬೇಧಿಸಲು ತೊಡಗಿಸಿಕೊಂಡ ತನಿಖಾ ತಂಡ, ಇದುವರೆಗೂ 500ಕ್ಕೂ ಹೆಚ್ಚುಮಂದಿಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕಿದೆ. ಗೌರಿ ಲಂಕೇಶ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದವರು, ಭೂಗತ ಲೋಕದ ಹಳೇ ಡಾನ್‌ಗಳು, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಹಿರಿಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ,

ಪತ್ರಕರ್ತ ಚಕ್ರವರ್ತಿ ಚಂದ್ರಚೂಡ, ಮಾಜಿ ನಕ್ಸಲೈಟ್‌ಗಳಾದ ಸಿರಿಮನೆ ನಾಗರಾಜು, ನೂರ್‌ ಶ್ರೀಧರ್‌, ಗೌರಿ ಸಂಬಂಧಿಕರು ಅವರ ಜತೆ ಕೆಲಸ ಮಾಡಿದ ಸಿಬ್ಬಂದಿ, ಗೌರಿ ಮನೆ ಕೆಲಸದವರು, ಫೇಸ್‌ಬುಕ್‌, ಟ್ವೀಟರ್‌ನಲ್ಲಿ ಗೌರಿಯನ್ನು ಟೀಕಿಸಿದವರೂ ಸೇರಿದಂತೆ ಇದುವರೆಗೂ 500ಕ್ಕೂ ಹೆಚ್ಚು ಮಂದಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.

600 ಸಿಸಿಟಿವಿ ಫ‌ೂಟೇಜ್‌ ಪರಿಶೀಲನೆ: ಗೌರಿಹತ್ಯೆ ನಡೆದ ದಿನದಿಂದಲೇ ಗೌರಿನಿವಾಸದ ಸುತ್ತಮುತ್ತಲೂ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳು, ಗೌರಿ ಅವರ ಮನೆ, ಕಚೇರಿ ಸುತ್ತಮುತ್ತಲ ಪ್ರದೇಶಗಳು ಸೇರಿದಂತೆ ಇತರೆಡೆ ಅಳವಡಿಸಿದ್ದ 600ಕ್ಕೂ ಹೆಚ್ಚುಸಿಸಿಟಿವಿ ಫ‌ೂಟೇಜ್‌ಗಳನ್ನು ಪರಿಶೀಲಿಸಿ, ಅದರಲ್ಲಿ ಅನುಮಾನಸ್ಪದ ಬೈಕ್‌ ಮತ್ತು ಕಾರುಗಳನ್ನು ಪತ್ತೆಹಚ್ಚಲಾಗಿದೆ. ದೃಶ್ಯಾವಳಿಗಳಲ್ಲಿ ಕಂಡುಬಂದ ಶಂಕಾಸ್ಪದರ ರೇಖಾಚಿತ್ರಗಳನ್ನು ಬಿಡಿಸಿ ಹಂತಕರ ಬಂಧನಕ್ಕೆ ಎಸ್‌ಐಟಿ ಬಲೆಬೀಸಿದೆ.

ಪ್ರಕರಣದ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಅವರ ಕಚೇರಿ, ವೈಯಕ್ತಿಕ ನಂಬರ್‌ಗಳಿಗೆ ಬಂದ ದೂರವಾಣಿ ಕರೆಗಳು, ಹತ್ಯೆ ನಡೆದ ಎರಡು ಮೂರು ದಿನಗಳ ಹಿಂದೆ ಕಾನ್‌ರೆನ್ಸ್‌ ಕಾಲ್‌ಗ‌ಳ ಮಾಹಿತಿಯನ್ನು ಒಳಗೊಂಡು ಲಕ್ಷಾನುಗಟ್ಟಲೆ ಕರೆ ವಿವರಗಳನ್ನು ಪರಿಶೀಲಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವಿದೆ. ತನಿಖಾ ಹಂತದಲ್ಲಿ ಇತರೆ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಎಸ್‌ಐಟಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಬೇಧಿಸಲು ನಿಯೋಜನೆಗೊಂಡಿರುವ ಎಸ್‌ಐಟಿ, ಹಂತಕರ ಪತ್ತೆಗೆ ಹಗಲಿರುಳು ಶ್ರಮಿಸುತ್ತಿದೆ. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ದೊರೆತಿದೆ. ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ. 
-ರಾಮಲಿಂಗಾರೆಡ್ಡಿ, ಗೃಹಸಚಿವ

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

4-bng

Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.