ಪತ್ನಿ ಹೇಳಿದಕ್ಕೆ ಕೊಂದೆ
Team Udayavani, Jun 27, 2018, 11:52 AM IST
ಬೆಂಗಳೂರು: ನಾನಾಗಿಯೇ ಪತ್ನಿ ಮೇಲೆ ಗುಂಡು ಹಾರಿಸಿಲ್ಲ. ಆಕೆ ಹೇಳಿದಕ್ಕೆ ಗುಂಡು ಹಾರಿಸಿದೆ.
ಇದು, ಇತ್ತೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿ ಮನೆ ಮಾರಾಟ ವಿಚಾರದಲ್ಲಿ ಪತ್ನಿಯನ್ನು ಕೊಂದು, ಇಬ್ಬರು ಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಹಾಸನ ಮೂಲದ ಉದ್ಯಮಿ ಗಣೇಶ್ ಜಯನಗರ ಪೊಲೀಸರಿಗೆ ನೀಡಿರುವ ಹೇಳಿಕೆ.
ಸಕಲೇಶಪುರದ ಆಸ್ತಿಯನ್ನು ಮಾರಾಟ ಮಾಡಿ ನಗರಕ್ಕೆ ಬಂದು ರಿಯಲ್ ಎಸ್ಟೇಟ್, ರೆಸಾರ್ಟ್ ವ್ಯವಹಾರ ನಡೆಸುತ್ತಿದ್ದೆ. ಆರಂಭದಲ್ಲಿ ಉತ್ತಮ ಸಂಪಾದನೆ ಇತ್ತು. ಅದಕ್ಕಾಗಿ 55 ಕೋಟಿ ಸಾಲ ಮಾಡಿಕೊಂಡಿದ್ದೆ.
ಆದರೆ, ಅಂದುಕೊಂಡಂತೆ ಎಲ್ಲವೂ ನಡೆಯಲಿಲ್ಲ ಸಾಲದ ಸುಳಿಗೆ ಸಿಲುಕಿದೆ. ಹೀಗಾಗಿ ಸಾಲಗಾರರು ಮನೆ, ರೆಸಾರ್ಟ್ಗೆ ಬರುತ್ತಿದ್ದರು. ಸಾಲ ತೀರಿಸಲು ಸಾಧ್ಯವಿಲ್ಲ ಎಂದಾಗ, ಆಕೆಯೇ ಮಕ್ಕಳು ಸೇರಿ ಎಲ್ಲರೂ ಸಾಯೋಣ ಎಂದಿದ್ದಳು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.
ಆಕೆ ಹೇಳಿದಕ್ಕೆ ಗುಂಡು ಹಾರಿಸಿ ಕೊಂದೆ. ಬಳಿಕ ಮಕ್ಕಳನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಇದಕ್ಕಾಗಿ ಶಾಲೆಯಲ್ಲಿದ್ದ ಮಕ್ಕಳನ್ನು ಅಮ್ಮ ಕರೆಯುತ್ತಿದ್ದಾಳೆ ಎಂದು ತೋಟದ ಮನೆಗೆ ಕೆರೆದೊಯ್ದೆ.
ಗುಂಡು ಹಾರಿಸಿದೆ. ಮಕ್ಕಳ ನರಳಾಟ ತಾಳಲಾರದೆ ಆಸ್ಪತ್ರೆಗೆ ದಾಖಲಿಸಲು ಹೊರಟಿದ್ದೆ ಆ ವೇಳೆ ಪೊಲೀಸರು ಬಂಧಿಸಿದರು ಎಂದು ವಿಚಾರಣೆ ವೇಳೆ ಹೇಳಿಕೆ ದಾಖಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.