ನಮ್ಮದು ಗರಡಿ ಮನೆ ಕುಸ್ತಿ
Team Udayavani, Jul 7, 2018, 6:00 AM IST
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿಯೇ ಅಸಮಾಧಾನ ಹೊರ ಹಾಕಿದ್ದ ಅತೃಪ್ತರ ನಾಯಕರಾಗಿರುವ ಎಚ್.ಕೆ. ಪಾಟೀಲ್ ಈಗ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು “ಪತ್ರ’ ಸಮರ ಸಾರಿದ್ದಾರೆ. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಕೊಡಿಸಲು ಯಾರೊಂದಿಗಾದರೂ ಕುಸ್ತಿಗಿಳಿಯಲು ಸಿದಟಛಿನಿದ್ದೇನೆಂದು ಹೇಳಿದ್ದಾರೆ. ಈ ಕುರಿತು ಅವರೊಂದಿಗೆ “ಉದಯವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.
ಬಜೆಟ್‌ನಲ್ಲಿ ನಿಜಕ್ಕೂ ಉತ್ತರ ಕರ್ನಾಟಕ ಭಾಗ ನಿರ್ಲಕ್ಷ ಮಾಡಿದ್ದಾರಾ ?
ಬಜೆಟ್ ಪ್ರತಿ ನೋಡಿದರೆ, ಉತ್ತರ ಕರ್ನಾಟಕದ ಯಾರಿಗಾದರೂ ನೋವಾಗುತ್ತದೆ. ನಮ್ಮ ಭಾಗಕ್ಕೆ ಏನಾದರೂ ಇರಬೇಕಲ್ಲ ಎಂಬ ಬಯಕೆ ಇದ್ದೇ ಇರುತ್ತದೆ. ನಮ್ಮ ಪಕ್ಷಕ್ಕೆ ಬಲ ಕೊಟ್ಟವರೇ ಅಲ್ಪ ಸಂಖ್ಯಾತರು. ಅವರ ಬಲ ಇಲ್ಲದಿದ್ದರೆ ಕಾಂಗ್ರೆಸ್ 40 ಶಾಸಕರ ಸಂಖ್ಯೆ ದಾಟುತ್ತಿರಲಿಲ್ಲ. ಹೊಸದೇನನ್ನಾದರೂ ಮಾಡಬೇಕಿತ್ತು ಎನ್ನುವ ನೋವು ನನಗಂತೂ ಇದೆ. ಹೀಗಾಗಿ, ಸಮನ್ವಯ ಸಮಿತಿ ಸಭೆ ಕರೆದು ಚರ್ಚಿಸಿ ಅನ್ಯಾಯ ಸರಿಪಡಿಸುವಂತೆ ಕೋರಿದ್ದೇನೆ.
ಸಾಲ ಮನ್ನಾ ಮಾಡಿರುವುದರಲ್ಲಿ ಎಲ್ಲ ಭಾಗದ ರೈತರಿಗೂ ನ್ಯಾಯ ಸಿಕ್ಕಿಲ್ಲವೇ ?
ಬೆವರು ಸುರಿಸಿ ದುಡಿಯುವ ರೈತರಿಗೆ ಕ್ರಾಂತಿಕಾರಿ ಕಾರ್ಯಕ್ರಮ ಘೋಷಣೆ ಮಾಡಿರುವುದು
ಒಳ್ಳೆಯ ಬೆಳವಣಿಗೆ. ರೈತರಲ್ಲಿ ಜಾತಿ ಹುಡುಕುವುದು ಸಣ್ಣತನವಾಗುತ್ತದೆ. ಅಧಿಕಾರಿಗಳ ಸಂಬಳ ಲಕ್ಷಾಂತರ ರೂ. ಹೆಚ್ಚಾದಾಗ ಯಾರೂ ಮಾತನಾಡುವುದಿಲ್ಲ. ರೈತರು, ಬಡವರು, ಗ್ರಾಮೀಣ ಪ್ರದೇಶಕ್ಕೆ ಅನುಕೂಲ ಮಾಡುವಾಗ ಈ ರೀತಿಯ ಮಾತನಾಡುವರು ಹೆಚ್ಚಾಗುತ್ತಾರೆ.
ಈ ಬಜೆಟ್‌ನಿಂದ ಕಾಂಗ್ರೆಸ್‌ಗೆ ಲಾಭವಾ? ನಷ್ಟವಾ?
ಕೋಮುವಾದಿ ಬಿಜೆಪಿಯನ್ನು ದೂರವಿಡುವ ದೃಷ್ಠಿಯಿಂದ ನಾವು ಸರ್ಕಾರ ರಚಿಸಿರುವುದರಿಂದ ಕಾಂಗ್ರೆಸ್ ಇದರಲ್ಲಿ ಲಾಭ ನಷ್ಟದ ಲೆಕ್ಕ ಹಾಕುವುದಿಲ್ಲ. ಆದರೆ, ಬಜೆಟ್ ಗಮನದಲ್ಲಿಟ್ಟುಕೊಂಡು ಚುನಾವಣೆ ದೃಷ್ಠಿಯಿಂದ ಈಗಿನಿಂದಲೇ ಪಕ್ಷದ ನಾಯಕರನ್ನು ಎಚ್ಚರಿಸುವ ಪ್ರಯತ್ನ ನಡೆಸಿದ್ದೇವೆ.
ಈಗಿನ ಸಂದರ್ಭದಲ್ಲಿ ಎಚ್.ಕೆ. ಪಾಟೀಲರು ಪರ್ಯಾಯ ಶಕ್ತಿಯಾಗಿ ನಿಲ್ಲುತ್ತಾರಾ ?
ಜನರ ಧ್ವನಿಯಾಗಿ ನಿಲ್ಲುತ್ತೇನೆ.
ಯಾರಿಗಾದರೂ ಸೆಡ್ಡು ಹೊಡೆಯುವ ಪರಿಸ್ಥಿತಿ ಬಂದರೆ ?
ಸೆಡ್ಡು ಹೊಡೆಯುವ ವಿಷಯದಲ್ಲಿ ನಾನು ನಮ್ರವಾಗಿ ಯಾವಾಗ ಬೇಕೋ ಆಗ ಸೆಡ್ಡು ಹೊಡೆದಿದ್ದೇನೆ. ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡುವಾಗ ಎಲ್ಲಿಯೂ ರಾಜಿಯಾಗಿ ರಲಿಲ್ಲ. ನಮ್ಮದು ಮ್ಯಾಟ್ ಮ್ಯಾಲಿನ ಕುಸ್ತಿಯಲ್ಲ. ಗರಡಿ ಮನೆಯಲ್ಲಿನ ಕುಸ್ತಿ. ಈಗಿನ ಆಟದಲ್ಲಿ ಕೆಟ್ಟ ಶಕ್ತಿಗಳ ವಿರುದಟಛಿ ಯಾವ ರೀತಿ ಸೆಡ್ಡು ಹೊಡೆಯ ಬೇಕೋ ಆ ರೀತಿ ಸೆಡ್ಡು ಹೊಡೆದು ಕುಸ್ತಿ ಆಡುತ್ತೇನೆ.
ನಿಮ್ಮ ಮುಂದಿನ ಹೋರಾಟ ?
ನಾನು ಉತ್ತರ ಕರ್ನಾಟಕದ ಜನರ ಧ್ವನಿಯೂ ಆಗುತ್ತೇನೆ, ವಕೀಲನೂ ಆಗುತ್ತೇನೆ. ಅವರ ಪರ
ಹೋರಾಟಗಾರನೂ ಆಗುತ್ತೇನೆ. ನಾನು ಅವಕಾಶ ಸಿಕ್ಕಾಗ ಕೃಷ್ಣಾ ಕೊಳ್ಳದ ನೀರು ಬಳಸಿಕೊಳ್ಳಲು ಯೋಜನೆ ರೂಪಿಸಿದ್ದೇನೆ. ಕಳಸಾ ಬಂಡೂರಿ ಯೋಜನೆ ಹುಟ್ಟು ಹಾಕಿದ್ದೇನೆ. ತುಂಗಾ ಮೇಲ್ದಂಡೆ ಯೋಜನೆ ಜಾರಿಗೊಳಿಸಿದ್ದೇನೆ.
ಈ ಹೋರಾಟದಲ್ಲಿ ನೀವು ಏಕಾಂಗಿಯಾ ?
ನೋಡಿ, ಅಂತಹ ಸಂದರ್ಭದಲ್ಲಿ ಸಂಘಟನೆ ಬೇಕಾಗುತ್ತದೆ. ಹತ್ತಾರು ಜನರು ಸೇರಬೇಕಾಗುತ್ತದೆ.
ಆ ರೀತಿಯ ಪ್ರಸಂಗಗಳು ಬಂದರೆ, ಪಕ್ಷದ ಹಿತ ಗಮನದಲ್ಲಿಟ್ಟುಕೊಂಡು ಯಾವ ಹಾದಿ ಅನಿವಾರ್ಯವೋ, ಅಗತ್ಯವೋ ಆ ಕಡೆಗೆ ನಾವು ಗಮನ ಹರಿಸುತ್ತೇವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿರುವುದಕ್ಕೆ ಬೇಸರವಿದೆಯೇ ?
ನಾನು ಕೆಪಿಸಿಸಿ ಅಧ್ಯಕ್ಷ ಆಗುತ್ತೇನೆಂದು ಮಾಧ್ಯಮಗಳಲ್ಲಿ ವರದಿಗಳು ಬಂದಾಗ ಯಾವುದೇ ಅಪಸ್ವರ
ಕೇಳಿ ಬಂದಿಲ್ಲ. ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದರು. ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಸಾಮಾನ್ಯ ಜನರು,ಪಕ್ಷದ ನಾಯಕರು, ಕಾರ್ಯಕರ್ತರ ಪ್ರೀತಿ ದೊರೆತಿದೆ. ಅಧ್ಯಕ್ಷ ಸ್ಥಾನ ಸಿಗದಿರುವುದಕ್ಕೆ ಯಾವುದೇ ಬೇಸರವಿಲ್ಲ.
ನಿಮ್ಮ ರಾಜಕಾರಣ ಇಲ್ಲಿಗೆ ಮುಕ್ತಾಯವಾಯಿತಾ ?
ಗೊಂದಲಮಯ ರಾಜಕೀಯ ಪರಿಸ್ಥಿತಿಯಲ್ಲಿ ಏನೆಲ್ಲಾ ಅವಕಾಶಗಳು ಬರುತ್ತವೆ ಎನ್ನುವುದು ಹೇಳಲು ಸಾಧ್ಯವಿಲ್ಲ. ಅವೆಲ್ಲ ನನ್ನನ್ನು ಆಕರ್ಷಿಸುವುದಿಲ್ಲ. ನಾವು ಮೌಲ್ಯಾಧಾರಿತ ರಾಜಕಾರಣ ಮಾಡುತ್ತೇವೆ. ಹಣ ಬಲ ಅಥವಾ ಅವಕಾಶವಾದಿ ರಾಜಕಾರಣ ಮಾಡುವುದಿಲ್ಲ. ಆದರೆ, ಪಕ್ಷಕ್ಕೆ ನಾವು ಬೇಕು ಎನ್ನುವುದಾದರೆ, ನಾವು ಪಕ್ಷಕ್ಕೆ ಏನು ಸೇವೆ ಮಾಡಿದ್ದೇವೆ. ಅದು ಜನ ಬೆಂಬಲವಾಗಿ ಯಾವಾಗಲೂ ಜೊತೆಯಲ್ಲಿರುತ್ತವೆ. ನಾನು ಅಷ್ಟು ಬೇಗ ನಿರಾಶನಾಗುವುದಿಲ್ಲ.
ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಮೂಲೆಗುಂಪು ಮಾಡಲಾಗುತ್ತಿದೆಯಾ ?
ನಾನು ಅದನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಿಲ್ಲ. ಅಡ್ವಾಣಿಯವರನ್ನು ಮೂಲೆಗುಂಪು ಮಾಡಿ
ದಾಗ ನಾವೇ ಬಹಿರಂಗವಾಗಿ ಮಾತನಾಡಿದ್ದೇವೆ. ಸಂಪುಟ ರಚನೆ ಸಂದರ್ಭದಲ್ಲಿ ಸಮರ್ಥರ ಆಯ್ಕೆ ಆಗಿಲ್ಲ ಎನ್ನುವುದು ಸ್ಪಷ್ಟ.
ನಿಮಗೆ ಸರ್ಕಾರ ಮತ್ತು ಪಕ್ಷದಲ್ಲಿ ಯಾವುದೇ ಸ್ಥಾನಮಾನ ಇಲ್ಲವಲ್ಲ ?
ಸಂಪುಟ ವಿಸ್ತರಣೆ ನಂತರ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ನಾನು ಹಾಗೂ ನನ್ನ ಜತೆ ಬಂದ ಶಾಸಕರು ನಡೆದುಕೊಂಡಿದ್ದೇವೆ. ನಮ್ಮ ಅನಿಸಿಕೆಗಳ ಬಗ್ಗೆ ರಾಹುಲ್ ಗಾಂಧಿ ಜತೆ ಮಾತನಾಡಿದಾಗ ವಿಶ್ವಾಸ ಕುದುರಿಸುವ ಮಾತುಕತೆ ನಡೆಯಿತು. ನಮ್ಮ ಅತೃಪ್ತ ಶಾಸಕರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿ ಈಶ್ವರ್ ಖಂಡ್ರೆಗೆ ಅವಕಾಶ ಕೊಟ್ಟಿದ್ದಾರೆ. ನಮ್ಮ ಭಾವನೆಗಳಿಗೆ ಸ್ಪಂದಿಸುವ ಕೆಲಸ ಆರಂಭಿಸಿದ್ದಾರೆ ಎಂದುಕೊಂಡಿದ್ದೇವೆ.
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Kodagu; ದೇವಸ್ಥಾನ ಪ್ರವೇಶ ನಿರಾಕರಣೆ: ವಿವಿಧೆಡೆ ಕೊಡವರಿಂದ ರಸ್ತೆ ತಡೆ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Contracter Case: ಸಚಿನ್ ಪಾಂಚಾಳ್ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.